ಜಗತ್ತಿಗೆ ಕೊರೊನಾ ಚಿಂತೆಯಾದರೆ ಪೋಸ್ಟ್ ಕಾರ್ಡ್ ಕನ್ನಡಕ್ಕೆ ಕಾಂಗ್ರೆಸ್ ಚಿಂತೆಯಾಗಿದೆ. ಹಾಗಾಗಿ ಅದು ಕಾಂಗ್ರೆಸ್ ಕುರಿತು, ಅದರ ಮುಖ್ಯಸ್ಥರ ಕುರಿತು ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ನಿರತವಾಗಿದೆ.
ಇಂದು ಇದೇ ಪೋಸ್ಟ್ ಕಾರ್ಡ್ ಕನ್ನಡ ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸಿದೆ. ಅದು ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತೆ ರಾಜಕಾರಣಿ ಎಂದು ವ್ಯಾಖ್ಯಾನಿಸಿದೆ. ಇದೇ ವೆಬ್‌ಸೈಟ್ ಈ ಹಿಂದೆ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆ ಎಂದು ಪೋಸ್ಟರ್ ಮಾಡಿ ಹಂಚಿತ್ತು.


ಜೊತೆಗೆ ಸಪೋರ್ಟ್ ಮೋದಿಜಿ ಅಂಡ್ ಬಿಜೆಪಿ ಎಂಬ ಇಂಗ್ಲಿಷ್ ಪೇಜ್‌ನಲ್ಲಿಯೂ ಇದೇ ಸುದ್ದಿ ಹರಿದಾಡಿದೆ. ಆಜ್ ತಕ್, ಒನ್‌ಇಂಡಿಯಾ, ದೈನಿಕ್ ಭಾಸ್ಕರ್ ಮತ್ತು ಸ್ವರಾಜ್ ನ್ಯೂಸ್‌ನಂತಹ ಚಾನೆಲ್‌ಗಳು ‘ವಿಶ್ವದ ನಾಲ್ಕನೇ ಶ್ರೀಮಂತ ಮಹಿಳಾ ರಾಜಕಾರಣಿ’ ಎಂದು ಸುದ್ದಿ ಮಾಡಿವೆ.
ಈ ರೀತಿಯ ಸುದ್ದಿ ಕಳೆದ ಹಲವು ವರ್ಷಗಳಿಂದ ವೈರಲ್ ಆಗಿದೆ. ಈ ಕುರಿತು ನಾನುಗೌರಿ.ಕಾಂ ಫ್ಯಾಕ್ಟ್ ಚೆಕ್ ನಡೆಸಿದೆ.
ಫ್ಯಾಕ್ಟ್ ಚೆಕ್
ಸತ್ಯ: ಸೋನಿಯಾ ಗಾಂಧಿ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆ ಎಂಬುದು ಅಪ್ಪಟ ಸುಳ್ಳು. 2019ರ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಿದ್ದಾಗ ತಮ್ಮ ಬಳಿ 11.82 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.
ಗೂಗಲ್‌ನಲ್ಲಿ ಪ್ರಪಂಚದ ಶ್ರೀಮಂತ ಮಹಿಳೆಯರ ಪಟ್ಟಿ ಪರಿಶೀಲಿಸಿದರೆ ಗೊತ್ತಾಗಿಬಿಡುತ್ತದೆ ಅವರು ಆ ಪಟ್ಟಿಯಲ್ಲಿಲ್ಲ ಎಂದು. ಹೋಗಲಿ ‘ವಿಶ್ವದ ನಾಲ್ಕನೇ ಶ್ರೀಮಂತ ಮಹಿಳಾ ರಾಜಕಾರಣಿ’ ಆಗಿದ್ದಾರ ಎಂದು ಚೆಕ್ ಮಾಡಿದರೆ ಅದು ಸಹ ಅಪ್ಪಟ ಸುಳ್ಳು ಸುದ್ದಿ. ಈ ಸುಳ್ಳನ್ನು ಮೊದಲು 2012ರಲ್ಲಿ ಪ್ರಕಟಿಸಿದ ಅಮೆರಿಕಾದ ಬಿಸಿನೆಸ್ ಇನ್‌ಸೈಡರ್ ಪತ್ರಿಕೆಯು ಸೋರ್ಸ್ ಎಂದು ‘World’s Luxury Guide’ ಅನ್ನು ಹೆಸರಿಸಿದೆ. ಅದರ ಮೂಲ ಹುಡುಕಿದರೆ ಆ ವೆಬ್‌ಸೈಟ್ ನಾಟ್ ಫಂಡ್ ಎಂದು ಬರುತ್ತಿದೆ.



ಈ ಬಿಸಿನೆಸ್ ಇನಸೈಡರ್ ಸೋರ್ಸ್ ಎಂದು ಫೋರ್ಬ್ಸ್, ದಿ ಗಾರ್ಡಿಯನ್, ಬ್ಲೂಮ್‌ಬರ್ಗ್, ಓಪನ್ ಸಿಕ್ರೇಟ್ ಎಂದು ಹೆಸರಿಸಿದೆ.
ಫೋರ್ಬ್ಸ್ 2011 ರಲ್ಲಿ ಒಂದು ಲೇಖನವನ್ನು ಪ್ರಕಟಿಸಿತ್ತು – ‘ಭಾರತದ 100 ಶ್ರೀಮಂತರು’ – ಇದರಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ಒಳಗೊಂಡಿಲ್ಲ. 2012 ರಲ್ಲಿ, ದಿ ಗಾರ್ಡಿಯನ್ ವಿಶ್ವದ ಶ್ರೀಮಂತ ನಾಯಕರ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಆದರೆ, ಇಲ್ಲಿಯೂ ಕೂಡ ಸೋನಿಯಾ ಗಾಂಧಿಯವರ ಹೆಸರನ್ನು ಒಳಗೊಂಡಿಲ್ಲ. ಬ್ಲೂಮ್‌ಬರ್ಗ್‌ನಲ್ಲಿ ಹುಡುಕಿದರೂ ಈ ಬಗ್ಗೆ ವರದಿಯಾಗಿದ್ದು ಕಂಡುಬಂದಿಲ್ಲ. ಬಿಸಿನೆಸ್ ಇನ್ಸೈಡರ್ ಒದಗಿಸಿದ ಉಳಿದ ವೆಬ್ ಸೈಟ್‌ಗಳು – ಓಪನ್ ಸಿಕ್ರೆಟ್ ಸಹ ಹಾಲಿ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಯಾವುದೇ ವರದಿಯನ್ನು ಬರೆದಿಲ್ಲ.
ಬಿಸಿನೆಸ್ ಇನ್ಸೈಡರ್ (ಮತ್ತು ‘ವರ್ಲ್ಡ್ಸ್ ಐಷಾರಾಮಿ ಗೈಡ್’) ನಂಬಬಹುದಾದ ಮೂಲವಲ್ಲ ಎಂಬುದು ಹೀಗೆ ಸ್ಪಷ್ಟವಾಯಿತು.
ಸೋನಿಯಾ ಗಾಂಧಿಯವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಅವರ ರಾಜಕೀಯ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂಬುದು ಮಾತ್ರ ಸತ್ಯವಾಗಿದೆ.
ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು


