Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

ಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

- Advertisement -
- Advertisement -

ಷಿಕಾರಿಪುರದಲ್ಲಿದ್ದಿರಬಹುದಾದ ಚಾವುಂಡರಾಯನ ಕಾಲ ಪ್ರಾಯಶಃ ಶಕ 969 ಕ್ರಿ. ಶ. 1042. ಈತ ರಚಿಸಿರುವ ಗ್ರಂಥದ ಹೆಸರೇ ಲೋಕೋಪಕಾರಂ. ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಕೆತ್ತಿಸಿದ ಚಾವುಂಡರಾಯನಿಗೂ ಮತ್ತು ಲೋಕೋಪಕಾರಂ ಗ್ರಂಥದ ಕರ್ತೃವಿಗೂ ಏನೂ ಸಂಬಂಧವಿಲ್ಲ. ಈತನ ಹೆಸರನ್ನು ಕೇಳಿ ಬಹುಶಃ ಜೈನ ಮತಸ್ಥನಿರಬೇಕೆಂದುಕೊಂಡರೆ ಅದೂ ಅಲ್ಲ. ಈತ ಸಕಲ ವಿದ್ಯಾ ಸಂಪನ್ನ ಬ್ರಾಹ್ಮಣ.

ಇನ್ನು ಈ ಶೀರ್ಷಿಕೆಯ ಪ್ರಕಾರ ಲೋಕ ಎಂದರೆ ಭೌತಿಕವಾದ ಜಗತ್ತಲ್ಲ. ಜನರೆಂದು ಅರ್ಥ. ಜನೋಪಕಾರ ಎನ್ನುವುದನ್ನೇ ಲೋಕೋಪಕಾರ ಎನ್ನುತ್ತಿದ್ದಾರೆ ಈ ಕರ್ತೃ.

ಈ ಭೂಮಂಡಲದಲ್ಲಿ ಜನ್ಮಿಸಿದ ಸಮಸ್ತ ಪ್ರಾಣಿಗಳಿಗೂ ಸುಖವು ಬೇಕು. ಹಾಗಾಗಿ ಜನರಿಗೆ ಸುಖವನ್ನು ಉಂಟುಮಾಡುವ ಸಮಸ್ತ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

ಯಾವುದಪ್ಪಾ ಆ ವಿಷಯಗಳೆಂದರೆ, ವೃಕ್ಷಾರ್ಯುವೇದ, ಸೂಪಶಾಸ್ತ್ರ, ಪಶುಗಳಿಗೆ ವೈದ್ಯ, ಬಾಲ ವೈದ್ಯ, ಅಶ್ವ ವೈದ್ಯ, ಗಜವೈದ್ಯ, ನರಾದಿವೈದ್ಯ, ವಿಷವೈದ್ಯ, ಲೈಂಗಿಕ ಸಮಸ್ಯೆ, ಕೃಷಿ, ಪಶು ಸಾಕಣೆ, ಮನೆ ಮದ್ದು, ಜ್ಯೋತಿಷ್ಯ, ಶಕುನಗಳು; ಹೀಗೆ ಆ ಕಾಲಘಟ್ಟದಲ್ಲಿ ಜನರು ತಮ್ಮ ಸುಖಾನ್ವೇಷಣೆಯಲ್ಲಿ ಏನೇನಲ್ಲಾ ಅನುಸರಿಸುತ್ತಿದ್ದರೋ ಅಥವಾ ಅವಲಂಬಿಸುತ್ತಿದ್ದರೋ ಆ ವಿಷಯಗಳನ್ನೆಲ್ಲಾ ಈ ಪುಸ್ತಕವು ಒಳಗೊಂಡಿದೆ.

ಪುಸ್ತಕವು ಆಸಕ್ತಿಯಿಂದ ಕೂಡಿರುವುದೇಕೆಂದರೆ, ಆ ಕಾಲಘಟ್ಟದಲ್ಲಿ ಜನರು ಸಾಮಾನ್ಯವಾಗಿ ಪರಿಗಣಿಸುತ್ತಿದ್ದ ಮತ್ತು ಶ್ರದ್ಧೆಯನ್ನು ತೋರುತ್ತಿದ್ದ ವಿಷಯಗಳನ್ನೆಲ್ಲಾ ಬರಹಗಾರ ದಾಖಲು ಮಾಡಿದ್ದಾರೆ. ಆ ಜನರ ನಂಬಿಕೆಗಳು, ಆಸಕ್ತಿಗಳು, ಅಗತ್ಯಗಳು, ಅಭಿರುಚಿಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಉದಾಹರಣೆಗೊಂದು ನೋಡಿ, “ಒಂದೆಲದ, ಹೊನಗನ್ನೆ, ಅಮರ್ದುವಳ್ಳಿ, ಕೊಳುಗುಳಿಕೆ ಈ ಔಷಧಿಗಳಲ್ಲಿ ದೊರಕಿದ ಒಂದೊಂದರ ರಸಮಂ ಕೊಂಡು ಸಕ್ಕರೆಯಂ ಬೆರಸಿ ಕುಡಿಸಿದಡೆ ಪಿತ್ತಂ ಕಿಡುವುದು.”

ಪಿತ್ತ ಕಳಕೊಂಡರಾ, ಇನ್ನು ನಿಮ್ಮ ಮುಖವು ಚಂದ್ರನ ಕಾಂತಿಯಲ್ಲಿ ಹೊಳೆಯಬೇಕಾದರೆ, “ಜವೆ, ಕೋಷ್ಠಂ, ಲೋಧ್ರಂ ಇವುರೊಳಗೆ ಆವುದೊಂದು ದ್ಕೊರಕಿದುದಂ ಕೊಂಡು ಉದಕದಲ್ಲರೆದು ಮುಸುಡಂ ಪೂಸಲ್ ಮುಸುಡು ಚಂದ್ರನ ಮರ್ಯಾದೆಯಲ್ಲಿ ಕಾಂತಿಯಪ್ಪುದು – ಬೇಗಮಪ್ಪುದು.”

ಫೇರ್ ಅಂಡ್ ಲೌವ್ಲೀ ಜಾಹಿರಾತಿನಂತೆ ಇಲ್ಲಿ ಚಾವುಂಡರಾಯರೂ ಆಶ್ವಾಸನೆ ಕೊಡುತ್ತಾರೆ “ಬೇಗಮಪ್ಪುದು” ಎಂದು.

ಅತ್ಯಂತ ಕುತೂಹಲಕರವಾದ ವಿಷಯಗಳೆಂದರೆ ಭೂಮಿಯ ಮೇಲ್ಭಾಗವನ್ನು ನೋಡಿ, ಅಲ್ಲಿರುವ ಗಿಡಗಳು, ಮರಗಳು ಯಾವುವು, ಹೇಗೆ ಬೆಳೆದಿವೆ ಎಂಬುದನ್ನೆಲ್ಲಾ ನೋಡಿ, ಬಾವಿ ತೋಡಲು ನೀರಿನ ನೆಲೆಯನ್ನು ಪತ್ತೆ ಹಚ್ಚುವುದು.

ತರಾವರಿ ಸುಗಂಧಗಳ ಗಟ್ಟಿಯಾದ ಮೊಸರು ಮಾಡುವುದು, ಕಡಿಮೆ ವಸ್ತುಗಳನ್ನು ಬಳಸಿ ಅಡಿಗೆಯನ್ನು ರುಚಿಕರವಾಗಿ ಮಾಡುವುದು, ತರಕಾರಿಗಳನ್ನು, ಹಣ್ಣುಗಳನು ಗುರುತಿಸುವ ಬಗೆ ಇತ್ಯಾದಿಗಳನ್ನೆಲ್ಲಾ ವಿವರಿಸಿದ್ದಾರೆ.

ಪ್ರಾಣಿಗಳ ಮೇಲಿನ ದಯೆ, ಗಿಡಗಳನ್ನು ಗುರುತಿಸುವುದು, ಕೃಷಿಗೆ ಅಗತ್ಯ ಸಲಹೆ; ಹೀಗೆ ಎಲ್ಲಾ ವಿಷಯಗಳಲ್ಲೂ ಪಾರಂಗತರಾಗದಿದ್ದರೂ ತಕ್ಷಣಕ್ಕೆ ಒಂದಿಷ್ಟುಮಾಹಿತಿಯನ್ನು ಪಡೆದುಕೊಂಡು ಕೆಲಸಕ್ಕೆ ತೊಡಗಲು ಸಾಧ್ಯವಾಗುವ ಹಾಗೆ ವಿಷಯಗಳು ಹೆಣೆಯಲ್ಪಟ್ಟಿವೆ. ಒಂದು ಮನೆ ಎಂದರೆ ತಕ್ಷಣಕ್ಕೆ ಏನಾದರೂ ಜ್ವರ, ಗಾಯ, ಅಥವಾ ವಿಷ ಸೇವನೆ ಎಂತಾದರೂ ಆಗಿಬಿಡಬಹುದು. ಅದಕ್ಕೆ ಈ ಪುಸ್ತಕ ಮನೆಗಳಲ್ಲಿರಬೇಕು ಎಂಬುದು ಗ್ರಂಥಕರ್ತನ ಆಶಯ.

ಗೃಹಸಂಗಾತಿ ಎಂಬ ಪುಸ್ತಕವೊಂದು ಆಧುನಿಕ, ಸರಳ ಕನ್ನಡದಲ್ಲಿದೆ. ಅದೂ ಕೂಡಾ ಹೀಗೆಯೇ. ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲೊಬ್ಬರು ಈ ಆಲೋಚನೆ, ಆಶಯದಲ್ಲಿ ಒಂದು ಗ್ರಂಥ ರಚನೆ ಮಾಡಿರುವುದು ನಿಜಕ್ಕೂ ವಿಶೇಷ. ಪುಸ್ತಕವನ್ನು ಓದುತ್ತಿದ್ದರೆ ಆ ಜನರ ಆಸಕ್ತಿ, ಅಭಿರುಚಿ, ಚಾತುರ್ಯಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಈ ಪುಸ್ತಕದ ಸಂಪಾದಕರು ಹೆಚ್ ಶೇಷ ಅಯ್ಯಂಗಾರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...