Homeಮುಖಪುಟಪಿಎಂ ಕೇರ್ಸ್‌, ಕಾರ್ಪೋರೇಟ್‌ ಜವಾಬ್ದಾರಿಯ CSR ಮತ್ತು ಖಾಸಗಿ ಲಾಬಿ: ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವೆ

ಪಿಎಂ ಕೇರ್ಸ್‌, ಕಾರ್ಪೋರೇಟ್‌ ಜವಾಬ್ದಾರಿಯ CSR ಮತ್ತು ಖಾಸಗಿ ಲಾಬಿ: ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವೆ

ಕಳೆದ ವರ್ಷ ಕೇವಲ ಈ 10 ಕಂಪೆನಿಗಳು ಈ ದೇಶದಲ್ಲಿ ಗಳಿಸಿರುವ ಲಾಭದ ಪ್ರಮಾಣ ಮಾತ್ರ 223.2 ಬಿಲಿಯನ್ ಡಾಲರ್. ಅಂದರೆ ಉಳಿದ ಕಂಪೆನಿಗಳ ಲಾಭವೂ ಸೇರಿದಂತೆ ಒಂದು ವರ್ಷಕ್ಕೆ CSR FUND ಅಡಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಸಂಗ್ರಹವಾಗಬೇಕಾದ ಹಣ ಎಷ್ಟು?

- Advertisement -
- Advertisement -

ಕೊರೋನಾ ವೈರಸ್ ದೇಶದಲ್ಲಿ ಭೀತಿಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪಿಎಂ ಕೇರ್ಸ್ (PM CARES) ಮತ್ತು CSR ಸಾಕಷ್ಟು ಸುದ್ದಿ ಮಾಡುತ್ತಿವೆ. ಅಸಲಿಗೆ ದೇಶದಲ್ಲಿ ಎಲ್ಲೇ ಪ್ರಕೃತಿ ವಿಕೋಪಗಳು ಸಂಭವಿಸಿದರೂ ಸಹ ದೇಣಿಗೆ ಸಂಗ್ರಹಿಸಲು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಪರಿಹಾರ ನಿಧಿ ಇದೆ. ಕಳೆದ ವರ್ಷ ಕನಾಟಕ ಮತ್ತು ಕೇರಳದಲ್ಲಿ ದೊಡ್ಡ ಮಟ್ಟದ ಪ್ರವಾಹ ಆಗಿದ್ದಾಗ ಸಾಕಷ್ಟು ಜನ ಇದಕ್ಕೆ ದೇಣಿಗೆ ನೀಡಿದ್ದರು. ಈ ಹಣವನ್ನು ಪರಿಹಾರ ಕಾರ್ಯಕ್ಕೆ ಬಳಸಲಾಗಿತ್ತು. ಆದರೂ PM CARES ಅಗತ್ಯ ಏನಿತ್ತು? ಇದು ಮೂಲ ಪ್ರಶ್ನೆ.

ಪ್ರಧಾನಿ ನರೇಂದ್ರ ಮೋದಿ PM CARES ಆರಂಭಿಸುತ್ತಿದ್ದಂತೆ ಈ ವರೆಗೆ 10,000 ಕೋಟಿಗೂ ಹೆಚ್ಚು ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ. ಆದರೆ, ಕೊರೋನಾದಿಂದ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಗಳ ನಿಧಿಗೆ ಹರಿದುಬಂದಿರುವ ಹಣ ತೀರಾ ಅಲ್ಪ. ಸಿಎಂ ಯಡಿಯೂರಪ್ಪ ಮನವಿ ಮಾಡಿ ಎರಡು ತಿಂಗಳ ಅವಧಿಯಲ್ಲಿ ಈ ವರೆಗೆ ಸಿಎಂ ಪರಿಹಾರ ನಿಧಿಗೆ ಸಂಗ್ರಹವಾಗಿರುವ ಹಣ ಕೇವಲ 138 ಕೋಟಿ. ಇನ್ನೂ ಆರ್ಥಿಕ ರಾಜಧಾನಿ ಮಹಾರಾಷ್ಟ್ರದಲ್ಲಿ ಸಂಗ್ರಹವಾಗಿರುವ ಹಣ ಕೇವಲ 247 ಕೋಟಿ ಮಾತ್ರ.

ಅಸಲಿಗೆ ಕೇಂದ್ರ ಸರ್ಕಾರದ PM CARES ಗೆ ಈ ಪ್ರಮಾಣದ ಹಣ ಹರಿದು ಬರಲು ಪ್ರಮುಖ ಕಾರಣ CSR ಫಂಡ್ ಅಂದರೆ ಕಾರ್ಪೋರೇಟ್ ಕಂಪೆನಿಗಳು ನೀಡಿರುವ ದೇಣಿಗೆ ರೂಪದ ಹಣ. ಈ ದೇಶದ ನೆಲ-ಜಲ ಮತ್ತು ಸಂಪನ್ಮೂಲವನ್ನು ಬಳಸುವ ಎಲ್ಲಾ ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭದ ಕನಿಷ್ಟ ಶೆ.2 ರಷ್ಟು ಹಣವನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸಮಾಜದ ಕೆಲಸಕ್ಕೆ ನೀಡಲೇಬೇಕು ಎನ್ನುತ್ತದೆ ಕಾನೂನು.

ಆದರೆ, ಈ ಹಣವನ್ನು ಇದೀಗ ರಚಿಸಲಾಗಿರುವ PM CARES ಗೆ ಮಾತ್ರ ನೀಡಲು ಸಾಧ್ಯ. ರಾಜ್ಯ ಸರ್ಕಾರಗಳಿಗೆ ಈ ಹಣ ನೀಡಲು ಸಾಧ್ಯವಿಲ್ಲದಂತೆ ತಿದ್ದುಪಡಿ ಮಾಡಲಾಗಿದೆ. ಪರಿಣಾಮ ರಾಜ್ಯಗಳ ಪಾಲಿಗೆ ಇತ್ತ ನ್ಯಾಯಯುತವಾಗಿ ಸಿಗಬೇಕಾದ ಜಿಎಸ್ಟಿ ಪಾಲು ಇಲ್ಲ, ಅತ್ತ ರಾಜ್ಯ ನಿಧಿಗೆ ಹರಿದು ಬರಬೇಕಾದ ಹಣವೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಏನಿದು CSR FUND? ಈ ಕುರಿತು ಕಾನೂನು ಏನು ಹೇಳುತ್ತದೆ? ಕಾರ್ಪೋರೇಟ್ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಎಂದರೆ ಏನು? ಭಾರತದಲ್ಲಿ ಒಟ್ಟು ಒಂದು ವರ್ಷಕ್ಕೆ ಸಂಗ್ರಹವಾಗುವ CSR FUND ಹಣ ಎಷ್ಟು? ಈ ಹಣವನ್ನು ಯಾವುದಕ್ಕೆಲ್ಲಾ ಬಳಸಬಹುದು? ಹೀಗೆ ಸಾಕಷ್ಟು ಅಂಶಗಳನ್ನೂ ಇಲ್ಲಿ ಕೂಲಂಕುಷವಾಗಿ ತಿಳಿಸುವ ಪ್ರಯತ್ನ ನಡೆಸಲಾಗಿದೆ.

ಕಾರ್ಪೋರೇಟ್ ಜಗತ್ತು

ಕಾರ್ಪೊರೇಟ್ ಪ್ರಸ್ತುತ ಇಡೀ ಜಗತ್ತನ್ನು ಆಳ್ವಿಕೆ ಮಾಡುತ್ತಿರುವ ನೂತನ ವಸಾಹತುಶಾಹಿ ವ್ಯವಸ್ಥೆ (new colonial system). ಇಂದು ಇಡೀ ವಿಶ್ವವನ್ನು ಈ ಹೊಸ ವ್ಯವಸ್ಥೆ ಪರೋಕ್ಷವಾಗಿ ಆಳ್ವಿಕೆ ನಡೆಸುತ್ತಿದೆ. ಒಂದರ್ಥದಲ್ಲಿ ಶಬ್ಧವಿಲ್ಲದ ಯುದ್ಧ ನಡೆಯುತ್ತಿದೆ. 1992ರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಮುಕ್ತ ಆರ್ಥಿಕ ವ್ಯವಸ್ಥೆಗೆ ಅಂಗೀಕಾರ ನೀಡಿದ ನಂತರ ಇಂತಹ ನೂತನ ವಸಾಹತುಶಾಹಿಗೆ ಭಾರತವೂ ಹೊರತಾಗಿಲ್ಲ.

ವಿದೇಶಿ ನೇರ ಬಂಡವಾಳ ಹೂಡಿಕೆಯ ಅಡಿಯಲ್ಲಿ ಇಂದು ಭಾರತದಲ್ಲಿ ನೂರಾರು ವಿದೇಶಿ ಕಂಪೆನಿಗಳು ಬಂಡವಾಳ ಹೂಡಿವೆ. ದೊಡ್ಡ ದೊಡ್ಡ ಕಂಪೆನಿಗಳನ್ನು-ಕಾರ್ಖಾನೆಗಳನ್ನು ಆರಂಭಿಸಿವೆ. ಅಲ್ಲದೆ, ಇಲ್ಲಿನ ನೆಲ-ಜಲ ಮತ್ತು ಸಂಪನ್ಮೂಲಗನ್ನು ಬಳಸಿ ಸಾವಿರಾರು ಕೋಟಿ ಹಣವನ್ನು ಲಾಭವಾಗಿ ಗಳಿಸುತ್ತಿವೆ. ಆದರೆ, ಹೀಗೆ ಲಾಭ ಗಳಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ಹತ್ತಾರು ಜವಾಬ್ದಾರಿಗಳೂ ಇವೆ.

ಮುಕ್ತ ಆರ್ಥಿಕತೆಯ ಅಡಿಯಲ್ಲಿ ಭಾರತ ಯಾವ ದೇಶದಲ್ಲಿ ಬಂಡವಾಳ ಹೂಡಿದೆ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಭಾರತದಲ್ಲಿ ಬಂಡವಾಳ ಹೂಡಲು ಮುಂದಾಗುವ ವಿದೇಶಿ ಕಂಪೆನಿಗಳಿಗೇನು ಕೊರತೆ ಇಲ್ಲ. ಇಲ್ಲಿನ ಸಂಪನ್ಮೂಲಗಳನ್ನು ಅನುಭವಿಸುತ್ತಿರುವ ಕಾರ್ಪೊರೇಟ್ ಕಂಪೆನಿಗಳು ಈ ನೆಲದ ಸಾಮಾಜಿಕ ಜವಾಬ್ದಾರಿಯನ್ನೂ ಹೊರಬೇಕು ಎಂಬುದು ಪ್ರಜಾಪ್ರಭುತ್ವ ಸಮಾಜವಾದಿ ಜಾತ್ಯಾತೀತ ಗಣರಾಜ್ಯ ದೇಶದ ಕಾನೂನು ಅಥವಾ ಆಶಯ ಹೇಳುತ್ತದೆ.

ಇದನ್ನೇ ಆಧಾರವಾಗಿಟ್ಟುಕೊಂಡು ದೇಶದಲ್ಲಿ ಹೊಸದಾಗಿ ರಚಿಸಲಾದ ಶಾಸನವೇ “ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ” ಶಾಸನ. ಅಸಲಿಗೆ ಈ ಶಾಸನದ ಉದ್ದೇಶ-ಆದರ್ಶಗಳೇನು? ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಜವಾಬ್ದಾರಿ-ಕರ್ತವ್ಯಗಳೇನು? ನಿಜಕ್ಕೂ ಈ ಶಾಸನ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ? ನೋಡೋಣ ಬನ್ನಿ

ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ (CSR)

ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ ದಶಕಗಳಿಂದ ಇದೆಯಾದರೂ ಇದಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಅಥವಾ ಇದನ್ನು ಪರಿಣಾಮಕಾರಿಯಾಗಿ ಪಾಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿತ್ತು ಎನ್ನಬಹುದು. Corporate Social Responsibility (CSR) ಅರ್ಥಾತ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನೋಪಕಾರಿ ಚಟುವಟಿಕೆಯ ರೂಪದಲ್ಲಿದ್ದು ಅಷ್ಟಾಗಿ ಚರ್ಚೆಗೆ ಒಳಗಾಗದ ವಿಷಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಸ್ವರೂಪ ಬದಲಾಗಿದೆ.

ಈ ಶಾಸನ ನೆಪಮಾತ್ರಕ್ಕೆ ಇದ್ದಾಗ್ಯೂ 2014 ಫೆಬ್ರವರಿ 27 ರಂದು ಪ್ರಕಟಗೊಂಡ ಹೊಸ Companies ACT ಈ ಶಾಸನಕ್ಕೆ ಮತ್ತಷ್ಟು ಬಲ ತಂದಿತ್ತು. ಈ Companies ACT 2013 ಸೆಕ್ಷನ್ 35 ಭಾರತದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು.

ಈ ಶಾಸನ 2014ರ ಏಪ್ರಿಲ್ ಮೊದಲ ದಿನದಿಂದ ಜಾರಿಗೆ ಬಂದಿದೆ. ಇದರ ಪ್ರಕಾರ 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬಂಡವಾಳ ಹೊಂದಿರುವ-ವಾರ್ಷಿಕ 1000 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ ಮತ್ತು ವಾರ್ಷಿಕ 5 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವ ಕಂಪೆನಿಗಳು ತಮ್ಮ ನಿವ್ವಳ ಲಾಭದ ಶೇ.2ರಷ್ಟು ಹಣವನ್ನು CSR ಚಟುವಟಿಕೆಗಳಿಗೆ ವ್ಯಯಿಸಬೇಕು. ಅಲ್ಲದೆ, ಇದಕ್ಕಾಗಿ ಕಂಪೆನಿಯ ಆಡಳಿತ ಮಂಡಳಿಯು ಕನಿಷ್ಟ ಓರ್ವ ಸ್ವತಂತ್ರ್ಯ ನಿರ್ದೇಶಕರೂ ಸೇರಿದಂತೆ ಮೂರು ಅಥವಾ ಹೆಚ್ಚಿನ ನಿರ್ದೇಶಕರನ್ನೊಳಗೊಂಡ CSR ಕಮಿಟಿಯನ್ನು ನೇಮಿಸಬೇಕು ಎನ್ನುತ್ತದೆ ಈ ಶಾಸನ.

ಏನಿದು CSR ಚಟುವಟಿಕೆ?

ಭಾರತದಲ್ಲಿ ನೂರಾರು ಕಾರ್ಪೊರೇಟ್ ಕಂಪೆನಿಗಳು ಇವೆ. ಈ ಪೈಕಿ ಕಳೆದ ವರ್ಷ ಅತಿಹೆಚ್ಚು ಲಾಭ ಗಳಿಸಿದ TOP-10 ಕಂಪೆನಿಗಳ ಪಟ್ಟಿಯನ್ನು ಸ್ವತಃ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ ಕಳೆದ ವರ್ಷ ಕೇವಲ ಈ 10 ಕಂಪೆನಿಗಳು ಈ ದೇಶದಲ್ಲಿ ಗಳಿಸಿರುವ ಲಾಭದ ಪ್ರಮಾಣ ಮಾತ್ರ 223.2 ಬಿಲಿಯನ್ ಡಾಲರ್. ಅಂದರೆ ಉಳಿದ ಕಂಪೆನಿಗಳ ಲಾಭವೂ ಸೇರಿದಂತೆ ಒಂದು ವರ್ಷಕ್ಕೆ CSR FUND ಅಡಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಸಂಗ್ರಹವಾಗಬೇಕಾದ ಹಣ ಎಷ್ಟು? ಎಂಬುದನ್ನು ನೀವೆ ಊಹಿಸಿಕೊಳ್ಳಿ.

ಹೀಗೆ ಸಂಗ್ರಹವಾಗುವ ಹಣವನ್ನು ದೇಶದ ಶಿಕ್ಷಣ, ವೈದ್ಯಕೀಯ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಬೇಕು ಎಂಬುದನ್ನೂ ಸಹ ಈ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಲಾಭದಿಂದ ಸಂಗ್ರಹಿಸುವ ಶೇ.2 ರಷ್ಟು ಹಣದಲ್ಲಿ ಇಡೀ ದೇಶದಲ್ಲಿರುವ ಎಲ್ಲಾ ಸರ್ಕಾರ ಶಾಲೆಗಳನ್ನು ಹೊಸದಾಗಿ ನಿರ್ಮಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬಹುದು, ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರೂ ನಾಚುವಂತೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಬಹುದು ಎನ್ನುತ್ತವೆ ಅಂಕಿಅಂಶಗಳು. ಆದರೆ, ಇವೆಲ್ಲಾ ಈ ದೇಶದಲ್ಲಿ ಸಾಧ್ಯವಾಗಿದೆಯಾ? ಎಂದು ಹುಡುಕುತ್ತಾ ಹೋದರೆ ಹತ್ತಾರು ಹುಳುಕುಗಳು ಕಾಣಿಸಿಕೊಳ್ಳುತ್ತವೆ.

ಕಾರ್ಪೊರೇಟ್ ಸಾಲಮನ್ನಾ ಎಂಬ ಗಿಮಿಕ್

CSR FUND ಅಡಿಯಲ್ಲಿ ಕಾರ್ಪೊರೇಟ್ ಕಂಪೆನಿಗಳಿಂದ ಸಾಮಾಜಿಕ ಕಾರ್ಯಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ಸಂದಾಯವಾಗಬೇಕು. ಆದರೆ, ಈ ಹಣವನ್ನು ಸಂಗ್ರಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಕಾರ್ಪೋರೇಟ್ ಕಂಪೆನಿಗಳು ನಷ್ಟದಲ್ಲಿವೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮನ್ನಾ ಮಾಡಿರುವ ಕಾರ್ಪೊರೇಟ್ ಸಾಲ ಮಾತ್ರ 1.8 ಲಕ್ಷ ಕೋಟಿ ಎಂದರೆ ಪರಿಸ್ಥಿತಿಯನ್ನು ನೀವೆ ಊಹಿಸಬಹುದು.

ನೂರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಹ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೂ ಮುಂದೂ ನೋಡುವ ಇದೇ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ಸಾಲವನ್ನು ಅನಾಯಾಸವಾಗಿ ಮನ್ನಾ ಮಾಡುತ್ತದೆ ಎಂದಾದರೆ ಈ ದೇಶದ ವ್ಯವಸ್ಥೆ ಮತ್ತು ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಮನಗಾಣಬಹುದು. ಇನ್ನೂ ನಿಜಕ್ಕೂ ಕಾರ್ಪೊರೇಟ್ ಕಂಪೆನಿಗಳು ಸಮಾಜಿಕ ಕಾರ್ಯಕ್ಕೆ ಹಣ ಖರ್ಚು ಮಾಡಿವೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ನೀವೆ ಹುಡುಕಿಕೊಳ್ಳಿ.

ಖಾಸಗಿ ಲಾಭಿ

ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯನ್ನು ಲಾಭಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಕಾನೂನು ಹೇಳುತ್ತವೆ. ಆದರೆ ವಿಪರ್ಯಾಸ ನೋಡಿ ಭಾರತದ ಮಟ್ಟಿಗೆ ಇಂದಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಉದ್ಯಮ ಎಂದರೆ ಶಿಕ್ಷಣ ಮತ್ತು ಆರೋಗ್ಯ ವಿಭಾಗ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲೂ ಮುಕ್ತ ವಿದೇಶ ಹೂಡಿಕೆಗೆ ಅವಕಾಶ ಕಲ್ಪಿಸಿರುವುದು ಈ ಉದ್ಯಮ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷವೊಂದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಮಾಡಿಕೊಳ್ಳುವ ಲಾಭ ಲಕ್ಷಾಂತರ ಕೋಟಿಯನ್ನು ದಾಟುತ್ತಿದೆ.

2016ರ ಅಂಕಿಅಂಶದ ಪ್ರಕಾರ ಭಾರತದಲ್ಲಿ TOP-10 ಆಸ್ಪತ್ರೆ ಒಕ್ಕೂಟಗಳು ಒಂದು ವರ್ಷಕ್ಕೆ ಗಳಿಸಿರುವ ಲಾಭ 163 ಮಿಲಿಯನ್ ಅಮೆರಿಕನ್ ಡಾಲರ್. ಈ ಪ್ರಮಾಣ 2019ರ ವೇಳೆಗೆ ಶೇ.30 ರಷ್ಟು ಅಧಿಕವಾಗಿದೆ ಎನ್ನಲಾಗುತ್ತಿದೆ. ಇನ್ನೂ ಶಿಕ್ಷಣ ಸಂಸ್ಥೆಯ ಲಾಭ 200 ಮಿಲಿಯನ್ ಡಾಲರ್ ವ್ಯವಹಾರವನ್ನು ದಾಟುತ್ತಿದೆ ಎನ್ನುತ್ತಿವೆ ಅಧಿಕೃತ ಮಾಹಿತಿಗಳು.

ಖಾಸಗಿ ವಲಯದಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆ ಕ್ಷೇತ್ರಗಳು ಈ ಪ್ರಮಾಣದ ಲಾಭ ಗಳಿಸುತ್ತಿರುವ ಕಾರಣದಿಂದಲೇ ಇಂದು ಖಾಸಗಿ ಲಾಭಿ ಅಧಿಕವಾಗಿದೆ. ಪರಿಣಾಮ ಸಾರ್ವಜನಿಕ ವಲಯದಲ್ಲಿ ಸೇವೆ ಎಂದೇ ಪರಿಗಣಿಸಲಾಗಿರುವ ಸರ್ಕಾರಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಲಭ್ಯಗಳು ಇಲ್ಲದೆ ಇಂದು ಹಳ್ಳಹಿಡಿದಿವೆ. ಇದರ ಹಿಂದೆ ಖಾಸಗಿ ಲಾಭಿ ಇಲ್ಲ ಎಂದು ಹೇಳುವಷ್ಟು ಮತ್ತು ಅದನ್ನು ನಂಬುವಷ್ಟು ಮೂರ್ಖರಲ್ಲ ಭಾರತೀಯರು. ಇನ್ನೂ ಇದೇ ಕಾರಣಕ್ಕೆ CSR FUND ಸಹ ಸರಿಯಾಗಿ ಸಂಗ್ರಹಿಸಲಾಗುತ್ತಿಲ್ಲ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.


ಇದನ್ನೂ ಓದಿ: CAG ಗಿಲ್ಲ PM CARES ಆಡಿಟ್‌ : ಪಿಎಂ ಕೇರ್ಸ್ ಸುತ್ತಾ ಹಗರಣಗಳ ಹುತ್ತ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸಿಎಸ್ಆರ್ ನಿಧಿ ಬಗ್ಗೆ ಪಿಎಂ ಕೆಆರ್ಎಸ್ ಬಗ್ಗೆ ಇಷ್ಟೆಲ್ಲಾ ಬರೆಯುತ್ತಿರಿ ಅವರನ್ನೆಲ್ಲ ಹೇಳ್ತೀರಾ ಆದರೆ ನೀವು ನಿಮ್ಮ ಈ ವರದಿಗಳಿಗೆ ದುಡ್ಡುಕೇಳುತ್ತಿದ್ದೀರಾ ಇದಕ್ಕೆ ಮೊದಲು ಲೆಕ್ಕ ಕೊಡಿ ಆಮೇಲೆ ಬೇರೆಯವರ ಬಗ್ಗೆ ಮಾತನಾಡುವ ಕೆಲಸ ಮಾಡಿ

  2. ಪ್ರಧಾನಮಂತ್ರಿ ಪರಿಹಾರ ನಿಧಿಯ ಬದಲು ಪಿಎಂ ಕೇರ್ಸ್ ತಂದ ಕಾರಣ ತಿಳಿದು ಗಾಬರಿಯಾಗುತ್ತದೆ. ಟ್ರಾನ್ಸಪರೆನ್ಸಿ ಇಲ್ಲದ ಹಣ ಕೂಡುವಿಕೆ absolute ಪವರ್ ಹೊಂದಿರುವ ಜನರ ಕೈಯಲ್ಲಿ ಏನಾಗಬಹುದು? ಹಲ-ಕೆಲವು ವರ್ಷಗಳಿಂದ ಅಧಿಕಾರ ಕೇಂದ್ರೀಕೃತಗೊಳ್ಳುತ್ತಿದೆ ಮತ್ತು ಅದು ಎಂದಿದ್ದರೂ ವಿನಾಶಕಾರಿಯೆ! ಒಂದು ವಿಷಯ: ಕರೆನ್ಸಿಯನ್ನು ಭಾರತೀಯ ರುಪಾಯಿಯಲ್ಲಿ ಮತ್ತು, ಈ ಕಾನೂನಿಗೆ ಒಳಪಡುವ ಕಂಪನಿಗಳಿಂದ ಒಟ್ಟಾಗಬಹುದಾದ ಅಂದಾಜು ಹಣ ಹೇಳಬಹುದಿತ್ತೇ? ಲೇಖನ ಕಣ್ಣು ತೆರೆಸುವಂತಿದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...