HomeಮುಖಪುಟCAG ಗಿಲ್ಲ PM CARES ಆಡಿಟ್‌ : ಪಿಎಂ ಕೇರ್ಸ್ ಸುತ್ತಾ ಹಗರಣಗಳ ಹುತ್ತ

CAG ಗಿಲ್ಲ PM CARES ಆಡಿಟ್‌ : ಪಿಎಂ ಕೇರ್ಸ್ ಸುತ್ತಾ ಹಗರಣಗಳ ಹುತ್ತ

ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೇವಲ 138 ಕೋಟಿ ರೂ ದೇಣಿಗೆ ಬಂದಿದ್ದರೆ, ಇದೇ ಅವಧಿಯಲ್ಲಿ ಪಿಎಂ ಕೇರ್ಸ್‌‌ಗೆ 10,000 ಕೋಟಿಗೂ ಹೆಚ್ಚು ದೇಣಿಗೆ ಹರಿದುಬಂದಿದೆ ಎನ್ನಲಾಗಿದೆ.

- Advertisement -
- Advertisement -

ಕೊವಿಡ್‌-19 ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕೇರ್ಸ್ ನಿಧಿಯನ್ನು ಇತ್ತೀಚೆಗೆ ಆರಂಭಿಸಿದ್ದಾರೆ. ಈಗಾಗಲೇ ನಿಧಿ ಸಂಗ್ರಹಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿ ಇದ್ದರೂ ಕೂಡ ಇನ್ನೊದು PM CARES ನಿಧಿ ಏಕೆ ಬೇಕಿತ್ತು ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.

ಇದೇ ಸಂದರ್ಭದಲ್ಲಿ ಈ PM CARES ನಿಧಿಯ ಆಡಿಟ್‌ನ್ನು ದೇಶದ ಪ್ರಖ್ಯಾತ CAG (Comptroller and Auditor General of India) ಮಾಡಲು ಬರುವುದಿಲ್ಲ. ಬದಲಿಗೆ ಪ್ರಧಾನ ಮಂತ್ರಿ ಸೇರಿದಂತೆ ಅದರ ಟ್ರಸ್ಟಿಗಳು ನೇಮಿಸಿದ ಸ್ವತಂತ್ರ ಲೆಕ್ಕಪರಿಶೋಧಕರಿಂದ ಆಡಿಟ್‌ ಮಾಡಲಾಗುವುದು ಎಂಬ ಅಂಶ ಬೆಳಕಿಗೆ ಬಂದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಈಗಾಗಲೇ PM CARES ನಿಧಿಗೆ ಸಾವಿರಾರು ಕೋಟಿ ರೂ ದೇಣಿಗೆ ಹರಿದುಬಂದಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(FCRA) ಯಿಂದ ವಿನಾಯಿತಿ ಪಡೆದ ನಂತರ ದೇಣಿಗೆಯಲ್ಲಿ ಸಾಕಷ್ಟು ಹೆಚ್ಚಾಗಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ಪಿಎಂ ಕೇರ್ಸ್ ನಿಧಿಯಲ್ಲಿರುವ ಎಲ್ಲಾ ಹಣವನ್ನು ಈ ಹಿಂದಿನಿಂದಲೂ ಬಳಸುತ್ತಿರುವ ಪ್ರಧಾನ ಮಂತ್ರಿಗಳ “ರಾಷ್ಟ್ರೀಯ ಪರಿಹಾರ ನಿಧಿ”ಗೆ ವರ್ಗಾಯಿಸಬೇಕು. ಆ ಮೂಲಕ ದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಲೆಕ್ಕಪರಿಶೋಧನೆಯನ್ನು ಖಚಿತಪಡಿಸಿಕೊಳ್ಳಲು ಆಗ್ರಹಿಸಿದ್ದರು. ಆದರೆ ಅವರ ಬೇಡಿಕೆಯನ್ನು ಮೋದಿಯವರು ಪರಿಗಣಿಸಿಲ್ಲ.

ವಿಡಿಯೊ ನೋಡಿ: PM CARES ಆಡಿಟ್ ಹಕ್ಕು ಸಿಎಜಿಗಿಲ್ಲ: ಹಾಗಾದರೆ ಇದೊಂದು ಹಗರಣವಲ್ಲವೇ?

 

CSR ದೇಣಿಗೆ ವಿಷಯದಲ್ಲಿಯೂ ವಿವಾದ

ಇನ್ನು ಕಾರ್ಪೊರೇಟ್‌ ಕಂಪನಿಗಳು ತಮ್ಮ ವಾರ್ಷಿಕ ಲಾಭದಲ್ಲಿ ಶೇ.2ರಷ್ಟನ್ನು ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ಖರ್ಚು ಮಾಡಬೇಕಿದ್ದ CSR ಹಣವನ್ನು ಪಿಎಂ ಕೇರ್ಸ್‌ಗೆ ಹಾಕಬಹುದಾಗಿದೆ. ಅಲ್ಲದೇ ವಯಕ್ತಿಕವಾಗಿ ದೇಣಿಗೆ ನೀಡುವವರಿಗೆ ತೆರಿಗೆ ವಿನಾಯಿಯಿ ನೀಡಲಾಗಿದೆ. ಆದರೆ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ CSR ಹಾಕಲು ಬರುವುದಿಲ್ಲ ಮತ್ತು ತೆರಿಗೆ ವಿನಾಯಿತಿ ಸಿಗುವುದಿಲ್ಲ ಎಂಬುದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.

ಯುಪಿಎ ಸರ್ಕಾರವು ಜುಲೈ 2013 ರಲ್ಲಿ ಅಂಗೀಕರಿಸಿದ ಕಾನೂನಿನ (ಕಂಪನಿಗಳ ಕಾಯ್ದೆ) ತಿದ್ದುಪಡಿಯ ಕಾರಣದಿಂದ ರಾಜ್ಯಗಳು ಸಿಎಸ್‌ಆರ್‌ ದೇಣಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಆ ಕಾನೂನಿಗೆ ತಿದ್ದುಪಡಿ ತಂದು ರಾಜ್ಯಗಳ ಪರಿಹಾರ ನಿಧಿಗೂ ಕೂಡ ಸಿಎಸ್‌ಆರ್‌ ಹಣ ಹಾಕುವಂತಾಗಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೂ ಕೂಡ ಮೋದಿಯವರು ಸ್ಪಂದಿಸಿಲ್ಲ.

ಒಂದರ್ಥದಲ್ಲಿ ಹಲವು ರಾಜ್ಯಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹಳಷ್ಟು ಮುಂದಿವೆ. ಜಾಗರೂಕತೆಯಿಂದ ಹಗಲು ಇರುಳು ಕೆಲಸ ಮಾಡುತ್ತಿದ್ದರೂ ಆರ್ಥಿಕ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ಇತ್ತ ಪರಿಹಾರ ಹಣವನ್ನೂ ನೀಡುತ್ತಿಲ್ಲ, ಅತ್ತ ಸಿಎಸ್‌ಆರ್‌ ಹಣ ಹಾಕಲು ಬಿಡುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿವೆ.

ಉದಾಹರಣಗೆ ಏಪ್ರಿಲ್‌ 15ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೇವಲ 138 ಕೋಟಿ ರೂ ದೇಣಿಗೆ ಬಂದಿದ್ದರೆ, ದೇಶದ ಆರ್ಥಿಕ ರಾಜಧಾನಿ ಎಂದೇ ಕರೆಯಲ್ಪಡುವ ಮಹಾರಾಷ್ಟ್ರ ರಾಜ್ಯಕ್ಕೆ 247 ಕೋಟಿ ರೂ ಮಾತ್ರ ಸಂಗ್ರಹವಾಗಿದೆ. ಆದರೆ ಇದೇ ಅವಧಿಯಲ್ಲಿ ಪಿಎಂ ಕೇರ್ಸ್‌‌ಗೆ 10,000 ಕೋಟಿಗೂ ಹೆಚ್ಚು ದೇಣಿಗೆ ಹರಿದುಬಂದಿದೆ ಎನ್ನಲಾಗಿದೆ.


ಇದನ್ನೂ ಓದಿ:  ಪ್ರಧಾನಿ ಪರಿಹಾರ ನಿಧಿಯಿಂದ ಹಣ ತೆಗೆಯಲು ಸೋನಿಯಾ ಒಪ್ಪಿಗೆ ಬೇಕೆ?


ಪಿಎಂ ಕೇರ್ಸ್‌ ಆಡಿಟ್‌ ಯಾರು ಮಾಡುತ್ತಾರೆ?

ದೇಶದ ಬಹುಮುಖ್ಯ ಹಣಕಾಸು ವ್ಯವಹಾರಗಳನ್ನು ಪ್ರಖ್ಯಾತ CAG ನಡೆಸುತ್ತಿದೆ. 2G ಸ್ಪೆಕ್ಟ್ರಮ್‌ ಹಗರಣ ಸೇರಿದಂತೆ ದೊಡ್ಡ ಹಗರಣಗಳನ್ನು ಅದು ಬಯಲಿಗೆಳೆದಿದೆ. ಅಂತಹ ಸಂಸ್ಥೆ ಪಿಎಂ ಕೇರ್ಸ್‌‌ ಅನ್ನು ಆಡಿಟ್‌ ಮಾಡುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಬದಲಿಗೆ ಪಿಎಂ ಕೇರ್ಸ್ ನಿಧಿಯನ್ನು ಟ್ರಸ್ಟಿಗಳು ನೇಮಕ ಮಾಡುವ ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹ ಸ್ವತಂತ್ರ ಲೆಕ್ಕಪರಿಶೋಧಕರಿಂದ ಆಡಿತ್‌ ಮಾಡುವುದು ಎಂದು ಸರ್ಕಾರ ಷರತ್ತು ವಿಧಿಸಿದೆ.

ಈ ಪಿಎಂ ಕೇರ್ಸ್‌‌ಗೆ ಎಷ್ಟು ಹಣ ಬಂದಿದೆ. ಅದರಲ್ಲಿ ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ, ಎಷ್ಟು ಉಳಿದಿದೆ ಎಂಬ ನಂಬಿಕಾರ್ಹ ಮಾಹಿತಿ ಇದರಿಂದ ದೊರೆಯುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದುವರೆಗೂ ಕೇಂದ್ರ ಸರ್ಕಾರ ಕೊವಿಡ್‌ ಪ್ಯಾಕೇಜ್‌ಗಳಿಗೆ ತನ್ನ ಸರ್ಕಾರದ ಖಾತೆಯಿಂದ ಹಣ ನೀಡಿದೆಯೇ ಹೊರತು ಪಿಎಂ ಕೇರ್ಸ್‌‌ನಿಂದಲ್ಲ. ಹಾಗಾದರೆ ಈ ಹಣವನ್ನು ಯಾವಾಗ ಬಳಸುತ್ತಾರೆ ಎಂಬ ಪ್ರಶ್ನೆಯೂ ಎದ್ದಿದೆ.

ಕೋವಿಡ್ -19 ರ ವಿರುದ್ಧ ಹೋರಾಡುವ ಹೆಸರಿನಲ್ಲಿ, ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಹೊಂದಿರುವ ನರೇಂದ್ರ ಮೋದಿ ನೇತೃತ್ವದ ಈ ಚಾರಿಟಬಲ್ ಟ್ರಸ್ಟ್ ಹಣವನ್ನು ಸಂಗ್ರಹಿಸಿ ನಂತರ ಅವುಗಳನ್ನು ಸ್ವಂತವಾಗಿ ಖರ್ಚು ಮಾಡುತ್ತದೆ. ಈ ನಿಧಿ ಖಾಸಗಿಯಾಗಿರುವುದರಿಂದ ಅದು ಆರ್‌ಟಿಐ ಅಡಿಯಲ್ಲಿ ಬರುವುದಿಲ್ಲ. ಈ ನಿಧಿಯು ಸಿಎಜಿಯ ವ್ಯಾಪ್ತಿಯಿಂದ ಹೊರಗಿರುವುದರಿಂದ, ಯಾವುದೇ ಸರ್ಕಾರಿ ಸಂಸ್ಥೆಯು ಈ ನಿಧಿಯನ್ನು ಲೆಕ್ಕಪರಿಶೋಧಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇದು ಹಗರಣವೇ? ಭಾರತದ ಜನರು ನಿರ್ಧರಿಸಬೇಕಾಗುತ್ತದೆ ಎಂದು ಖ್ಯಾತ ಯೂಟ್ಯೂಬರ್‌ ಧೃವ್‌ ರಾಠೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕಾರ್ಮಿಕರಿಗೆ ವೇತನ ಸಹಿತ ಕೆಲಸದ ಭದ್ರತೆ ಆದೇಶವನ್ನು ಸರ್ಕಾರ ಎರಡೇ ದಿನದಲ್ಲಿ ಹಿಂಪಡೆದದ್ದು ಏಕೆ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...