Homeಕರ್ನಾಟಕಪಾದರಾಯನಪುರ ಘಟನೆ ನಡೆಯಲು ಕಾರಣಗಳೇನು? ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು?

ಪಾದರಾಯನಪುರ ಘಟನೆ ನಡೆಯಲು ಕಾರಣಗಳೇನು? ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು?

ಬಿಬಿಎಂಪಿ ಆಯುಕ್ತರು ಖಚಿತಪಡಿಸಿದಂತೆ ಸೀಲ್‌ಡೌನ್ ಮಾಡಲು ಯಾವುದೇ ಆದೇಶವಿಲ್ಲದದಿದ್ದರೂ ಈ ಎರಡು ವಾರ್ಡ್‌ಗಳನ್ನು ಮಾತ್ರ ಏಕೆ ಸೀಲ್‌ಡೌನ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

- Advertisement -
- Advertisement -

ಏಪ್ರಿಲ್ 19 ರಂದು ಬೆಂಗಳೂರಿನ ಪಾದರಾಯನಪುರ ದಲ್ಲಿ ನಡೆದ ವಿಧ್ವಂಸಕ ಘಟನೆ ಮತ್ತು ಆನಂತರ ಉಂಟಾದ ಪ್ರಕ್ಷೋಭೆಯ ಕುರಿತು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಜಂಟಿ ಹೇಳಿಕೆ ನೀಡಿದ್ದಾರೆ.

ಏಪ್ರಿಲ್ 19 ರಂದು ಪಾದರಾಯನಪುರದಲ್ಲಿ ನಡೆದ ವಿಧ್ವಂಸಕ ಕೃತ್ಯವು ಖಂಡನೀಯವಾಗಿದ್ದು ಕಾನೂನಿನ ಪ್ರಕಾರ ಆರೋಪಿಗಳ ವಿರುದ್ಧ ಕ್ರಮ ಜರಗಬೇಕು ಎಂದು ಹೇಳಿದ್ದಾರಲ್ಲದೆ, ಆದಾಗ್ಯೂ ಇದು ಸಂಭವಿಸಿದ ಸಂದರ್ಭವನ್ನು ಹಾಗೂ ಇದು ಪುನರಾವರ್ತಿತವಾಗದಂತೆ ತಡೆಯಲು ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅತೀ ಜನಸಂದಣಿಯ ಬಡವರ ವಾಸಪ್ರದೇಶವಾದ ಎರಡು ವಾರ್ಡ್‌ಗಳು – 134 (ಬಾಪುಜಿನಗರ) ಮತ್ತು 135 (ಪಾದರಾಯಣಪುರ) ಸಹ ಏಪ್ರಿಲ್ 10 ರಿಂದ ‘ಸೀಲ್‌ಡೌನ್’ ಅಡಿಯಲ್ಲಿವೆ;  ಈ ಎರಡೂ ವಾರ್ಡ್‌ಗಳು ಕಳಪೆ ಸಾರ್ವಜನಿಕ ಮೂಲಸೌಕರ್ಯವನ್ನು ಹೊಂದಿವೆ ಮತ್ತು ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿದ್ದು ಬಡವರು ಮತ್ತು ದೈನಂದಿನ ವೇತನದಲ್ಲಿ ಕೆಲಸ ಮಾಡುತವವರೆ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬ ಬಗ್ಗೆ ಹೇಳಿಕೆ ಗಮನಸೆಳೆದಿದೆ.

2016 ರ ಅಂಕಿಅಂಶಗಳ ಪ್ರಕಾರ, ಬಾಪೂಜಿನಗರದಲ್ಲಿ 49,484 ಜನಸಂಖ್ಯೆ ಹೊಂದಿರುವ 10,647 ಕುಟುಂಬಗಳಿದ್ದರೂ ಸಹ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಅಲ್ಲದೆ ಕೇವಲ ಒಂದು ಉದ್ಯಾನವನವಿದೆ. ಅದೇ ರೀತಿಯಲ್ಲಿ 7273 ಕುಟುಂಬಗಳಿರುವ 37,599 ಜನಸಂಖ್ಯೆ ಹೊಂದಿರುವ ಇಡೀ ಪಾದರಾಯನಪುರದಲ್ಲಿ ಕೇವಲ ಒಂದು ಸಾರ್ವಜನಿಕ ಶೌಚಾಲಯವಿದೆ ಎಂದು ಹೇಳಿಕೆ ತಿಳಿಸಿದೆ.

ಬಾಪೂಜಿನಗರ ಮತ್ತು ಪಾದರಾಯನಪುರ ಎರಡೂ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಾಗಿದ್ದು, ಹೆಚ್ಚಿನ ಸಂಖ್ಯೆಯ ದೈನಂದಿನ ಕೂಲಿ ಕಾರ್ಮಿಕರನ್ನು ಹೊಂದಿವೆ. ಪಾದರಾಯನಪುರದಲ್ಲಿ ಹೆಚ್ಚಿನ ಜನರು ಬೀಡಿ ಕಟ್ಟುವ ವಲಯದಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರಾಗಿದ್ದಾರೆ. ಚೀಲಗಳನ್ನು ಹೊಲಿಯುವವವರು ಮತ್ತು ಇತರ ಅನೌಪಚಾರಿಕ ಕಾರ್ಮಿಕರನ್ನು ಹೊಂದಿರುವ ಪ್ರದೇಶ ಇದಾಗಿದೆ. ಲಾಕ್‌ಡೌನ್ ನಿಂದಾಗಿ ಅಲ್ಲಿನ ಬಹುಪಾಲು ಜನರಿಗೆ ಯಾವುದೇ ಆದಾಯವಿಲ್ಲ, ಊಟಕ್ಕೂ ಸಹ ಕಷ್ಟವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.

ಬೆಂಗಳೂರಿನ ಅನೇಕ ವಾರ್ಡ್‌ಗಳಲ್ಲಿ ಗಮನಾರ್ಹ ಸಂಖ್ಯೆಯ ಕೊರೊನಾ ಪ್ರಕರಣಗಳಿದ್ದರು ಸಹ, ಈ ಎರಡು ವಾರ್ಡ್‌ಗಳಲ್ಲಿ ಮಾತ್ರ ಸೀಲ್‌ಡೌನ್ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರು ಖಚಿತಪಡಿಸಿದಂತೆ ಸೀಲ್‌ಡೌನ್ ಮಾಡಲು ಯಾವುದೇ ಆದೇಶವಿಲ್ಲದದಿದ್ದರೂ ಈ ಎರಡು ವಾರ್ಡ್‌ಗಳನ್ನು ಮಾತ್ರ ಏಕೆ ಸೀಲ್‌ಡೌನ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಇದ್ದುದರಿಂದ, ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಅನುಮಾನವಿದ್ದು, ಪತ್ರಿಕೆ ವರದಿಗಳ ಪ್ರಕಾರ ಸೀಲ್‌ಡೌನ್ ಮಾಡಿದ ಕೂಡಲೇ ಅಲ್ಲಿ ಕೋಮು ಉದ್ವೇಗ ಪ್ರಾರಂಭವಾಯಿತು ಎಂದು ಸೂಚಿಸುತ್ತದೆ. ಏಪ್ರಿಲ್ 11ರ ಡೆಕ್ಕನ್ ಹೆರಾಲ್ಡ್ ವರದಿಯೊಂದು ಅದನ್ನೇ ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಈ ಎರಡು ವಾರ್ಡ್‌ಗಳನ್ನು ಏಕೆ ಮುಚ್ಚಲಾಯಿತು ಎಂಬ ಮಾಹಿತಿಯ ಕೊರತೆ,  ತಬ್ಲೀಘ್ ಜಮಾತ್  ಘಟನೆಯ  ನಂತರ ಸಂಭವಿಸಿದ ಕೋಮು ದೃವೀಕರಣ ಹಾಗೂ ದಿನಬಳಕೆಯ ಅಗತ್ಯ ಸಾಮಗ್ರಿಗಳ ಕೊರತೆಯು ಅಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ಏಪ್ರಿಲ್ 19ರ ಸಂಜೆ ಪಾದರಾಯನಪುರದಲ್ಲಿ ಒಂದು ಗುಂಪು ಬ್ಯಾರಿಕೇಡ್‌ಗಳನ್ನು ಮುರಿಯಿತು. ಯಾವುದೇ ರೋಗಲಕ್ಷಣಗಳು ಇಲ್ಲದಿದ್ದಾಗ ಯಾಕೆ ಸಂಪರ್ಕತಡೆಗೆ ಕರೆದೊಯ್ಯಲಾಗುತ್ತಿದೆ ಎಂಬ ಗೊಂದಲದ ನಡುವೆ,  ಕ್ವಾರಂಟೈನ್ ಕೇಂದ್ರಗಳು ಸುರಕ್ಷಿತವಲ್ಲಾ ಹಾಗೂ ಸ್ವಚ್ವವಿಲ್ಲ ಎಂಬ ವದಂತಿಗಳು ಹರಿಯುತ್ತಿತ್ತು ಎಂದು ಸ್ಥಳೀಯ ಜನರು ತಿಳಿಸಿದ್ದಾರೆ. ಕ್ವಾರಂಟೈನ್‌ಗೆ ಹೋದವರಿಗೆ ಸೋಂಕು ಹರಡುವ ಸಂಭವವಿದೆ ಎಂಬ ಗಾಳಿ ಸುದ್ದಿ ಅಲ್ಲಿ ಹರಿದಾಡಿದೆ. ಕ್ಯಾರೆಂಟೈನ್‌ಗಾಗಿ ದ್ವಿತೀಯ ಸಂಪರ್ಕ ಇರುವವರನ್ನು ಸೋಮವಾರ ಕರೆದೊಯ್ಯುವುದಾಗಿ ಹೇಳಿದ್ದರೂ, ನಂತರ ಭಾನುವಾರವೇ ಕರೆದುಕೊಂಡು ಹೋಗುತ್ತೇವೆ ಎಂದಿದ್ದರಿಂದ ಜನರು ಸಂಶಯ ಹಾಗೂ ಆತಂಕಗೊಂಡಿದ್ದಾರೆ. ಈ ಹೊತ್ತಿಗೆ ಕೆಲವುರು ತಗಡಿನ ಷೀಟುಗಳನ್ನು ಬಡಿದು, ಎಳೆದು ಕಿತ್ತುಹಾಕಿದ್ದಾರಲ್ಲದೆ, ಪೊಲೀಸರು ಕೂರಲು ಹಾಕಿಕೊಂಡಿದ್ದ ಶಾಮಿಯಾನವನ್ನು ಎಳೆದು ಬೀಳಿಸಿ ಟೇಬಲ್ ಕುರ್ಚಿಗಳನ್ನು ಪಕ್ಕಕ್ಕೆಸೆದು, ಕೆಲವು ಬೀದಿ ದೀಪಗಳಿಗೆ ಕಲ್ಲೆಸೆದು ಹಾಳುಮಾಡಿದ್ದಾರೆ ಎಂದು ವರದಿಯಾಗಿದೆ. ಎಲ್ಲವೂ 15ರಿಂದ 20 ನಿಮಿಷಗಳಲ್ಲಿ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.

ಅಂದು ರಾತ್ರಿಯೆ ಪೊಲೀಸ್ ಉಪ ಆಯುಕ್ತರು ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಆದರೆ  ಯಾರ ಮೇಲೂ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪೊಲೀಸ್ ಕಮಿಷನರ್ ಶ್ರೀ ಭಾಸ್ಕರ್ ರಾವ್ ಅವರು ಕೂಡಾ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಅಲ್ಲದೆ ಆಶಾ ಕಾರ್ಯಕರ್ತರು ಕೂಡಾ ಯಾವುದೇ ಹಲ್ಲೆಗೆ  ಒಳಗಾಗಲಿಲ್ಲ ಎಂದು ಆಶಾ ವರ್ಕರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ. ಆದರೆ ಸರ್ಕಾರದ ಕೆಲ ಮಂತ್ರಿಗಳು ಸೇರಿದಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ವೈದ್ಯರು, ಆಶಾ ಕಾರ್ಮಿಕರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿ ಇಡೀ ಘಟನೆಗೆ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವ ಸಂಚು ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.


ಇದನ್ನೂ ಓದಿ: ಪಾದರಾಯನಪುರದಲ್ಲಿ ನಡೆದದ್ದೇನು? ಸಂಪೂರ್ಣ ವಿವರಗಳು


ಬಿಬಿಎಂಪಿಯ ವೈಫಲ್ಯ:

ಜನರಿಗೆ ಪಡಿತರ ಮತ್ತು ಅಗತ್ಯ ಸೇವೆಗಳು ಎಲ್ಲರಿಗು ತಲುಪಿಸುವುದರಲ್ಲಿ ಬಿಬಿಎಂಪಿ ವಿಫಲವಾಗಿದೆ. 12.04.2020 ರಂದು “ದಿ ಹಿಂದೂ” ಪತ್ರಿಕೆಯಲ್ಲಿ ವರದಿಯಾದಂತೆ ಎರಡು ವಾರ್ಡ್‌ಗಳ ನಿವಾಸಿಗಳಿಗೆ ಹಾಲು ಮತ್ತು ತರಕಾರಿಗಳ ಕೊರತೆಯಿದ್ದು, ಈ ಪ್ರದೇಶದಲ್ಲಿ ಬಡ ಕಾರ್ಮಿಕರೆ ದೊಡ್ಡ ಜನಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಆಹಾರದ ಕೊರತೆಯೆ ದೊಡ್ಡ ಸಮಸ್ಯೆಯಾಗಿತ್ತು.

ಕೊರೊನಾ ಪರೀಕ್ಷೆ, ಕ್ವಾರಂಟೈನ್‍ ಮತ್ತು ಕಂಟೈನ್ಮೆಂಟ್ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಾಗಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯವಾದ ಮಾಹಿತಿ ಮತ್ತು ಶಿಕ್ಷಣ ಅಭಿಯಾನ ಚಟುವಟಿಕೆಗಳನ್ನು ಬಿಬಿಎಂಪಿ ಮಾಡಿಲ್ಲ ಎಂಬುವುದು ಇಲ್ಲಿ ಗಮನಿಸಬೇಕು.

ಕೆಲವು ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಹೊರತುಪಡಿಸಿ, ಜನರ ಮನಸ್ಸಿನಲ್ಲಿರುವ ಆತಂಕಗಳಿಗೆ, ಪ್ರಶ್ನೆಗಳಿಗೆ ಉತ್ತರ ನೀಡಲು ಯಾರು ಇರಲಿಲ್ಲ. ಇಂತಹ ಸನ್ನಿವೇಶಗಳಲ್ಲಿ ಜನರು ಮಾನಸಿಕವಾಗಿ ಉದ್ವೇಗಗೊಂಡಿರುತ್ತಾರೆ. ಪಾದರಾಯನಪುರದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಗಳನ್ನು ಅರ್ಥಮಾಡಿಕೊಳ್ಳುವಾಗ ಇದನ್ನು ಸಹ ಗಮನಿಸಬೇಕು ಎಂದು ಹೇಳಿಕೆ ತಿಳಿಸಿದೆ.

ಘಟನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಸಾಮಾಜಿಕ ಕಾರ್ಯಕರ್ತರು ಎತ್ತಿದ್ದಾರೆ:

1. 10.04.2020 ರಂದು ಬಾಪುಜಿನಗರ (ವಾರ್ಡ್ ಸಂಖ್ಯೆ 134) ಮತ್ತು ಪಾದರಾಯನಪುರ (ವಾರ್ಡ್ ಸಂಖ್ಯೆ 135) ವಾರ್ಡ್‌ಗಳನ್ನು ಯಾವ ಆಧಾರದ ಮೇಲೆ ಮುಚ್ಚಲಾಯಿತು (ಸೀಲ್‌ಡೌನ್‌)?

2. ಕಂಟೈನ್‌ಮೆಂಟ್ ವಲಯ ಆದೇಶ ಹೊರಡಿಸದೆ, ಸೂಕ್ತ ಮೂಲಸೌಕರ್ಯಗಳನ್ನು ಜಾರಿಗೆ ತರದಂತೆ ಪ್ರದೇಶವನ್ನು ಹೇಗೆ ಮುಚ್ಚಲಾಯಿತು?

3. ಸರ್ಕಾರಿ ಕ್ವಾರಂಟೈನ್‍ ಅಗತ್ಯವಿತ್ತೇ? ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು 07/04/2020 ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ, ಕೊರೊನಾ ಪರೀಕ್ಷೆಯಲ್ಲಿ ನೆಗಟಿವ್ ಎಂದು ಫಲಿತಾಂಶ ಬಂದವರಿಗೆ, ಮನೆಯಲ್ಲೆ ಕ್ವಾರಂಟೈನ್‍ ಮಾಡಬೇಕೆಂದಿದೆ. ಈ ಎರಡು ವಾರ್ಡ್‌ಗಳ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಸರ್ಕಾರಿ ಕ್ವಾರಂಟೈನ್‌ಗೆ ಯಾಕೆ ಸ್ಥಳಾಂತರಿಸಲಾಯಿತು? ಪರೀಕ್ಷೆಯಲ್ಲಿ ನೆಗಟಿವ್ ಬಂದವರನ್ನು ಮನೆಗೆ ಕಳುಹಿಸಲಾಯಿತೇ?

4. ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಿದ ನಂತರ, ಎಲ್ಲಾ ವ್ಯಕ್ತಿಗಳಿಗೆ ಮನೆ ಬಾಗಿಲಿಗೆ ಆಹಾರ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಯಾವ ಕ್ರಮಗಳನ್ನು ತೆಗೆದುಕೊಂಡಿತು?

5. ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನವನ್ನು ಖಚಿತಪಡಿಸಿಕೊಳ್ಳಲು 10.04.2020 ರಿಂದ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?

6. ಸೀಲ್‌ಡೌನ್ ಪ್ರದೇಶದೊಳಗಿನ ವ್ಯಕ್ತಿಗಳಿಗೆ ರಾಜ್ಯವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸಲು, ಭೀತಿ ಹಾಗೂ ತಪ್ಪು ಮಾಹಿತಿಯ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯಿಂದ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?

7. ಬಿಬಿಎಂಪಿ ಆಯುಕ್ತರು ಹೊರಡಿಸಿದ ಆದೇಶವು 20.04.2020 ರಿಂದ ಮಾತ್ರ ಜಾರಿಗೆ ಬಂದಾಗ, ಅಲ್ಲಿ ಅದಕ್ಕೂ ಮುಂಚೆಯೇ  ಹೇಗೆ ಜಾರಿಗೊಳಿಸಲಾಗಿದೆ?

8. 19.04.2020 ರಂದು ಆದೇಶವನ್ನು ಜಾರಿಗೊಳಿಸುವಾಗ, ಆಜ್ಞಾ ಕೇಂದ್ರವನ್ನು ಸ್ಥಾಪಿಸುವುದು ಸೇರಿದಂತೆ ಎಲ್ಲಾ ಸರ್ಕಾರಿ ಕ್ರಮಗಳನ್ನು ಜಾರಿಗೆ ತರಲಾಗಿದೆಯೇ?

ಈ ಬಗ್ಗೆ ಹೋರಾಟಗಾರರು ಹಲವು ಶಿಫಾರಸುಗಳನ್ನು ಮಾಡಿದ್ದಾರೆ:

1. ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರನ್ನು ಕಾನೂನು ಪ್ರಕಾರ ಕಟ್ಟುನಿಟ್ಟಾಗಿ ಮತ್ತು ಯಾವುದೇ ಪಕ್ಷಪಾತವಿಲ್ಲದೆ ವಿಚಾರಣೆಗೆ ಒಳಪಡಿಸಬೇಕು. ಇಡೀ ಘಟನೆಯ ಬಗ್ಗೆ ನಿಷ್ಪಕ್ಷಪಾತ ವಿಚಾರಣೆ ನಡೆಸಬೇಕು.

2. ಸಮುದಾಯದ ಭಾಗವಹಿಸುವಿಕೆ, ಜನರನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಳ್ಳುವುದ ಹಾಗೂ ಮಾಹಿತಿ ಲಭ್ಯತೆ ಸೇರಿದಂತೆ ಸರ್ಕಾರದ ಮತ್ತು ಜನರ ಮಧ್ಯೆ ಸಂವಹನದ ಸಮಸ್ಯೆ ಕಂಡುಬಂದಿದ್ದು, ಇದರಿಂದಾಗಿ ಜನಸಾಂದ್ರತೆ ಹೆಚ್ಚಿರುವ ವಲಯದಲ್ಲಿ ವಾಸಿಸುವವರಲ್ಲಿ ಭೀತಿ ಉಂಟಾಯಿತು. ವ್ಯಕ್ತಿಗಳ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಿದಾಗ ಆತಂಕ ಉಂಟಾಗುತ್ತದೆ ಎಂದು ಗುರುತಿಸುವುದು ಅವಶ್ಯಕ. ಹೀಗಾಗಿ, ಕಂಟೈನ್‌ಮೆಂಟ್ ವಲಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಾಗ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವಶ್ಯಕ. ಇಲ್ಲಿ ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು.

3. 17.04.2020 ರ ಸುತ್ತೋಲೆ ಮತ್ತು 19.04.2020 ರ ಆದೇಶದಂತೆ, ಸಮರ್ಪಕ ಪ್ರಮಾಣದಲ್ಲಿ ಎಲ್ಲಾ ಅಗತ್ಯ ಸೇವೆಗಳನ್ನು ಜನಸಾಂದ್ರತೆ ಹೆಚ್ಚಿರುವ ಎಲ್ಲ ಮನೆಗಳು ಮತ್ತು ವ್ಯಕ್ತಿಗಳಿಗೆ ಒದಗಿಸುವುದು ಅವಶ್ಯಕ. ದಿನನಿತ್ಯದ ಕೂಲಿ ಕಾರ್ಮಿಕರಿಗೆ ಮತ್ತು ಸಮಾಜದ ಹೆಚ್ಚು ದುರ್ಬಲ ವರ್ಗದವರಿಗೆ ಅವರು ಎಲ್ಲಾ ಅಗತ್ಯ ಸೇವೆಗಳನ್ನು ಮನೆ ಬಾಗಿಲಿಗೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ನೀಡಬೇಕು.

4. ಘಟನೆಯ ಬಗ್ಗೆ ಹಾಗು 10.04.2020 ರಿಂದ ಸೀಲ್-ಡೌನ್ ಬಗ್ಗೆ ಸ್ವತಂತ್ರ ವಿಚಾರಣೆ ನಡೆಸಿ: ಪ್ರಶ್ನಾರ್ಹ ಘಟನೆ ಮತ್ತು 10.04.2020 ರಿಂದ ಜಾರಿಗೊಳಿಸಲಾದ ಮುದ್ರೆಯನ್ನು ಪರಿಶೀಲಿಸಲು ಘಟನೆಯ ಬಗ್ಗೆ ಸ್ವತಂತ್ರ ವಿಚಾರಣೆ ನಡೆಸುವುದು ಅವಶ್ಯಕ. ಅಂತಹ ಸೀಲ್-ಡೌನ್ ಅನ್ನು ಹೇಗೆ ಜಾರಿಗೊಳಿಸಲಾಗಿದೆ, ಎಲ್ಲಾ ವ್ಯಕ್ತಿಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳು ಮತ್ತು ಸಮುದಾಯದ ಸದಸ್ಯರೊಂದಿಗೆ ಸರಿಯಾದ ಸಂವಹನವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ವಿಚಾರಣೆ ನಡೆಸಬೇಕು.

5. ಮಾನಸಿಕ ಆರೋಗ್ಯ: ಭಾರತೀಯ ಭಾಷೆಗಳಲ್ಲಿ ಸಲಹೆ ನೀಡುವ ಸಲಹೆಗಾರರನ್ನು ( ಕೌನ್ಸೆಲರ್ಸ್) ನೇಮಿಸಿ ಲಭ್ಯವಾಗುವಂತೆ ಮಾಡಬೇಕು

6. ಈ ವಿಷಯವು ಕೋಮುವಾದೀಕರಣ ಆಗದ ಹಾಗೆ ಕ್ರಮ ತೆಗೆದುಕೊಳ್ಳುವುದು: ಈ ಘಟನೆಯ ಬಗ್ಗೆ ಕನ್ನಡ ಮಾಧ್ಯಮಗಳು ವರದಿ ಮಾಡುತ್ತಿರುವ ರೀತಿ ಮತ್ತು ಜನಪ್ರತಿನಿಧಿಗಳು ನೀಡಿದ ವಿವಿಧ ಹೇಳಿಕೆಗಳು ಅತ್ಯಂತ ಅಪಾಯಕಾರಿ ಹಾಗೂ ಸಮಸ್ಯೆಯೂ ಕೋಮುವಾದೀಕರಣಕ್ಕೆ ಕಾರಣವಾಗುತ್ತದೆ. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯರವರು ಜನರನ್ನು ಎನ್‌ಕೌಂಟರ್‌ ಮೂಲಕ ಸಾಯಿಸಬೇಕೆಂದು ಖಂಡನೀಯವಾದ ಹೇಳಿಕೆ ನೀಡಿದ್ದಾರೆ. ಸಂಸ್ಕೃತಿ ಮತ್ತು ಕನ್ನಡ ಸಚಿವ ಸಿ.ಟಿ. ರವಿ, ಇಡೀ ಮುಸ್ಲಿಂ ಸಮುದಾಯವೇ ತಪ್ಪಿಸ್ಥರು ಎಂಬ ಹೇಳಿಕೆ ನೀಡಿದ್ದು ಸರಿಯಲ್ಲ . ಇಂತಹ  ಹೇಳಿಕೆಗಳನ್ನು ನೀಡುವವರ ವಿರುದ್ದ ಪ್ರಕರಣ ದಾಖಲಿಸಬೇಕು. ಘಟನೆಗೆ ಕೋಮು ಬಣ್ಣ ಹಚ್ಚುವವರನ್ನು ಸೇರಿದಂತೆ, ದ್ವೇಷ ಪ್ರಚೋದಿಸಲು ಹಾಗೂ ಉತ್ತೇಜಿಸಲು ಹೋರಟ  ಮಾಧ್ಯಮಗಳ  ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ.

7. ಆಶಾ ಕಾರ್ಮಿಕರಿಗೆ ರಕ್ಷಣೆ: ಆಶಾ ಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಸಾಧನ (ಪಿ.ಪಿ.ಇ)  ಮತ್ತು ಭದ್ರತೆಯನ್ನು ನೀಡಬೇಕು. ಆಶಾ ಕಾರ್ಮಿಕರು ಮತ್ತು ಜನರ ನಡುವೆ ಪರಸ್ಪರ ನಂಬಿಕೆ ಇರುವಂತಹ ವಾತಾವರಣವನ್ನು ಸೃಷ್ಟಿಸಬೇಕು. ಯಾವ ಬೆಂಬಲ ಬೇಕು ಎಂಬ ಬಗ್ಗೆ ಆಶಾ ಕಾರ್ಮಿಕರ ಸಂಘದೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕು.

ಸಾಮಾಜಿಕ ಕಾರ್ಯಕರ್ತರ ಈ ನಿಲುವಿಗೆ ರಾಜ್ಯದ ಹಲವಾರು ಸಾಮಾಜಿಕ ಹೋರಟಗಾರರು ಸೇರಿದಂತೆ, ರಾಜ್ಯದ ಗಣ್ಯ ವ್ಯಕ್ತಿಗಳು ಅನುಮೋದನೆ ನೀಡಿ ಸಹಿ ಹಾಕಿದ್ದಾರೆ.


ಇದನ್ನೂ ಓದಿ:  ಪಾದರಾಯನಪುರ ಘಟನೆಯ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಡಿ.ಕೆ. ಶಿವಕುಮಾರ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...