Homeಮುಖಪುಟ12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ

- Advertisement -
- Advertisement -

ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಇದೇ ಎಪ್ರಿಲ್ 15ರಂದು ಕೇಂದ್ರ ಗೃಹ ಸಚಿವಾಲಯವು ಒಂದು ವಿವರವಾದ ಅಧಿಸೂಚನೆಯನ್ನು ಹೊರಡಿಸಿತು. ಅದು ದಿಗ್ಬಂಧಿತವಲ್ಲದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾಂಭಿಸಬಹುದಾದ ಶರತ್ತುಗಳನ್ನು ವಿವರಿಸಿತ್ತು.

ಈ ಆದೇಶವು- “ಸಾಮಾಜಿಕ ಅಂತರ” (ದೈಹಿಕ ಅಂತರ), ಕಾರ್ಮಿಕರಿಗೆ ಖಾಸಗಿ ಸಾರಿಗೆ, ವೈದ್ಯಕೀಯ ವಿಮೆ ಮುಂತಾದ ಕಡ್ಡಾಯವಾದ “ಮಾಡು”, “ಮಾಡಬೇಡ” ನಿಯಮಗಳನ್ನು ಹೇರಿದೆ. ಈ ನಿರ್ದೇಶನಗಳ ಯಾವುದೇ ಉಲ್ಲಂಘನೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆ 2005 (ಎನ್‌ಡಿಎಂಎ)ರ ಅಡಿಯಲ್ಲಿ ಸೆರೆವಾಸ ಸೇರಿದಂತೆ ಭಾರೀ ದಂಡ ವಿಧಿಸಬಹುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಇದಕ್ಕಿಂತ ಎರಡು ದಿನಗಳ ಮೊದಲು, ಅಂದರೆ ಎಪ್ರಿಲ್ 13ರಂದು ಭಾರತದ ಕೇಂದ್ರೀಯ ಕಾರ್ಮಿಕ ಸಂಘ (ಸಿಟಿಯು)ಗಳು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಸರಕಾರವು ಪರಿಗಣಿಸುತ್ತಿರುವುದಾಗಿ ಹೇಳಲಾದ ಕಾರ್ಖಾನೆ ಕಾಯಿದೆ, 1948 (ಎಫ್‌ಎ)ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಈ ತಿದ್ದುಪಡಿಯು ಕಂಪೆನಿಗಳಿಗೆ ಕಾರ್ಖಾನೆಗಳ ಕಾರ್ಮಿಕರಿಗೆ ಕೆಲಸದ ಅವಧಿಯನ್ನು ಈಗಿರುವ- ದಿನಕ್ಕೆ ಎಂಟು ಗಂಟೆ, ವಾರಕ್ಕೆ ಆರು ದಿನ (48ಗಂಟೆ)ದಿಂದ, ದಿನಕ್ಕೆ 12 ಗಂಟೆ, ವಾರಕ್ಕೆ ಆರು ದಿನ (72 ಗಂಟೆ)ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತಿತ್ತು.

ಈ ನಡೆಯು ವಿವಾದಾಸ್ಪದವಾಗಿದೆ. ಏಕೆಂದರೆ, ವಾರಕ್ಕೆ 48 ಗಂಟೆಗಳ ಕೆಲಸವು ಜಾಗತಿಕವಾಗಿ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐಎಲ್ಓ)ದಿಂದ ಒಪ್ಪಿತವಾದ ನಿಯಮವಾಗಿದೆ. ಹಾಗೆ ನೋಡುವುದಾದಲ್ಲಿ ಐಎಲ್ಓ ಅಂಗೀಕರಿಸಿದ ಮೊತ್ತಮೊದಲ ಒಪ್ಪಂದವೇ ಕೆಲಸದ ಅವಧಿ (ಕೈಗಾರಿಕೆ) ಒಪ್ಪಂದ 1919 (ನಂ.1) ಆಗಿದೆ. ಇದಕ್ಕೆ ಭಾರತವು 1921ರಲ್ಲಿಯೇ ಸಹಿ ಹಾಕಿ, ವಾರಕ್ಕೆ 48 ಗಂಟೆಗಳ ಕೆಲಸವನ್ನು ನಿಗದಿಪಡಿಸಿತ್ತು.

ಸರಕಾರವು ಇನ್ನೂ ಕಾರ್ಖಾನೆ ಕಾಯಿದೆಯನ್ನು ತಿದ್ದುಪಡಿ ಮಾಡಿಲ್ಲವಾದರೂ, ಕನಿಷ್ಟ ನಾಲ್ಕು ಸರಕಾರಗಳು ಕಳೆದ ಕೆಲವು ದಿನಗಳ ಅವಧಿಯಲ್ಲಿ ಮೇಲೆ ಹೇಳಿರುವ ರೀತಿಯಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ಅಧಿಸೂಚನೆಗಳನ್ನು ಹೊರಡಿಸಿವೆ. ಅವುಗಳೆಂದರೆ, ರಾಜಸ್ಥಾನ (ಎಪ್ರಿಲ್ 11), ಗುಜರಾತ್ (ಎಪ್ರಿಲ್ 17), ಪಂಜಾಬ್ (ಎಪ್ರಿಲ್ 20) ಮತ್ತು ಹಿಮಾಚಲ ಪ್ರದೇಶ (ಎಪ್ರಿಲ್ 21).

ಇದೇ ಹೊತ್ತಿಗೆ, ಭಾರತದಲ್ಲಿ ಐತಿಹಾಸಿಕವಾಗಿಯೂ ಹಾಗೂ ಇತ್ತೀಚಿನ ವರೆಗೂ ಇದು ಕಾರ್ಮಿಕ ಕಾನೂನುಗಳ “ಸುಧಾರಣೆ” (ವಾಸ್ತವವಾಗಿ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ)ಗಳನ್ನು ಜಾರಿಗೊಳಿಸಲು ಅತ್ಯಂತ ಅನುಕೂಲಕರ ಕಾರ್ಯತಂತ್ರವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆ “ಸುಧಾರಣೆ”ಗಳನ್ನು ಕಾರ್ಮಿಕ ಚಳವಳಿಯು ಸಾಕಷ್ಟು ಒಗ್ಗಟ್ಟಿನಿಂದ ಕೋಟ್ಯಂತರ ಕಾರ್ಮಿಕರ ಬೃಹತ್ ಮುಷ್ಕರಗಳ ಮೂಲಕ ಮತ್ತು ತ್ರಿಪಕ್ಷೀಯ ವೇದಿಕೆಗಳಲ್ಲೂ ಬಲವಾಗಿ ಎದುರಿಸುತ್ತಾ ಬಂದಿದೆ. ಆಗೊಮ್ಮೆ, ಈಗೊಮ್ಮೆ ಅವಕಾಶವಾದಿ ರಾಜಕೀಯ ಪ್ರತಿಪಕ್ಷಗಳ ಬೆಂಬಲವೂ ಅವುಗಳಿಗೆ ಸಿಕ್ಕಿದೆ.

“ಗೊತ್ತುಮಾಡಿ-ವಜಾಮಾಡಿ” (Hire and Fire) ಎಂಬ ಸುಲಭವಾದ “ಸುಧಾರಣೆ”ಗಳು ನಿರುದ್ಯೋಗದಂತಹ ಋಣಾತ್ಮಕ ಪರಿಣಾಮ ಉಂಟುಮಾಡಿ, ಆಳುವ ಪಕ್ಷಗಳಿಗೆ ಪ್ರತಿಕೂಲವಾಗಿ ಪರಿಣಮಿಸಿ ನಷ್ಟ ಉಂಟುಮಾಡುತ್ತವೆ. ಈ ಕಾರಣದಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಕಾಯಿದೆಗಳ ಮೂಲಭೂತ ಸುಧಾರಣೆಯು ಆಳುವ ಪಕ್ಷಗಳಿಗೆ ಸಮಸ್ಯೆ ಉಂಟುಮಾಡುವಂತವುಗಳಾಗಿರುತ್ತದೆ.

ಆಗ, ಇದರಿಂದ ಹೊರಬರಲು ಕೇಂದ್ರ ಸರಕಾರದ ದಾರಿ ಯಾವುದಾಗಿರುತ್ತದೆ? “ಕಾರ್ಮಿಕ” ಎಂಬುದು ಕೇಂದ್ರ ಮತ್ತು ರಾಜ್ಯಗಳ ಸಮಾನ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ, ಕೇಂದ್ರ ಸರಕಾರವು ಮನಸ್ಸಿರುವ ರಾಜ್ಯಗಳಿಗೆ ಈ “ಸುಧಾರಣೆ”ಗಳನ್ನು ಅನುಷ್ಟಾನಗೊಳಿಸಲು ಒತ್ತಾಸೆ ನೀಡುತ್ತದೆ. ನಂತರ, ಮೂಲತಃ ಕೇಂದ್ರ ಸಂಪುಟದ ನಿರ್ಧಾರವೇ ಆಗಿರುವ ರಾಷ್ಟ್ರಪತಿಯವರ ಅಂಗೀಕಾರ ಅವುಗಳಿಗೆ ಸಿಗುತ್ತದೆ.

ಇದೇ ರೀತಿಯಲ್ಲಿ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನ) ಕಾಯಿದೆ 1970ಕ್ಕೆ ಆಗಿನ ‘ಏಕೀಕೃತ’ ಆಂಧ್ರಪ್ರದೇಶವು 2003ರಲ್ಲಿ, ರಾಜಸ್ಥಾನ 2014ರಲ್ಲಿ ಮತ್ತು ಮಹಾರಾಷ್ಟ್ರ 2017ರಲ್ಲಿ ತಿದ್ದುಪಡಿ ತಂದು “ಸುಧಾರಣೆ”ಗಳನ್ನು ಜಾರಿಗೊಳಿಸಿದ್ದವು. ಅದೇ ರೀತಿಯಲ್ಲಿ, 100 ಕಾರ್ಮಿಕರು ಇರುವ ಕೈಗಾರಿಕಾ ಸ್ಥಾಪನೆಗಳಿಗೆ ಅನ್ವಯವಾಗುತ್ತಿದ್ದುದನ್ನು 300ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿರುವ ಸ್ಥಾಪನೆಗಳಿಗೆ ಮಾತ್ರ ಅನ್ವಯವಾಗುವಂತೆ ರಾಜಸ್ಥಾನವು 2014ರಲ್ಲಿ ಅಧ್ಯಾಯ ‘V-ಬಿ’ಗೆ “ಸುಧಾರಣೆ”ಗಳನ್ನು ಜಾರಿಗೊಳಿಸಿತು. ಇದಾದ ಕೂಡಲೇ 2016ರಲ್ಲಿ ಜಾರ್ಖಂಡ್ ಸೇರಿದಂತೆ ಇತರ ಅನೇಕ ರಾಜ್ಯಗಳು ಇದನ್ನು ಅನುಸರಿಸಿದವು.

ಅಂದರೆ, ಕೇಂದ್ರ ಸರಕಾರಕ್ಕೆ ನೇರವಾಗಿ ಜಾರಿಗೊಳಿಸಲು ಸಾಮಾನ್ಯವಾಗಿ ಧೈರ್ಯವಿಲ್ಲದ “ಕಠಿಣ”ವಾದ ಕಾರ್ಮಿಕ ಕಾಯಿದೆ “ಸುಧಾರಣೆ”ಗಳನ್ನು- ಜಾರಿಗೊಳಿಸುವ ಧೈರ್ಯತೋರುವ ರಾಜ್ಯ ಸರಕಾರಗಳತ್ತ ಕೇಂದ್ರವು ತಳ್ಳುತ್ತಿದೆ. ರಾಜ್ಯ ಸರಕಾರಗಳು ಇಂತಹಾ ಕಾನೂನುಗಳನ್ನು ತರಲು ಅರ್ಹವಾಗಿರುವುದರಿಂದ ತಾನು ಏನನ್ನೂ ಮಾಡುವಂತಿಲ್ಲ ಎಂಬ ಅಸಹಾಯಕತೆಯ ಪ್ರದರ್ಶನ ಕೇಂದ್ರ ಸರಕಾರಕ್ಕೆ ಮಾಮೂಲಿಯಾಗಿದೆ.

ಇದೀಗ ಕೋವಿಡ್- 19 ಪಿಡುಗಿನ ಸಂದರ್ಭದಲ್ಲಿ ಇಂತದ್ದೇ ಕಾರ್ಯತಂತ್ರವನ್ನು ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಏರಿಸಲು ಬಳಸಿಕೊಳ್ಳುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಕಾನೂನು ದೋಷಗಳು, ಮಾಲಕರು ತಪ್ಪಿಸಿಕೊಳ್ಳಲು ಸಾಧ್ಯವಾಗುವ ರಂಧ್ರಗಳು ಇತ್ಯಾದಿಗಳು ಇವೆ. ಇವುಗಳಿಗೆ ಹೊರತಾಗಿ ಕಾರ್ಮಿಕರ ಆರೋಗ್ಯ, ಅವರಿಗೆ ಹಕ್ಕಿನಿಂದ ಸಿಗಬೇಕಾದ ವೇತನ- ಸೌಲಭ್ಯಗಳಲ್ಲಿ ಮೋಸ, ಉಳಿದ ಅರ್ಹ/ ಸಶಕ್ತ ಕಾರ್ಮಿಕರಿಗೆ ಉದ್ಯೋಗಾವಕಾಶ ನಷ್ಟ, ಕೈಗಾರಿಕಾ ಸಂಬಂಧಗಳ ಬಿಗಡಾಯಿಸುವಿಕೆ ಮುಂತಾದ ಹಲವಾರು ಸಮಸ್ಯೆಗಳಿದ್ದು, ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.

ಇಷ್ಟಿದ್ದರೂ ಸರಕಾರವು ಕೊರೋನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆ ಗೆ ಹೆಚ್ಚಿಸಿ, ಹಿಂಬಾಗಿಲಿನ ಮೂಲಕ ಅವರಿಗೆ ಘೋರ ಮೋಸ ಮಾಡುತ್ತಿದೆ.

(ಲೇಖಕ  ಕೆ.ಆರ್. ಶ್ಯಾಮ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರು).


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್‌ ಆಗಿ ಬದಲಾದ ಮುಂಬೈ ಮೇಯರ್‌: ಭಾರೀ ಮೆಚ್ಚುಗೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...