Homeನಿಜವೋ ಸುಳ್ಳೋFact check: ಸುಳ್ಳು ವರದಿ ಮಾಡಿ ಕೋಮುದ್ವೇಷ ಹರಡುತ್ತಿರುವ ಝೀ ನ್ಯೂಸ್

Fact check: ಸುಳ್ಳು ವರದಿ ಮಾಡಿ ಕೋಮುದ್ವೇಷ ಹರಡುತ್ತಿರುವ ಝೀ ನ್ಯೂಸ್

- Advertisement -
- Advertisement -

ಏಪ್ರಿಲ್ 24 ರಂದು ಝೀ ನ್ಯೂಸ್ “ಕಬಾಬ್‌ನಲ್ಲೂ ನೀಡುತ್ತಿದ್ದರು ದೈಹಿಕ ತ್ಯಾಜ್ಯ, ವಿದೇಶಗಳಲ್ಲೂ ಜಮಾತಿಗಳ ಮನಸ್ಥಿತಿ” ಎಂಬ ವರದಿಯನ್ನು ಮಾಡಿತ್ತು. ಇದರ ಆರಂಭಿಕ ಆವೃತ್ತಿಯು “ಧಾರ್ಮಿಕ ಮೂಲಭೂತವಾದದಿಂದ ನೀವು ಎಷ್ಟು ದೂರ ಉಳಿಸಬಹುದು? ಇಂತಹ ಮನಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಹರಡಿದೆ. ಬ್ರಿಟನ್‌ನ ಇಬ್ಬರು ಯುವಕರಾದ ಮೊಹಮ್ಮದ್ ಅಬ್ದುಲ್ ಬಾಸಿತ್ ಮತ್ತು ಅಮ್ಜದ್ ಭಟ್ಟಿ ಮುಸ್ಲಿಮೇತರ ಗ್ರಾಹಕರಿಗೆ ಮಾನವನ ದೈಹಿಕ ತ್ಯಾಜ್ಯವನ್ನು ನೀಡುತ್ತಿದ್ದಾರೆ.” ಎಂದು ಬರೆಯಲಾಗಿತ್ತು. ಈ ಲೇಖನವು ಫೇಸ್‌ಬುಕ್‌ನಲ್ಲಿ 12,000 ಷೇರುಗಳನ್ನು ಮತ್ತು 14,000 ಲೈಕ್‌ಗಳನ್ನು ಪಡೆದಿದೆ. ಅದರಲ್ಲಿ “ಅವರು ಮುಸ್ಲಿಮೇತರರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು, ಈಗ ಸತ್ಯ ಹೊರಬಂದಿದೆ” ಎಂಬ ಶಿರ್ಷಿಕೆ ನೀಡಲಾಗಿದೆ.

ಇದಲ್ಲದೆ ಲೇಖನದಲ್ಲಿ “ಮೊಹಮ್ಮದ್ ಅಬ್ದುಲ್ ಬಸಿತ್ ಮತ್ತು ಅಮ್ಜದ್ ಭಟ್ಟಿ ಬ್ರಿಟನ್‌ನಲ್ಲಿ ರೆಸ್ಟೋರೆಂಟ್ ಮಾಲೀಕರಾಗಿದ್ದು, ವರದಿಗಳ ಪ್ರಕಾರ, ಅವರು ಆಹಾರದಲ್ಲಿ ಮಾನವ ಮಲವನ್ನು ಬೆರೆಸಿ ಮುಸ್ಲಿಮೇತರ ಗ್ರಾಹಕರಿಗೆ ನೀಡುತ್ತಿದ್ದರು. ನಾಟಿಂಗ್‌ಹ್ಯಾಮ್‌ನಲ್ಲಿ ಇವರಿಬ್ಬರು ತಮ್ಮ ರೆಸ್ಟೋರೆಂಟನ್ನು ಬಹಳ ಸಮಯದಿಂದ ನಡೆಸುತ್ತಿದ್ದರು. ” ಎಂದು ಮುಂದುವರೆಯುತ್ತದೆ.

ಝೀ ನ್ಯೂಸ್‌ನ ಈ ಲೇಖನ ಇನ್ನೂ ಲೇಖನ msn.com ನಲ್ಲಿ ಲಭ್ಯವಿದೆ. ಅದರ ಆರ್ಕೈವ್ ಲಿಂಕ್ ಅನ್ನು ಇಲ್ಲಿ ವೀಕ್ಷಿಸಬಹುದು. ಲೇಖನದ ಆಯ್ದ ಭಾಗದ ಸ್ಕ್ರೀನ್‌ಶಾಟ್ ಕೆಳಗೆ ಪೋಸ್ಟ್ ಮಾಡಲಾಗಿದೆ. ಝೀ ನ್ಯೂಸ್ ಈ ರೆಸ್ಟೋರೆಂಟ್ ಎರಡು ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಿತ್ತು ಹಾಗೂ  ಮುಸ್ಲಿಮೇತರರಿಗೆ ಮಾನವ ಮಲದ ಜೊತೆಗೆ ಆಹಾರವನ್ನು ನೀಡಲಾಗುತ್ತಿತ್ತು ಎಂದು ಹೇಳಿದೆ.

ಝೀ ನ್ಯೂಸ್ ಈಗ ತನ್ನ ವರದಿಯನ್ನು ನವೀಕರಿಸಿ ಇಂತಹ ಆಹಾರ ಮಾಲಿನ್ಯದ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್‌ನಲ್ಲೂ ವರದಿಯಾಗಿದೆ ಎಂದು ಬರೆದಿದೆ. ಆದರೆ ಲೇಖನದ URL ಇನ್ನೂ “ತಬ್ಲೀಘಿ ಜಮಾತ್ ಮನಸ್ಥಿತಿ” ಎಂದೇ ಇದೆ.

ಝೀ ನ್ಯೂಸ್‌ನ ಈ ವರದಿ ಮೂಲ – ವೈರಲ್ ಆಗಿದ್ದ ಸಂದೇಶ

ಝೀ ನ್ಯೂಸ್‌ನ ಈ ವರದಿ ಏಪ್ರಿಲ್ 21 ರಿಂದ ವೈರಲ್ ಆಗಿರುವ ಸಂದೇಶವೊಂದನ್ನು ಆಧರಿಸಿದೆ. ಈ ಸಂದೇಶವು ಯುಕೆ ಮೂಲದ ಡೈಲಿ ಮೇಲ್‌ನ ಲಿಂಕ್ ಅನ್ನು ಹೊಂದಿದೆ ಇದು ಝೀ ನ್ಯೂಸ್ ವರದಿಯ ಭಾಗವಲ್ಲ. ವರದಿಯೂ ಪಡೆದ ಮೂಲ ಅಥವಾ ಘಟನೆ ಸಂಭವಿಸಿದ ದಿನಾಂಕವನ್ನು ಉಲ್ಲೇಖಿಸದಿರಬಹುದು. ಆದರೆ ಡೈಲಿ ಮೇಲ್ ವರದಿ ಸೆಪ್ಟೆಂಬರ್ 2015 ದ್ದಾಗಿದೆ.

ಫ್ಯಾಕ್ಟ್-ಚೆಕ್

ಈ ವರದಿಯ ಎರಡು ಪ್ರತಿಪಾದನೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ,

1. ವ್ಯಕ್ತಿಯ ಧರ್ಮದ ಆಧಾರದ ಮೇಲೆ ಆಹಾರವು ಕಲುಷಿತಗೊಳಿಸಲಾಗಿದೆಯೇ?

2. ಮಾನವ ಮಲವನ್ನು ಉದ್ದೇಶಪೂರ್ವಕವಾಗಿ ಆಹಾರಕ್ಕೆ ಸೇರಿಸಲಾಗಿದೆಯೇ?

ರೆಸ್ಟೋರೆಂಟ್ ಮಾಲೀಕರು ಮುಸ್ಲಿಮೇತರ ಗ್ರಾಹಕರಿಗೆ ಆರೋಗ್ಯಕರವಲ್ಲದ ಆಹಾರವನ್ನು ನೀಡುತ್ತಿದ್ದರು ಎಂದು ಡೈಲಿ ಮೇಲ್ ವರದಿಯಲ್ಲಿ ಹೇಳಲಾಗಿಲ್ಲ. ಬಿಬಿಸಿ ಮತ್ತು ದಿ ಗಾರ್ಡಿಯನ್ ಸಹ 2015 ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ. ಈ ವರದಿಗಳು ಯಾವುದೆ ಧಾರ್ಮಿಕ ದೃಷ್ಟಿಕೋನವನ್ನು ಹೊಂದಿಲ್ಲ. ಆದ್ದರಿಂದ, ಮೊದಲ ಪ್ರತಿಪಾದನೆ ಸುಳ್ಳಾಗಿದೆ.

ಇನ್ನು ಎರಡನೇ ಪ್ರತಿಪಾದನೆಯ ಬಗ್ಗೆ ಹೇಳುವುದಾದರೆ. ಡೈಲಿ ಮೇಲ್‌ನಲ್ಲಿನ ವರದಿಯ ಪ್ರಕಾರ, ಆಹಾರವು ನಿಜವಾಗಿಯೂ ಮಾನವ ಮಲದಿಂದ ಕಲುಷಿತಗೊಂಡಿತ್ತು, ಆದರೆ ಇದು ಉದ್ದೇಶಪೂರ್ವಕವಾಗಿರಲಿಲ್ಲ, ಸಿಬ್ಬಂದಿ ಕೈ ತೊಳೆಯುವಾಗ ಅಸಮರ್ಪಕವಾಗಿ ಇದ್ದುದರಿಂದಾಗಿತ್ತು. “ನಾಟಿಂಗ್‌ಹ್ಯಾಮ್‌ನ ಖೈಬರ್ ಪಾಸ್ ಟೇಕ್ಅವೇನ ಮೊಹಮ್ಮದ್ ಅಬ್ದುಲ್ ಬಾಸಿತ್ ಮತ್ತು ಅಮ್ಜದ್ ಭಟ್ಟಿ ಅವರಿಂದಾಗಿ 142 ಗ್ರಾಹಕರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ” ಎಂದು ವರದಿ ಹೇಳುತ್ತದೆ. ಇವರಿಬ್ಬರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು £ 25 ಸಾವಿರ ಪೌಂಡ್ ದಂಡ ನೀಡುವಂತೆ ನ್ಯಾಯಮೂರ್ತಿ ಜೆರೆಮಿ ಲೀ ಆದೇಶಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳಪೆ ಸೋಪ್ ಮತ್ತು ಶುದ್ಧ ನೀರಿನಿಂದ ಕೈ ತೊಳೆಯದಿರುವುದು ಇಲ್ಲಿ ಮುಖ್ಯವಾಗಿ ಆಗಿರುವ ತಪ್ಪಾಗಿದೆ.

ದಿ ಗಾರ್ಡಿಯನ್ ಪ್ರಕಟಿಸಿದ ವರದಿಯಲ್ಲಿ, “ಟೇಕ್ಅವೇ ಸಿಬ್ಬಂದಿಗಳು ಶೌಚಾಲಯ ಬಳಸಿ ಸರಿಯಾಗಿ ಕೈತೊಳೆಯುದರಿಂದ 100 ಕ್ಕೂ ಹೆಚ್ಚು ಗ್ರಾಹಕರು ಎರಡು ತಿಂಗಳವರೆಗೆ ಕಾಯಿಲೆಯಿಂದ ಬಳಲುತ್ತಿದ್ದರು” ಎಂದು ವರದಿ ಮಾಡಿತ್ತು.

ನಾಟಿಂಗ್‌ಹ್ಯಾಮ್‌ ಸಿಟಿ ಕೌನ್ಸಿಲ್‌ನ ಆಹಾರ, ಆರೋಗ್ಯ ಮತ್ತು ಸುರಕ್ಷತಾ ತಂಡದ ಪಾಲ್ ಡೇಲ್ಸ್ ಅವರ ಹೇಳಿಕೆಯನ್ನು ಬಿಬಿಸಿ  ವರದಿಯು ಹೊಂದಿದೆ – “ಕೆಲವು ಕಾರ್ಮಿಕರ ಕೈ ತೊಳೆಯುವ ಪದ್ಧತಿಗಳು ಸಂಪೂರ್ಣವಾಗಿ ಅಸಮರ್ಪಕವಾಗಿದೆ. ಇದರಿಂದಾಗಿ ಆಹಾರವು ಕಲುಷಿತಗೊಳ್ಳಲು ಕಾರಣವಾಯಿತು. ರೆಸ್ಟೋರೆಂಟ್ ಮಾಲೀಕರನ್ನು 12 ತಿಂಗಳು ಅಮಾನತುಗೊಳಿಸಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.”

ಆದ್ದರಿಂದ, ಮಾನವ ಮಲವನ್ನು ಉದ್ದೇಶಪೂರ್ವಕವಾಗಿ ಆಹಾರಕ್ಕೆ ಸೇರಿಸಲಾಗಿದೆ ಎಂಬ ಹೇಳಿಕೆಯೂ ಸುಳ್ಳು ಎಂದು ಸಾಬೀತು ಮಾಡಬಹುದು.

‘ದಿ ಖೈಬರ್ ಪಾಸ್’ ರೆಸ್ಟೋರೆಂಟ್ ಈಗ ಸಕ್ರಿಯವಗಿದ್ದು, ಆದರೆ ಇದು tripadvisor.com ನಲ್ಲಿ ಉತ್ತಮ ವಿಮರ್ಶೆಗಳನ್ನು ಹೊಂದಿಲ್ಲ. ಹಲವಾರು ಜನರು ಆರೋಗ್ಯಕರವಲ್ಲದ ಮಾನದಂಡಗಳ ಬಗ್ಗೆ ದೂರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಝೀ ನ್ಯೂಸ್ 2015 ರ ಘಟನೆ ವರದಿಯನ್ನು ಧಾರ್ಮಿಕ ದೃಷ್ಟಿಕೋನ ನೀಡಿ ಸುಳ್ಳುಗಳನ್ನು ಬೆರೆಸಿ ವರದಿ ಮಾಡಿದೆ.

ಕೃಪೆ: ಆಲ್ಟ್ ನ್ಯೂಸ್


ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಕಟಿಸಿ ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...