Homeಮುಖಪುಟಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂದು ವಿವಾದವೆಬ್ಬಿಸಿದ ಯುಪಿ ಶಾಸಕ

ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂದು ವಿವಾದವೆಬ್ಬಿಸಿದ ಯುಪಿ ಶಾಸಕ

- Advertisement -
- Advertisement -

ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸುರೇಶ್ ತಿವಾರಿ ಮುಸ್ಲಿಮರಿಂದ ತರಕಾರಿ ಗಳನ್ನು ಖರೀದಿಸಬಾರದು ಎಂದು ಜನರಿಗೆ ಎಚ್ಚರಿಕೆ ನೀಡುವ ವಿಡಿಯೊ ವೈರಲಾಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಆದರೆ ತಿವಾರಿ “ನಾನು ಏನಾದರೂ ತಪ್ಪು ಹೇಳಿದ್ದೇನಾ ?” ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೈರಲಾಗಿದ್ದ ವಿಡಿಯೊದಲ್ಲಿ “ಒಂದು ವಿಷಯವನ್ನು ನೆನಪಿನಲ್ಲಿಡಿ. ನಾನು ಎಲ್ಲರಿಗೂ ಹೇಳುತ್ತಿದ್ದೇನೆ. ಮಿಯಾಗಳಿಂದ(ಮುಸ್ಲಿಮರು) ತರಕಾರಿಗಳನ್ನು ಖರೀದಿಸುವ ಅಗತ್ಯವಿಲ್ಲ” ಎಂದು ಹೇಳುವುದನ್ನು ಕೇಳಬಹುದು.

ವಿವಾದದ ಬಗ್ಗೆ ಸುರೇಶ್ ತಿವಾರಿ ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದಾರೆ, “ನಾನು ನನ್ನ ಕ್ಷೇತ್ರದಲ್ಲಿ 10-12 ಜನರ ಗುಂಪಿನೊಂದಿಗೆ ಸಂವಹನ ಮಾಡುತ್ತಾ, ಲಾಕ್ ಡೌನ್ ಬಗ್ಗೆ ನಾವು ಸಂವಾದ ನಡೆದ್ದೆವು. ಮುಸ್ಲಿಂ ತರಕಾರಿ ಮಾರಾಟಗಾರರು ಅದರ ಮೇಲೆ ಉಗುಳುತ್ತಿದ್ದಾರೆ ಎಂದು ನನಗೆ ತಿಳಿಸಿದ್ದರಿಂದ, ನಾನು ಹಾಗೆ ಹೇಳಿದ್ದೇನೆ” ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಒವೈಸಿ ಹಿಂದೂಗಳ ವಿರುದ್ದ ಆಕ್ಷೇಪಾರ್ಹ ವಿಷಯಗಳನ್ನು ಹೇಳುತ್ತಾರೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ಹರಡುವುದೇಗೆಂದು ಮುಸ್ಲಿಂ ಯುವಕನಿಂದ ಟಿಕ್‌ಟಾಕ್‌? ಈ ಸುದ್ದಿ ನಿಜವೇ?


ಕೊರೊನಾ ಸಾಂಕ್ರಾಮಿಕವು ಎಲ್ಲರನ್ನೂ ಸಮಾನವಾಗಿ ಪರಿಣಾಮ ಬೀರುತ್ತದೆ ಎಂದು ಕಳೆದ ವಾರ ಪ್ರಧಾನಿ ಮೋದಿ ಹೇಳಿದ್ದರು. “ಕೊರೊನಾ ಜನಾಂಗ, ಧರ್ಮ, ಬಣ್ಣ, ಜಾತಿ, ಮತ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ. ನಾವು ಒಗ್ಗಟ್ಟಿನಿಂದ ಇದಬೇಕು” ಎಂದು ಪ್ರಧಾನಿ ಮೋದಿ ಲಿಂಕ್ಡಿನ್‌ ಪೋಸ್ಟ್‌ನಲ್ಲಿ ತಿಳಿಸಿದ್ದರು.

ತಿವಾರಿಯ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಟೀಕಿಸಿದ್ದಾರೆ. ನಟಿ ಹಾಗೂ ಕಾಂಗ್ರೆಸ್ ನಾಯಕಿ ನಗ್ಮಾ “ಮೋದಿ ಮೊದಲು ನಿಮ್ಮ ಜನರಿಗೆ ಪಾಠ ಕಲಿಸಿ” ಎಂದು ಟ್ವೀಟಿಸಿದ್ದಾರೆ.

 

ಉತ್ತರಪ್ರದೇಶದಲ್ಲಿ, ಕೊರೊನಾ ವೈರಸ್ ಬಗೆಗಿನ ವದಂತಿಗಳನ್ನು ನಂಬಿ ಮುಸ್ಲಿಂ ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಹಲವಾರು ಘಟನೆಗಳು ವರದಿಯಾಗಿವೆ.

ಲಖಿಂಪುರದ ಮುಸ್ಲಿಂ ಹಣ್ಣು ಮಾರಾಟಗಾರನನ್ನು ಕಲ್ಲಂಗಡಿಗಳನ್ನು ಮಾರಾಟ ಮಾಡುವ ಮೊದಲು ಉಗುಳಿದ್ದಾರೆ ಎಂದು ಆರೋಪಿಸಲಾಗಿತ್ತು. ವ್ಯಕ್ತಿಯೊಬ್ಬ ಅತ್ತು ಕೈಮುಗಿದು ತಾನು ಯಾವುದೇ ತಪ್ಪು ಮಾಡಿಲ್ಲ ಹಾಗು ನನಗೆ ಹೋಗಲು ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿರುವ ವಿಡಿಯೊ ವೈರಲಾಗಿತ್ತು. ಆದರೆ ಯುಪಿ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ರಕ್ಷಿಸಿ, ಮಾರಾಟಗಾರರ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ತಿಳಿಸಿದೆ.

ಕೆಲವು ದಿನಗಳ ಹಿಂದೆ ಕೂಡಾ ಮಹೋಬಾ ಜಿಲ್ಲೆಯ ತರಕಾರಿ ಮಾರಾಟಗಾರರು ತಮ್ಮನ್ನು ಬೆದರಿಸಲಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದು ದೂರು ನೀಡಿದ್ದರು. ಆದರೆ ಜಿಲ್ಲಾಡಳಿತವು ವಿಚಾರಣೆ ನಡೆಸಿ ಆರೋಪವನ್ನು ದೃಡೀಕರಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ.


ಇದನ್ನೂ ಓದಿ: ಕೊರೊನಾ ಹರಡಲು ಮುಸ್ಲಿಂ ವ್ಯಕ್ತಿ ಪೆಟ್ರೋಲ್‌ ಪಂಪ್‌ನಲ್ಲಿ ನೋಟು ಎಸೆದನೆ ??


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...