HomeಮುಖಪುಟIrrfan Khan Passes Away: ಪ್ರಸಿದ್ಧ ಹಿಂದಿ ನಟ ಇರ್ಫಾನ್ ಖಾನ್ ಇನ್ನಿಲ್ಲ

Irrfan Khan Passes Away: ಪ್ರಸಿದ್ಧ ಹಿಂದಿ ನಟ ಇರ್ಫಾನ್ ಖಾನ್ ಇನ್ನಿಲ್ಲ

- Advertisement -
- Advertisement -

ಪ್ರಸಿದ್ದ ಹಿಂದಿ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಕೊಲೊನ್ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಮಂಗಳವಾರ ಮುಂಬೈಯ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನಿಗೆ ಮಾರ್ಚ್ 2018 ರಲ್ಲಿ ನ್ಯೂರೋಎಂಡೋಕ್ರೈನ್ ಗೆಡ್ಡೆ ಇರುವುದು ಪತ್ತೆಯಾಯಿತ್ತು.

ನಟನ ಸಾವಿಗೆ ಚಿತ್ರರಂಗ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ನಿರ್ದೇಶಕ ಶೂಜಿತ್ ಸರ್ಕಾರ್‌ “ನನ್ನ ಪ್ರೀತಿಯ ಸ್ನೇಹಿತ, ನೀನು ಹೋರಾಡಿದೆ, ಹೋರಾಡಿದೆ ಮತ್ತು ಹೋರಾಡಿದೆ, ನಿನ್ನ ಮೇಲೆ ನನಗೆ ಹೆಮ್ಮೆಯಿದೆ. ಮತ್ತೆ ಭೇಟಿಯಾಗೋಣ, ಓಂ ಶಾಂತಿ, ಸೆಲ್ಯೂಟ್ ಇರ್ಫಾನ್ ಖಾನ್” ಎಂದು ಟ್ವೀಟ್ ಮಾಡಿದ್ದಾರೆ.

ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರು ಇರ್ಫಾನ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪ್ರಸನ್ನ ಅವರ ನೇರ ಶಿಷ್ಯರಾಗಿದ್ದ ಇರ್ಫಾನ್ ಅವರೊಂದಿಗೆ ದೀರ್ಘಕಾಲದ ಸ್ನೇಹ ಒಡನಾಟ ಹೊಂದಿದ್ದರು. ಮೈಸೂರಿನ ಬದನವಾಳುವಿನಲ್ಲಿ ಪ್ರಸನ್ನ ಕೈಗೊಂಡಿದ್ದ ಸತ್ಯಾಗ್ರಹಕ್ಕೆ ಬೆಂಬಲಿಸಿ ಸತ್ಯಾಗ್ರಹದಲ್ಲಿ ಇರ್ಫಾನ್‌ ಪಾಲ್ಗೊಂಡಿದ್ದರು.

My student, friend, Gram Seva Sangh important activist, Actor Irrfan Khan's health is deteriorated seriously. We are…

Posted by Prasanna Heggodu Vols Handle on Tuesday, April 28, 2020

54 ವರ್ಷದ ನಟ, ಪತ್ನಿ ಸುತಪಾ ಸಿಕ್ದಾರ್ ಹಾಗೂ ಪುತ್ರರಾದ ಬಾಬಿಲ್ ಮತ್ತು ಅಯಾನ್ ಖಾನ್ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇರ್ಫಾನ್ ಅವರ ತಾಯಿ ಸಯೀದಾ ಬೇಗಂ ಅವರು ತಮ್ಮ 95 ನೇ ವಯಸ್ಸಿನಲ್ಲಿ ಜೈಪುರದಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದರು.

ಇರ್ಫಾನ್ ಖಾನ್ ಕೊನೆಯ ಬಾರಿಗೆ “ಆಂಗ್ರೆಜಿ ಮೀಡಿಯಂ” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭಾರತದಲ್ಲಿ ಲಾಕ್‌ಡೌನ್ ಹೇರುವ ಒಂದು ವಾರದ ಮೊದಲು ಬಿಡುಗಡೆಯಾಗಿತ್ತು. ಆನಾರೋಗ್ಯದಿಂದಾಗಿ ನಟ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಚಿತ್ರದ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

 

ಇರ್ಫಾನ್ ನಟಿಸಿದ ಪ್ರಮುಖ ಚಿತ್ರಗಳು.

  • ಸಲಾಂ ಬಾಂಬೆ
  • ಮಕ್ಬೂಲ್
  • ಲೈಫ್ ಇನ್ ಎ ಮೆಟ್ರೋ
  • ದಿ ನೇಮ್ ಸೇಕ್
  • ಮುಂಬೈ ಮೇರಿ ಜಾನ್
  • ಸ್ಲಂ ಡಾಗ್ ಮಿಲೇನನಿಯರ್
  • ಬಿಲ್ಲು
  • ಪಾನ್ ಸಿಂಗ್ ತೋಮರ್
  • ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್
  • ಲೈಫ್ ಆಫ್ ಪೈ
  • ಲಂಚ್ ಬಾಕ್ಸ್
  • ಪೀಕು
  • ಜುರಾಸಿಕ್ ವಲ್ಡ್
  • ಕಾರ್ವಾ
  • ಮದಾರಿ
  • ಹಿಂದಿ ಮೀಡಿಯಂ
  • ಅಂಗ್ರೇಜಿ ಮೀಡಿಯಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇರ್ಫಾನ್‌ ಖಾನ್‌ ರ ಇಂಗ್ಲೀಷ್‌ ಚಿತ್ರ ವಾರಿಯರ್‌, ಅದ್ಭುತ ಸಿನೆಮಾ. ಈ ಸಿನೆಮಾದಲ್ಲಿ ಅವರ ಅಭಿನಯ ತುಂಬಾ ಚೆನ್ನಾಗಿದೆ. ಅವರ ಅಭಿಮಾನಿಗಳು ಈ ಸಿನೆಮಾ ನೋಡಬಹುದು.

LEAVE A REPLY

Please enter your comment!
Please enter your name here

- Advertisment -

SIR ಪ್ರಕ್ರಿಯೆಗೆ 6 ತಿಂಗಳ ಕಾಲಾವಕಾಶ ನೀಡಿ: ಸೆಪ್ಟೆಂಬರ್ 1 ರಂದು ‘ಎಲೆಕ್ಷನ್ ಕಮಿಷನ್ ಚಲೋ’ ಗೆ ಒಕ್ಕೂಟ ಕರೆ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅವೈಜ್ಞಾನಿಕ ಧೋರಣೆ ಹಾಗೂ ಗೊಂದಲಮಯ ಕ್ರಮಗಳನ್ನು ತೀವ್ರವಾಗಿ ಖಂಡಿಸಿರುವ 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ', ಮತದಾರರ ಹಕ್ಕುಗಳನ್ನು...

ನೇಪಾಳದಲ್ಲಿ ದಿಢೀರ್ ಪ್ರವಾಹ : 105 ಭಾರತೀಯರು ಸೇರಿದಂತೆ 384 ಮಂದಿ ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಬುಧವಾರ (ಆ.26) ಬೆಳಿಗ್ಗೆ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ 105 ಭಾರತೀಯ ಪ್ರಜೆಗಳು ಸೇರಿದಂತೆ ಕನಿಷ್ಠ 384...

ರಾಜ್ಯದಲ್ಲಿ 102 ತಾಲೂಕುಗಳಲ್ಲಿ ಬರ: ಡಿಸಿಎಂ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಿಸಲಾಗುವುದು ಹಾಗೂ ಪ್ರತಿ ವಾರವೂ...

ಪ. ಬಂಗಾಳ SIR : ನ್ಯಾಯಮಂಡಳಿಗಳಿಂದ ಇದುವರೆಗೆ ಕೇವಲ 2.17% ಮೇಲ್ಮನವಿಗಳ ಇತ್ಯರ್ಥ; ಇನ್ನು 37 ಲಕ್ಷಕ್ಕೂ ಹೆಚ್ಚು ಬಾಕಿ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಗವಾಂಗೋಲಾದ ನಿವಾಸಿಯಾದ ಮೊಹಮ್ಮದ್ ದುವಾಲ್ ಅಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ತವ್ಯದ ಅವಧಿಯಲ್ಲಿ ಗುಂಡೇಟಿಗೆ ಒಳಗಾಗಿದ್ದರು. ಪ್ರಾಣಾಪಾಯದಿಂದ ಬದುಕುಳಿದ ಅವರು ನಂತರ ಭಾರತೀಯ ರೈಲ್ವೆಯಲ್ಲಿ ಕೆಲಸ...

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...

ಕರ್ನಾಟಕದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

ಬೀದಿ ಬದಿ ವ್ಯಾಪಾರಿಗಳ ತೆರವು ಅಕ್ರಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ...

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...