ಅಮೆರಿಕದ ಶ್ವೇತಭವನವು ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಅನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಿದ ಸುಮಾರು ಮೂರು ವಾರಗಳ ನಂತರ ಶ್ವೇತಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್ ಈಗ ಅವರೆಲ್ಲರನ್ನೂ ಅನ್‌ಫಾಲೋ ಮಾಡಿದೆ. ಶ್ವೇತಭವನವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷರ ಅಧಿಕೃತ ನಿವಾಸವಾಗಿದೆ.
ಏಪ್ರಿಲ್ 10 ರ ಸುಮಾರಿಗೆ ಶ್ವೇತಭವನವು ಪಿಎಂ ಮೋದಿ, ಅವರ ಕಚೇರಿ (ಪಿಎಂಒ) ಮತ್ತು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರನ್ನು ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ಅನುಸರಿಸಿತು. ಇದರೊಂದಿಗೆ, ಪಿಎಂ ಮೋದಿ ಮತ್ತು ಅಧ್ಯಕ್ಷ ಕೋವಿಂದ್ ಅವರು ಟ್ವಿಟ್ಟರ್‌ನಲ್ಲಿ ಶ್ವೇತಭವನವು ಅನುಸರಿಸಿದ ಏಕೈಕ ವಿಶ್ವ ನಾಯಕರಾಗಿದ್ದರು. ಶ್ವೇತಭವನವು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ನವದೆಹಲಿಯ ಯುಎಸ್ ರಾಯಭಾರ ಕಚೇರಿಯನ್ನು ಸಹ ಅನುಸರಿಸಿತ್ತು.
ಭಾರತದಲ್ಲಿ ಈ ಸುದ್ದಿ ಮಿಂಚಿನ ವೇಗದಲ್ಲಿ ಹರಡಿ ನರೇಂದ್ರ ಮೋದಿಯವರು ವಿಶ್ವನಾಯಕರು ಎಂದೆಲ್ಲಾ ಕೊಂಡಾಡಲಾಗಿತ್ತು.
ಇದರೊಂದಿಗೆ, ಶ್ವೇತಭವನವು 19 ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ಅನುಸರಿಸುತ್ತಿತ್ತು ಮತ್ತು ಸುಮಾರು 21.5 ಮಿಲಿಯನ್ ಅನುಯಾಯಿಗಳನ್ನು ಹೊಂದಿತ್ತು. ಆದರೆ ಈಗ ಅದು ಕೇವಲ 13 ಖಾತೆಗಳನ್ನು ಅನುಸರಿಸುತ್ತಿದೆ ಭಾರತೀಯ ಮೂಲದ ಎಲ್ಲವನ್ನು ಅನ್‌ಫಾಲೋ ಮಾಡಿದೆ.
ಕೇವಲ ಮೂರು ವಾರಗಳ ಅವಧಿಯಲ್ಲಿ ಫಾಲೋ ಮತ್ತು ಅನ್‌ಫಾಲೋ ಮಾಡಲು ಕಾರಣವೇನೆಂದು ಸಮರ್ಪಕವಾಗಿ ತಿಳಿದುಬಂದಿಲ್ಲ. ಏಪ್ರಿಲ್ 7 ರಂದು ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧಿಸುವ ಭಾರತದ ನಿರ್ಧಾರದ ಕುರಿತು ಪ್ರತಿಕಾರದ ಮಾತುಗಳನ್ನಾಡಿ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಅಂದೇ ಭಾರತದ ಪ್ರಧಾನಿ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧವನ್ನು ಹಿಂತೆಗೆದುಕೊಂಡಿದ್ದರು. ಆಗ ಅಮೆರಿಕಾ ಭಾರತದೊಂದಿಗೆ ನಮಗೆ ಆತ್ಮೀಯ ಸಂಬಂಧವಿದೆ ಎಂದು ಕೊಂಡಾಡಿದ್ದರು.
Extraordinary times require even closer cooperation between friends. Thank you India and the Indian people for the decision on HCQ. Will not be forgotten! Thank you Prime Minister @NarendraModi for your strong leadership in helping not just India, but humanity, in this fight!
— Donald J. Trump (@realDonaldTrump) April 8, 2020
“ಅಸಾಧಾರಣ ಸಮಯಗಳಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರ ಬೇಕಾಗುತ್ತದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಕುರಿತ ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು. ಇದನ್ನು ಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆಗೂ ಸಹಾಯ ಮಾಡುವಲ್ಲಿ ನಿಮ್ಮ ಪ್ರಬಲ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು!”ಎಂದು ಏಪ್ರಿಲ್ 8 ರಂದು ಟ್ರಂಪ್ ಟ್ವೀಟ್ ಮಾಡಿದ್ದರು.
ಅಲ್ಲದೇ ಏಪ್ರಿಲ್ 10ರಂದು ವೈಟ್ ಹೌಸ್ ಟ್ವಿಟ್ಟರ್ ಖಾತೆಯಿಂದ ಭಾರತದ ಐದು ಟ್ವಿಟ್ಟರ್ ಅಕೌಂಟ್‌ಗಳನ್ನು ಫಾಲೋ ಮಾಡಲಾಗಿತ್ತು. ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸಿದ ನಂತರ ಅನ್‌ಫಾಲೋ ಮಾಡಲಾಗಿದೆ. ಅಂದರೆ ಕೆಲಸ ಮಗಿದ ಮೇಲೆ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: 50 ಬಂಡವಾಳಿಗರ ಸಾಲ Write Off: ರಾಹುಲ್ ದಾಳಿಗೆ ಉತ್ತರವಾಗಿ ನಿರ್ಮಲ ಸೀತಾರಾಮನ್‌ರವರ 13 ಟ್ವೀಟ್‌ಗಳು


