Homeಸಾಮಾಜಿಕಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

ಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

- Advertisement -
- Advertisement -

ಗೌರವಾನ್ವಿತ ಸ್ವಾಮೀಜಿಗಳೆ,

ಬಸವ ತತ್ವ ಅಸ್ತಿತ್ವಕ್ಕೆ ಬಂದ ಮೇಲೆ ಬಸವ ಅನುಯಾಯಿಗಳು ಜಾತಿ, ಮತ, ಪಂಥಗಳನ್ನು ತೊರೆದು ನಿಜ ಮಾನವರಾಗಿ ಬಾಳಬೇಕೆಂದು ತೀರ್ಮಾನಿಸಿದರೆಂಬುದು ತಿಳಿದ ಸಂಗತಿ. ಆದರೆ ಬಸವ ತತ್ವದ ಅಸ್ತಿತ್ವಕ್ಕೆ ಮುಂಚೆಯೇ ನಮ್ಮದು ಲಿಂಗಾಯತ ಮತ ಇತ್ತೆಂಬ ವಾದವನ್ನು ಪಂಚಾಚಾರ್ಯರು ಮುಂದಿಟ್ಟಿದ್ದಾರೆ. ಈಗ ಬಸವ ತತ್ವದವರಿಗೂ ತಮ್ಮ ರಂಭಾಪುರಿ ಮಠದವರಿಗೂ ನಡುವೆ ಹೋರಾಟ ಶುರುವಾಗಿದೆ. ಈ ಭಿನ್ನಾಭಿಪ್ರಾಯದ ವಿಚಾರವನ್ನು ಉಭಯತ್ರರೂ ಕೂತು, ಗೌರವಯುತವಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬಹುದಿತ್ತು. ಬದಲಿಗೆ ನಿಮ್ಮ ಜಗಳ ಈಗ ಬೀದಿಗೆ ಬಂದಿದೆ.

ತಾವುಗಳು ಶಿವನ ಭಕ್ತರಿಗೂ ಹಾಗೂ ಬಸವನ ಅನುಯಾಯಿಗಳಿಗೂ ನಡುವೆ ಸಾಮರಸ್ಯ ಮೂಡಿಸುವ ಬದಲಿಗೆ ವೈಮನಸ್ಯ ಹೆಚ್ಚಾಗಲು ಕಾರಣರಾಗಿದ್ದೀರಿ ಎಂಬುದನ್ನು ಅತ್ಯಂತ ನೋವಿನಿಂದ ಹೇಳಲೇಬೇಕಿದೆ. ಮಠಾಧಿಪತಿಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬಿತ್ತಬೇಕು. ಅದು ಬಿಟ್ಟು ನಿಮ್ಮ ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ನೀವೇ ಬೀದಿ ಹೋರಾಟಕ್ಕಿಳಿದರೆ ತಾವು ಭಕ್ತರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ?

ತಮ್ಮ ಅನುಯಾಯಿಗಳ ನಡುವೆಯೇ ತಾವು ಸಾಮರಸ್ಯ ಸಾಧಿಸಲಾಗದಿದ್ದ ಮೇಲೆ ಮತ್ತೇನನ್ನು ಸಾಧಿಸುತ್ತೀರಿ? ಹೋಗಲಿ, ಇಂಥ ಮಠಗಳಿದ್ದು ಸಮಾಜಕ್ಕೆ ಪ್ರಯೋಜನವಾದರೂ ಏನು?

ಭಿನ್ನಮತಗಳ ಕಾರಣಕ್ಕೆ ಮಠಾಧೀಶರಾದ ತಾವುಗಳೇ ಬೀದಿಗಿಳಿದಿರುವ ಸನ್ನಿವೇಶದಲ್ಲಿ ಜನಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾರ ಬಳಿಗೆ ಹೋಗಬೇಕು?

ಇದು ನಿಮಗೆ ಸಲ್ಲದು. ಇದು ಮಠಾಧೀಶರಿಗೆ ತಕ್ಕುನಾದ ನಡೆಯಲ್ಲ. ನಿಮ್ಮ ಮಾತುಗಳು ಹಾಗೂ ನಡವಳಿಕೆ ಜನರಿಗೆ ಅಸಹ್ಯ ಉಂಟುಮಾಡುತ್ತಿವೆ. ಹೆಂಡ, ಹಣ ಹಂಚಿ ಓಟು ಗಳಿಸುವ ರಾಜಕಾರಣಿಗಳ ಮಟ್ಟಕ್ಕೆ ಕೆಲವು ಮಠಾಧೀಶರು ಇಳಿದಿರುವುದು ಜನರಲ್ಲಿ ಜಿಗುಪ್ಸೆ ಮೂಡಿಸಿದೆ.

ನಿಮಗೆ ರಾಜ್ಯಾಂಗದ ಪರಿಕಲ್ಪನೆಯೇ ಇಲ್ಲವೇ? ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಸಾರುವ ರಾಜ್ಯಾಂಗದ ಮಹತ್ವದ ಬಗ್ಗೆ ಅರಿವಿದೆಯೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಮಠಾಧೀಶರೆನಿಸಿಕೊಂಡ ತಾವು ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು, ಆದರ್ಶಗಳನ್ನು ಬೋಧಿಸಬೇಕೆಂಬುದು ಶ್ರೀಸಾಮಾನ್ಯರ ಅಪೇಕ್ಷೆ.

ಈ ಹಿಂದೆ ಸಿರಿಗೆರೆ ಮಠದವರು ಜಗಳೂರು ಕ್ಷೇತ್ರದಲ್ಲಿ ಭ್ರಷ್ಟಾಚಾರರಹಿತವಾಗಿ, ಸೌಹಾರ್ದಯುತವಾಗಿ ಚುನಾವಣೆ ನಡೆಸುವ ಪ್ರಯೋಗ ಮಾಡಿದ್ದಾರೆ. ಜನರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ್ದಾರೆ. ಇದು ಸಂತರು, ಸನ್ಯಾಸಿಗಳು ಮಾಡಬೇಕಾದ ಮಾದರಿ ಕೆಲಸ. ಆದರೆ ತಾವು ಇಂಥಾ ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗವನ್ನು ತುಳಿದಿದ್ದೀರಿ. ತಮ್ಮ ಮೇಲೆ ವಿಶ್ವಾಸವಿರಿಸಿರುವ ಭಕ್ತರನ್ನು ದಿಕ್ಕುತಪ್ಪಿಸುವ ಕೃತ್ಯದಲ್ಲಿ ತೊಡಗಿದ್ದೀರಿ.

ಸ್ವಾಮಿಗಳೇ,
ಇಂದಿನ ರಾಜಕೀಯ ಯಾವ ಹಂತಕ್ಕೆ ತಲುಪಿದೆಯೆಂಬುದು ಪಾಮರರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ನಿತ್ಯವೂ ಜನರಿಗೆ ಉಪದೇಶ ಮಾಡುವ ತಮಗೆ ಈ ವಿಷಯ ತಿಳಿಯದೇ ಹೋಗಿರುವುದು ವಿಷಾದಕರ. ಅಧೋಗತಿಗಿಳಿದಿರುವ ರಾಜಕೀಯದ ಜೊತೆಗೆ ಧರ್ಮವನ್ನು ಬೆರೆಸುವ ನಿಮ್ಮ ಕೃತ್ಯದಿಂದ ಸಮಾಜವನ್ನು ಮತ್ತಷ್ಟು ವಿಪ್ಪತ್ತಿಗೆ ದೂಡಿದಂತಾಗುತ್ತದೆ.

ಮಠಾಧೀಶರೆನಿಸಿಕೊಂಡವರು ಜನರಿಗೆ ಸಾತ್ವಿಕ ಮಾರ್ಗ ಸೂಚಿಸುವ ಮಹತ್ಕಾರ್ಯ ಮಾಡಬೇಕಿತ್ತು. ಆದರೆ ಅದು ಬಿಟ್ಟು ರಾಜಕೀಯ ಪಕ್ಷಗಳಿಗೆ ಓಟು ಹಾಕಿಸುವ ಏಜೆಂಟರಂತೆ ವರ್ತಿಸುತ್ತಿರುವ ನಿಮ್ಮ ನಡೆ ಖಂಡನಾರ್ಹವಾದುದು. ಇದು `ಮಠಾಧೀಶ’ರ ಸ್ಥಾನಮಾನಕ್ಕೆ ಎಸಗುವ ಮಹಾಪರಾಧವಾಗುತ್ತದೆ. ಪೀಠಕ್ಕೆ ಮಾಡುವ ದ್ರೋಹವಾಗುತ್ತದೆ.

ಆದ್ದರಿಂದ ತಮ್ಮಲ್ಲಿ ನನ್ನ ಕಳಕಳಿಯ ಮನವಿ ಇಷ್ಟೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ದಯಮಾಡಿ ತಮ್ಮ ಬೀದಿ ಕಚ್ಚಾಟವನ್ನು ಕೂಡಲೇ ನಿಲ್ಲಿಸಿ, ತಮ್ಮ ತಾತ್ವಿಕ ಭಿನ್ನಮತವನ್ನು ಸೌಹಾರ್ದಯುತ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಿ. ಹಾಗೆಯೆ ತಮ್ಮ ರಾಜಕೀಯ ಪ್ರೇರಿತ ನಡವಳಿಕೆಗಳನ್ನು ಬದಲಿಸಿಕೊಂಡು ಪೀಠದ ಗೌರವವನ್ನು ಹಾಗೂ ತಮ್ಮ ಸ್ಥಾನಮಾನದ ಘನತೆಯನ್ನು ಕಾಪಾಡುತ್ತೀರೆಂದು ಆಶಿಸುತ್ತೇನೆ.

ವಂದನೆಗಳೊಂದಿಗೆ,
ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....