Homeಮುಖಪುಟಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

ಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

- Advertisement -
- Advertisement -

ದಿನನಿತ್ಯದ ಊಟದ ಅಗತ್ಯವಿರುವಂತೆಯೇ ದಿನನಿತ್ಯದ ನ್ಯಾಯವೂ ಅಗತ್ಯ ಮತ್ತು ಅದು ದಿನದ ಕೆಲವು ಹೊತ್ತು ಕೂಡಾ ಅಗತ್ಯ ಎಂದು ನಾಟಕಕಾರ ಬರ್ಟೋಲ್ಡ್ ಬ್ರೆಷ್ಟ್ (ಬ್ರೆಕ್ಟ್- Bertolt Brecht) ಹೇಳಿದ್ದಾನೆ. ಸುಪ್ರೀಂಕೋರ್ಟ್ ಈ ವಿಷಯವನ್ನು ನೆನಪಿಡದಿದ್ದಲ್ಲಿ ಜಾರ್ಜ್ ಓರ್ವೆಲ್‌ನ ದಬ್ಬಾಳಿಕೆಯ ಪ್ರಪಂಚವು ಸುಲಭದಲ್ಲಿ ನಿಜವಾಗಬಹುದು.

ಎ.ಪಿ. ಶಾ (ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶರು)

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನಾವು ಉದಾಸೀನದಿಂದ ಕಾಣುತ್ತಿರುವ ಅನೇಕ ಸ್ವಾತಂತ್ರ್ಯಗಳು ಅಭದ್ರ ನೆಲದ ಮೇಲೆ ನಿಂತಿವೆ ಎಂದು ಇತ್ತೀಚಿನ ಹಲವಾರು ಘಟನೆಗಳು ಸೂಚಿಸುತ್ತವೆ. ಸುಪ್ರೀಂಕೋರ್ಟ್ ನಿಜವಾಗಿಯೂ ನಮ್ಮ ಹಕ್ಕುಗಳನ್ನು ರಕ್ಷಿಸಲು ಸಮರ್ಥವೇ ಇಲ್ಲವೇ ಎಂದು ನಾವು ಸಂಶಯಪಡುವಂತೆ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂಕೋರ್ಟಿನ ಆದ್ಯತೆಗಳು ಪರಿಹಾರ ಕಾಣಬೇಕಾದ ವಿಷಯಗಳಿಗೆ ಸರಿಹೊಂದುವಂತೆಯೂ ಕಾಣುತ್ತಿಲ್ಲ. ಉದಾಹರಣೆಗೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಗೆ ಸಂಬಂಧಪಟ್ಟ ಪ್ರಕರಣಗಳು, 6,000 ಕೋಟಿ ರೂ.ಗಳನ್ನು ಸಂಗ್ರಹಿಸಲಾದ ಚುನಾವಣಾ ಬಾಂಡ್‌ಗಳ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವವಾದಿ ಸಂಸ್ಥೆಗೆ ಕಾಳಜಿಯ ವಿಷಯವಾಗಿರಬೇಕಿತ್ತು.

1952ರಷ್ಟು ಹಿಂದೆಯೇ ಮದ್ರಾಸ್ ಸರಕಾರ ವಿರುದ್ಧ ವಿ.ಜಿ. ರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನನ್ನು “ನಾಗರಿಕರ ಮೂಲಭೂತ ಹಕ್ಕುಗಳ ಸದಾ ಜಾಗೃತ (qui vive) ಕಾವಲುಗಾರ” ಎಂದು ಪರಿಗಣಿಸಿತ್ತು. ಆದರೆ, ಇಂದು ಈ ಕಾವಲುಗಾರ ಜಾಗೃತವಾಗಿರುವುದು ಹೌದೆ? ಆದುದರಿಂದಲೇ, ಕೇವಲ ಈಗಿನ ಕೋವಿಡ್- 19 ಪಿಡುಡು ಮಾತ್ರವಲ್ಲ, ಅದಕ್ಕಿಂತ ಸ್ವಲ್ಪ ಹಿಂದಿನ ಬಿಕ್ಕಟ್ಟುಗಳಲ್ಲಿ ಸುಪ್ರೀಂಕೋರ್ಟಿನ ಕಾರ್ಯಾಚರಣೆಯ ಕುರಿತು ಗಮನಹರಿಸಲು ನಾನು ನಿರ್ಧರಿಸಿದೆ.

“ಯುದ್ಧದ ಸಮಯದಲ್ಲಿ ಕಾನೂನು ಮೌನವಾಗುತ್ತದೆ (Inter arma enim silent lēgēs) ಎಂಬ ಪ್ರಖ್ಯಾತ ಮಾತುಗಳನ್ನು ರೋಮನ್ ಮುತ್ಸದ್ಧಿ, ತತ್ವಶಾಸ್ತ್ರಜ್ಞ ಸಿಸೆರೊ (Cicero) ಹೇಳಿದ್ದನೆಂದು ನಂಬಲಾಗಿದೆ. ಆದರೆ, ಈ ಹೇಳಿಕೆಯನ್ನು- ಕನಿಷ್ಟ ಆಧುನಿಕ ಕಾಲದಲ್ಲಾದರೂ- ಮತ್ತೆ ಮತ್ತೆ ತಿರಸ್ಕರಿಸಲಾಗಿದೆ. ಇವುಗಳಲ್ಲಿ “ಶಸ್ತ್ರಗಳ ತಾಕಲಾಟದ ನಡುವೆ ಕಾನೂನುಗಳು ಮೌನವಾಗಿಲ್ಲ” ಎಂಬ ಬ್ರಿಟನ್‌ನ ಲಾರ್ಡ್ ಅಟ್ಕಿನ್ ಹೇಳಿಕೆ ಹೆಚ್ಚು ಪರಿಚಿತ.

ದಶಕಗಳ ನಂತರ ಎಡಿಎಂ ಜಬ್ಬಲ್ಪುರ್ ಪ್ರಕರಣದ ತನ್ನ ಸ್ಮರಣಾರ್ಹ ಬಿನ್ನಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಇದೇ ಭಾವನೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿದ್ದಾರೆ. “ಸರಕಾರದ ಉದ್ದೇಶಗಳು ಉದಾರವಾದಿಯಾಗಿದ್ದಾಗ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಹೆಚ್ಚು ಎಚ್ಚರದಲ್ಲಿರಬೇಕು ಎಂದು ಅನುಭವವವು ನಮಗೆ ಕಲಿಸಬೇಕಾಗಿದೆ…..ಸ್ವಾತಂತ್ರ್ಯಕ್ಕೆ ಅತೀದೊಡ್ಡ ಅಪಾಯವಿರುವುದು ಕಾನೂನಿನ ಆಡಳಿತದ ಬಗ್ಗೆ ಗೌರವವಿಲ್ಲದ ಅತ್ಯುತ್ಸಾಹದ ವ್ಯಕ್ತಿಗಳು- ಅವರ ಉದ್ದೇಶವು ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ- ಕಪಟದಿಂದ ಅದನ್ನು ಆಕ್ರಮಿಸಿಕೊಳ್ಳುವುದು” ಎಂದು ಅವರು ಹೇಳಿದ್ದಾರೆ. ವಕೀಲ ಉಪೇಂದ್ರ ಬಕ್ಷಿ ಅವರೂ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. ಸಿಸೆರೋನ ಮಾತುಗಳನ್ನು ನಾವು ಒಕ್ಕೊರಲಿನಿಂದ ಇಂದು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಇವೆಲ್ಲವೂ ಈಗ ಏಕೆ ಪ್ರಸ್ತುತ? ನಾವೀಗ ಯುದ್ಧದಲ್ಲಿ ಇಲ್ಲದೇ ಇರಬಹುದು ಆದರೆ, ಹಿಂದೆಂದೂ ಕಾಣದಷ್ಟು ದೊಡ್ಡ ತುರ್ತು ಸ್ಥಿತಿಯಲ್ಲಿ ಇದ್ದೇವೆ. ಇಂತಹಾ ಸಮಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯಪ್ರವೇಶ ಅಥವಾ ಮೇಲುಸ್ತುವಾರಿ ಇಲ್ಲದೆ ಕಾರ್ಯಾಂಗವು ಎಷ್ಟರ ಮಟ್ಟಿನ ಅನಿರ್ಬಂಧಿತ ಅಧಿಕಾರವನ್ನು ಹೊಂದಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜಕೀಯ ಮತ್ತು ನೀತಿ ನಿರೂಪಕರ ವಲಯದಲ್ಲಿ ಮಾತ್ರವಲ್ಲ, ಕಾನೂನು ವಲಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಕ್ರಿಯವಾಗಿರುವ ವಕೀಲರ ನಡುವೆಯಂತೂ ಇದು ಎರಡು ಧ್ರುವಗಳಷ್ಟು ತದ್ವಿರುದ್ಧವಾದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಕೀಲ ದುಷ್ಯಂತ ದವೆ ಹೇಳುತ್ತಾರೆ- “ಕಾರ್ಯಾಂಗ ಮಾತ್ರ ಅದರ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಸಂಸತ್ತು ವಿರಾಮದಲ್ಲಿದೆ. ನ್ಯಾಯಾಂಗವು ಕೊಮಾದಲ್ಲಿದೆ”. “ಕೋಟ್ಯಂತರ ಜನರ ಪ್ರಸ್ತುತ ಸಂಕಷ್ಟಗಳ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಏಕೆ ಸಂಪೂರ್ಣ ಮೌನವಹಿಸಿವೆ?” ಎಂದವರು ಕೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹರೀಶ್ ಸಾಳ್ವೆ ಅವರು- ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಸ್ಪಕ್ಷಪಾತದ ಆಡಳಿತದಲ್ಲಿ ಕಾರ್ಯಾಂಗದ ವಿವೇಚನೆಯು ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಒಳಪಟ್ಟಿರಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ.

ದವೆ ಮತ್ತು ಸಾಳ್ವೆ ಅವರಿಬ್ಬರೂ ನೇರವಾಗಿ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಅವರಿಬ್ಬರೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸಲ್ಲಿಸಲಾದ ಸುಪ್ರೀಂಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆಂದು ನಾವು ಊಹಿಸಬಹುದು. ನಾನು ಈ ಅರ್ಜಿಗಳು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಅನಗತ್ಯವಾಗಿ ಇಸ್ಲಾಮೋಫೋಬಿಕ್ ತಿರುವನ್ನು ಪಡೆದ ಹಿನ್ನೆಲೆಯಲ್ಲಿ ನಾನಿಲ್ಲಿ ಚರ್ಚಿಸುತ್ತೇನೆ.

ಮಾರ್ಚ್ 25, 2020ರಿಂದ ಆರಂಭಗೊಂಡ ಹಠಾತ್ ಲಾಕ್‌ಡೌನ್‌ನಿಂದಾಗಿ, ಕೆಲಸ ಹುಡುಕಿಕೊಂಡು ದೇಶದಾದ್ಯಂತ ಪ್ರಯಾಣಬೆಳೆಸಿದ್ದ ಲಕ್ಷಾಂತರ, ಬಹುಶಃ ಕೋಟ್ಯಂತರ ವಲಸೆ ಕಾರ್ಮಿಕರು ಜೀವನೋಪಾಯ, ಆದಾಯ, ಭದ್ರತೆ ಮತ್ತು ಗೌರವ ಎಲ್ಲವನ್ನೂ ಕಳೆದುಕೊಂಡರು. ಇವೆಲ್ಲವೂ ಕೇವಲ ಒಂದು ತಿಂಗಳ ಒಳಗಾಗಿ ನಡೆಯಿತು. ತಾವು ಅನಿರ್ದಿಷ್ಟಾವಧಿಗೆ ಯಾವುದೇ ಆಹಾರ, ಆಶ್ರಯ, ಸಾರಿಗೆ ಇಲ್ಲದೇ ಉಪವಾಸ ಕಳೆಯಬೇಕಾಗಬಹುದು ಎಂದು ಅವರಲ್ಲಿ ಬಹುತೇಕರು ಊಹಿಸಿಯೇ ಇರಲಾರರು.

ಇವೆಲ್ಲವೂ ಎಪ್ರಿಲ್ 1ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಒಂದು ಪ್ರಮುಖ ಪ್ರಶ್ನೆಯಾಯಿತು. ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿ ಕೋರಿತ್ತು.  ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆಯ ಅನ್ವಯ ಹೇರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೂಲಕ ಸಂವಿಧಾನದ ವಿಧಿ 21ರಲ್ಲಿ ಖಾತರಿಪಡಿಸಲಾದ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಈ ಅರ್ಜಿಯಲ್ಲಿ ವಾದಿಸಲಾಗಿತ್ತು.

ಆದರೆ, ವಿಚಾರಣೆಯ ವೇಳೆಯಲ್ಲಿ ಸುಪ್ರೀಂಕೋರ್ಟ್ ಹೇಳಿಕೆಯು ವಿಶೇಷವಾಗಿ ನಿರಾಶಾದಾಯಕವಾಗಿತ್ತು. “ಮುಂದಿನ ಕೆಲವು ಕಾಲ ಮಧ್ಯಪ್ರವೇಶ ಮಾಡಲು” ತನಗೆ ಮನಸ್ಸಿಲ್ಲ ಎಂದು ಅದು ಹೇಳಿತು. ಇದು ಸರಕಾರದ ಧೋರಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ನ್ಯಾಯಾಲಯವು ಅತಿಕ್ರಮಣ ಮಾಡಲು ಬಯಸುವುದಿಲ್ಲ ಎಂದು ಕೂಡಾ ಹೇಳಿತು. ಅದು ಕೇಳಿದ ಇನ್ನೊಂದು ಪ್ರಶ್ನೆಯೆಂದರೆ, “ಸರಕಾರವೇ ಊಟಕೊಡುತ್ತಿರುವಾಗ, ವೇತನದ ಅಗತ್ಯವೇನು?” (ಸರಕಾರದ ಊಟದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ!)

ಸಾಂವಿಧಾನಿಕ ವಿದ್ವಾಂಸ ಗೌತಮ್ ಭಾಟಿಯಾ ಅವರು ಹೇಳುವಂತೆ, ಸರಕಾರದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಜೀವನೋಪಾಯ ನಷ್ಟಕ್ಕೆ ನೇರ ಹೊಣೆ. ಲಾಕ್‌ಡೌನ್ ಎಲ್ಲಾ ಸಂಪನ್ಮೂಲ ಮತ್ತು ಸಂಚಾರಕ್ಕೆ ತಡೆಯೊಡ್ಡಿತು. ಭಾರತದಾದ್ಯಂತ ಸುಮಾರು ನಾಲ್ಕು ಕೋಟಿಗಳಷ್ಟಿರುವ ವಲಸೆ ಕಾರ್ಮಿಕರು- ಮೊದಲಾಗಿ ಮತ್ತು ಅತ್ಯಂತ ಹೆಚ್ಚು ಬಾಧಿತರು. ಲಾಕ್‌ಡೌನ್ ಒಂದು ಧೋರಣಾತ್ಮಕ ನಿರ್ಧಾರವಾಗಿರಬಹುದು. ಆದರೆ, ಈ ಧೋರಣಾತ್ಮಕ ನಿರ್ಧಾರವು ಸಂವಿಧಾನದ ವಿಧಿ 21ರಲ್ಲಿ ಪ್ರತಿಷ್ಟಾಪಿಸಲಾಗಿರುವ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಾವಹಾರಿಕವಾಗಿ ನೋಡಿದರೆ, ಸುಪ್ರೀಂಕೋರ್ಟ್ ಸರಕಾರದ ಕಾರ್ಯವನ್ನು ಪರಿಶೀಲಿಸಿ ಸಾಂವಿಧಾನಿಕ ಮಾನದಂಡದೊಂದಿಗೆ ತುಲನೆ ಮಾಡಲು ಕರ್ತವ್ಯಬದ್ಧವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...