ಇಂದು ಬೆಳಿಗ್ಗೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ರೈಲ್ವೇ ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಸರಕುಗಳ ರೈಲು ಹರಿದ ಪರಿಣಾಮ 14 ಕಾರ್ಮಿಕರು ದುರ್ಮರಣ ಹೊಂದಿರುವ ಕರಾಳ ಘಟನೆ ಜರುಗಿದೆ.
ಈ ದುರ್ಘಟನೆಯಲ್ಲಿ 5 ಜನರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೋಕ್ಷದಾ ಪಾಟೀಲ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ವಲಸೆ ಕಾರ್ಮಿಕರಾದ ಇವರು ಮಹಾರಾಷ್ಟ್ರದ ಜಲ್ನಾದಿಂದ ಮಧ್ಯಪ್ರದೇಶದ ಭುಸ್ವಾಲ್‌ಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಲಾಕ್‌ಡೌನ್ ಕಾರಣಕ್ಕೆ ರೈಲುಸೇವೆ ರದ್ದುಗೊಂಡಿರುವುದರಿಂದ ಅಪಾಯವಿಲ್ಲ ಎಂದು ರೈಲು ಹಳಿಗಳ ಮೇಲೆ ಮಲಗಿದ್ದಾಗ ಇಂದು ಬೆಳಿಗ್ಗೆ 5.15ಕ್ಕೆ ರೈಲು ಹರಿದ ಘಟನೆ ಸಂಭವಿಸಿದೆ.
ಆ ರೈಲ್ವೇ ಟ್ರ್ಯಾಕ್‌ಗಳ ಬಳಿ ಮೃತರ ಪಾದರಕ್ಷೆಗಳು ಮತ್ತು ಇತರ ವೈಯಕ್ತಿಕ ವಸ್ತುಗಳಿಂದ ಬಿದ್ದಿವೆ. ಅವರು ತಮ್ಮ ಪ್ರಯಾಣಕ್ಕಾಗಿ ಸಾಗಿಸುತ್ತಿದ್ದ ರೊಟ್ಟಿಗಳು ಸಹ ಚೆಲ್ಲಾಪಿಲ್ಲಿಯಾಗಿದ್ದು ನೋಡುಗರ ಮನಕರಗಿಸುವಂತಿವೆ.
ಇನ್ನು ಘಟನೆ ಕುರಿತು ರೈಲ್ವೆ ಸಚಿವಾಲಯವು ಸರಣಿ ಟ್ವೀಟ್‌ಗಳನ್ನು ಮಾಡಿದೆ. “ಇಂದು ಮುಂಜಾನೆ ಕೆಲವು ಜನರು ಟ್ರಾಕ್ ಮೇಲೆ ಮಲಗಿರುವುದು ಕಾಣಿಸಿತು. ಕೂಡಲೇ ಸರಕು ರೈಲಿನ ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದನು. ಆದರೆ ಅಂತಿಮವಾಗಿ ಸಾಧ್ಯವಾಗದೇ 14 ಜನರು ಸಾವನಪ್ಪಬೇಕಾಗಿದೆ. ಗಾಯಗೊಂಡವರನ್ನು ಔರಂಗಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಚಾರಣೆಗೆ ಆದೇಶಿಸಲಾಗಿದೆ” ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
During early hours today after seeing some labourers on track, loco pilot of goods train tried to stop the train but eventually hit them between Badnapur and Karmad stations in Parbhani-Manmad section
Injureds have been taken to Aurangabad Civil Hospital.
Inquiry has been ordered— Ministry of Railways (@RailMinIndia) May 8, 2020
ಪ್ರಧಾನಿ ನರೇಂದ್ರ ಮೋದಿ ಅವರು “ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ. “ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ರೈಲು ಅಪಘಾತದಿಂದ ಪ್ರಾಣಹಾನಿ ತೀವ್ರ ದುಃಖಿತವಾಗಿದೆ. ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ” ಎಂದು ಪಿಎಂ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Extremely anguished by the loss of lives due to the rail accident in Aurangabad, Maharashtra. Have spoken to Railway Minister Shri Piyush Goyal and he is closely monitoring the situation. All possible assistance required is being provided.
— Narendra Modi (@narendramodi) May 8, 2020
ಅಪಘಾತದ ಸ್ಥಳಕ್ಕೆ ಫುಲಾಂಬ್ರಿಯ ಶಾಸಕರಾಗಿರುವ ಮಹಾರಾಷ್ಟ್ರದ ಮಾಜಿ ಸ್ಪೀಕರ್ ಹರಿಭೌ ಬಾಗ್ಡೆ ಭೇಟಿ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಆ ಕಾರ್ಮಿಕರ ಕುಟುಂಬಗಳಿಗೆ ಸಹಾಯ ಕೋರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿದ್ದಾರೆ. ಅವರು ಸಹ ಮೃತರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಗಾಯಗೊಂಡ ವಲಸಿಗರ ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆಗಳಿಗಾಗಿ ಚೌಹಾಣ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಧ್ಯಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಕಾರಣಗಳಿಗಾಗಿ ಮನೆಗೆ ಮರಳಬೇಕಾದ ವಲಸಿಗರಿಗಾಗಿ ಹಲವಾರು ರಾಜ್ಯಗಳು “ಶ್ರಮಿಕ್” ವಿಶೇಷ ರೈಲುಗಳನ್ನು ಓಡಿಸುತ್ತಿದ್ದರೂ, ಸರ್ಕಾರಗಳು ಸೃಷ್ಟಿಸಿರುವ ಗೊಂದಲಗಳಿಂದಾಗಿ ಅನೇಕರು ಕಾಲ್ನಡಿಗೆಯಲ್ಲಿಯೇ ಹಿಂತಿರುಗಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಒತ್ತಡಕ್ಕೆ ಮಣಿದ ಸರ್ಕಾರ: ನಾಳೆಯಿಂದ ಕಾರ್ಮಿಕರಿಗೆ ರೈಲು ಸೇವೆ ಆರಂಭ
Also Read: Gas leak at Vishakhapatnam, 10 dead, over 5000 fell sick


