ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳದೆ, ಈಗ ವಾಪಸ್ ಸ್ವಂತ ರಾಜ್ಯಕ್ಕೆ ಹೊರಟಿರುವ ವಲಸೆ ಕಾರ್ಮಿಕರಿಗೆ ವೇತನ, ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಮೂರು ಫ್ಯಾಕ್ಟರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಮುಕುಂದ್ ಸುಮಿ, ಕಲ್ಯಾಣಿ ಸ್ಟೀಲ್ಸ್, ಕಿರ್ಲೊಸ್ಕರ್ ಪ್ಯಾಕ್ಟರಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ಸಾವಿರಾರು ಕಾರ್ಮಿಕರು ತೆರಳುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸೂಚನೆ ನಡುವೆ ಕಾರ್ಮಿಕರಿಗೆ ಸುರಕ್ಷೆ ಒದಗಿಸದ ಕಾರ್ಖಾನೆಗಳ ಆಡಳಿತ ಮಂಡಳಿ, ಕಾರ್ಮಿಕ ವಿಭಾಗದ ಅಧಿಕಾರಿ, ಕಾರ್ಮಿಕ ಗುತ್ತಿಗೆದಾರರ ವಿರುದ್ದ ಮುನಿರಾಬಾದ್ ಕೊಪ್ಪಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಮಾಸ್ತಿಯವರು ದೂರು ನೀಡಿದ್ದು, ಕಾರ್ಖಾನೆಗಳ ವಿರುದ್ದ ಐಪಿಸಿ ಕಲಂ 107 / 2020 , ಕಲಂ 188 , 269 , 270 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡೆಯು ಉಳಿದ ಫ್ಯಾಕ್ಟರಿಗಳಿಗೆ ಪಾಠವಾಗಬೇಕಿದೆ. ತಮ್ಮ ವಲಸೆ ಕಾರ್ಮಿಕರನ್ನು ಗೌರವಯುತವಾತವಾಗಿ ನಡೆಸಿಕೊಳ್ಳುವುದು ಅವರೆಲ್ಲರ ಕರ್ತವ್ಯವಾಗಿದೆ.
ಇದನ್ನೂ ಓದಿ; ಲಾಕ್‌ಡೌನ್- ಮಹಾರಾಷ್ಟ್ರದಲ್ಲಿ ಸಿಕ್ಕಿಕೊಂಡ ಕರ್ನಾಟಕದ ಅಲೆಮಾರಿ ಸಮುದಾಯ: ಸಹಾಯಕ್ಕಾಗಿ ಮನವಿ.


