Homeಸಾಮಾಜಿಕ20 ಕೋಟಿ ಆ್ಯಂಬಿಯೆಂಟ್ ಎಂಜಲಿಗೆ ಜೊಲ್ಲು ಸುರಿಸಿದ ಬಿಲಿಯನೇರ್ ಜನಾರೆಡ್ಡಿ!!

20 ಕೋಟಿ ಆ್ಯಂಬಿಯೆಂಟ್ ಎಂಜಲಿಗೆ ಜೊಲ್ಲು ಸುರಿಸಿದ ಬಿಲಿಯನೇರ್ ಜನಾರೆಡ್ಡಿ!!

- Advertisement -
- Advertisement -

ಆ್ಯಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿಗೆ ಶರಣಾಗುವ ಮೊದಲು ಸತ್ಯ ಹರಿಶ್ಚಂದ್ರನಂತೆ ವ್ಯಾಟ್ಸಾಪ್ ಸಂದೇಶ ಹರಿಬಿಟ್ಟ ಗಾಲಿ ಜನಾರ್ಧನ ರೆಡ್ಡಿ, ‘ನನ್ನದು ಕೊಡುವ ಕೈಯೇ ಹೊರತು ಬೇಡುವ ಕೈಯಲ್ಲ.. ನಾನು ತಲೆ ಮರೆಸಿಕೊಂಡಿದ್ದೆÃನೆಂಬ ಮಾಧ್ಯಮಗಳ ವರದಿ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ’ ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತ, ಮಾಧ್ಯಮಗಳನ್ನೆÃ ಗೇಲಿ ಮಾಡಿದರು. ಆದರೆ ಅಂದು ನಗುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದು ಈತನಿಂದ ಅವ್ಯಾಹತವಾಗಿ ಲೂಟಿಗೊಳಗಾಗಿ, ಅವಶೇಷಗಳಂತಾಗಿರುವ ಬಳ್ಳಾರಿ, ಆಂಧ್ರದ ಕಬ್ಬಿಣದ ಅದಿರು ಪ್ರದೇಶಗಳು.
ಸದ್ಯ ಜೈಲು ಪಾಲಾಗಿರುವ ರೆಡ್ಡಿ ಬರೀ ನೈಸರ್ಗಿಕ ಸಂಪತ್ತಿನ ದರೋಡೆಕೋರನಷ್ಟೆÃ ಅಲ್ಲ, ಡೀಲು ಕುದುರಿಸಿ ಕೊಟ್ಟು ಅಷ್ಟಿಷ್ಟು ಗೆಬರಿಕೊಳ್ಳಬಲ್ಲ ದಲ್ಲಾಳಿಯೂ ಹೌದು ಎಂಬ ಸತ್ಯವನ್ನು ಈ ಪ್ರಕರಣವು ತೆರೆದಿಟ್ಟಿದೆ.
ಏನಿದು ಆ್ಯಂಬಿಡೆಂಟ್ ಅಧ್ವಾನ?
ಆ್ಯಂಬಿಡೆಂಟ್ ಎಂಬ ಪಾಶ್ ಹೆಸರಿನ ಬೆಂಗಳೂರು ಕಂಪನಿ ಸಾವಿರಾರು ಕೋಟಿ ಲೂಟಿ ಮಾಡಿದ್ದೆÃ ಶ್ರಮ, ಬೆವರು ಇಲ್ಲದೇ ದಿಢೀರ್ ಶ್ರಿÃಮಂತರಾಗುವ ಅತಿಯಾಸೆಯ ಮೇಲ್‌ಮಧ್ಯಮ, ಮಧ್ಯಮವರ್ಗಗಳ ಮನಸ್ಥಿತಿಯನ್ನು ಬಳಸಿಕೊಂಡು. ‘ನಮ್ಮಲ್ಲಿ ಹಣ ಹೂಡಿ, ಮರ‍್ನಾಲ್ಕು ತಿಂಗಳಲ್ಲಿ ಅದನ್ನು ಡಬಲ್ ಮಾಡ್ತಿÃವಿ’ ಎಂಬ ಟ್ಯಾಗ್‌ಲೈನ್ ಅನ್ನು ಅತಿಯಾಶೆಯ ಅಮಾಯಕರ ತಲೆಗೆ ತುಂಬುವಲ್ಲಿ ಆ್ಯಂಬಿಡೆಂಟ್ ಮಾಲೀಕ ಫರೀದ್ ಮತ್ತು ಆತನ ಮಗ, ಕಂಪನಿಯ ನಿರ್ದೇಶಕ ಯಶಸ್ವಿಯಾದರು. ಹೇಗೆ ಎಂದು ಕೇಳಿದವರಿಗೆ ‘ಸರ್ವರಿಗೂ ಸಂಪತ್ತಿನ ಹಂಚಿಕೆ’ ಎಂಬ ಸಾಮಾಜಿಕ ನ್ಯಾಯದ ಬೋಧನೆ ಮಾಡಿದ ‘ನವ ಸಮಾಜವಾದಿ’ ಫರೀದ್, ‘ನೀವು ಕೊಟ್ಟ ಹಣವನ್ನು ಡೈಮಂಡ್ ಬ್ಯುಸಿನೆಸ್ ಮತ್ತು ರಿಯಲ್ ಎಸ್ಟೆÃಟ್‌ನಲ್ಲಿ ಹೂಡಿ, ಭಾರಿ ಲಾಭಗಳಿಸಿ ನಿಮಗೆ ಕೊಡ್ತಿÃವಿ’ ಎಂದು ರೀಲುಬಿಟ್ಟ.
ಈ ‘ಬಂಗಾರದ ಮನುಷ್ಯ’ನ ಮಾತು ನಂಬಿದ ಸಿಲಿಕಾನ್ ಸಿಟಿಯ ಸಾವಿರಾರು ಕುಟುಂಬಗಳು ದೊಡ್ಡ ಆ್ಯಂಬಿಷೆನ್ ಇಟ್ಟುಕೊಂಡು ಆ್ಯಂಬಿಡೆಂಟ್‌ನಲ್ಲಿ ಪ್ರಾಮಾಣಿಕವಾಗಿ ದುಡ್ಡನ್ನು ಸುರಿಯತೊಡಗಿದವು.
ಆದರೆ ತಿಂಗಳುಗಳು ಕಳೆದ ಮೇಲೆ ಫರೀದ್‌ನ ಬಳಿ ಹೋಗಿ ತಮ್ಮ ಕನಸಿನ ಮೊತ್ತ ಕೇಳಿದ ಗ್ರಾಹಕರಿಗೆ ಫರೀದ್ ಏನೇನೋ ಸಬೂಬು ಹೇಳಿ ಕಾಯಲು ಹೇಳತೊಡಗಿದ. ಬರುಬರುತ್ತ ಸತ್ಯದ ವಾಸನೆ ಹಿಡಿದ ಗ್ರಾಹಕರಿಗೆ ದುಸ್ವಪ್ನಗಳು ಕಾಡತೊಡಗಿದವು. ತಾವೆಲ್ಲ ಯಾಮಾರಿದೆವು ಎಂದು ಅರಿತ ‘ಸಮಾನಮನಸ್ಕ’ ಗ್ರಾಹಕರಿಗೆ ಪುಣ್ಯಕ್ಕೆ ಆಗಲಾದರೂ ಕಾನೂನು, ಪೊಲೀಸ್ ವ್ಯವಸ್ಥೆಗಳು ನೆನಪಾದವು. ಥಟ್ಟಂತ ಜಾತಿ-ಧರ್ಮಗಳ ಭೇದಭಾವ ಮರೆತು ಒಟ್ಟಾದ ಈ ಗ್ರಾಹಕರು ಸೀದಾ ಬೆಂಗಳೂರಿನ ಡಿಜೆ ಹಳ್ಳಿಯ ಪೊಲೀಸರ ಬಳಿ ಹೋಗಿ ಬದುಕಿಸಲು ಮನವಿ ಮಾಡಿ, ದೂರು ದಾಖಲಿಸಿದರು.
ಸಿಸಿಬಿ ಎಂಟ್ರಿ
ಪ್ರಕರಣ ಸಿಸಿಬಿ ಕೈಗೆ ಬಂತು. ಫರೀದ್ ಮತ್ತಾತನ ಅಕೌಂಟುಗಳನ್ನು ಪರಿಶೀಲನೆ ಮಾಡತೊಡಗಿದ ಸಿಸಿಬಿಗೆ ಭಯಂಕರ ವಂಚನೆಯ ಜಾಲವೊಂದು ತೆರೆದುಕೊಳ್ಳತೊಡಗಿತು. 15 ಸಾವಿರ ಜನರ 900 ಕೋಟಿ ಈ ವಂಚಕರ ಅಕೌಂಟ್‌ನಲ್ಲಿ ಕಂಡುಬಂತು! ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಬಿಕಾ ಆಭರಣ ಮಳಿಗೆಯ ಮಾಲೀಕ ರಮೇಶ್ ಎಂಬಾತನ ಖಾತೆಗೆ ಸುಮ್ಮಸುಮ್ಮನೇ 20 ಕೋಟಿ ವರ್ಗಾಯಿಸಿದ್ದ ಫರೀದ್. ಇದರ ಜಾಡು ಹಿಡಿದು ಹೋದರೆ, ಜನಾರ್ಧನರೆಡ್ಡಿ, ಆತನ ಭಂಟ ಅಲಿಖಾನ್, ಫರೀದನ ಗೆಳೆಯ ಬೃಜೇಶ ರೆಡ್ಡಿಯ ಹೆಸರುಗಳು ಪತ್ತೆಯಾದವು.. ‘ಇಡಿ ಅಧಿಕಾರಿಗಳು ಗೊತ್ತು. ತನಿಖೆಯಲ್ಲಿ ನಿನಗೆ ಸಹಾಯ ನೀಡುವುದಾಗಿ ಹೇಳಿ ಜನಾರ್ಧನ ರೆಡ್ಡಿ 20 ಕೋಟಿ ಕೇಳಿದ್ದರು’ ಎಂದ ಫರೀದ್ ..
ಬೃಜೇಶÀ ರೆಡ್ಡಿಯೇ ಕೊಂಡಿ!
ಗ್ರಾಹಕರ ದೂರು ದಾಖಲಾಗುವ ಮೊದಲೇ ಇ.ಡಿ ಫರೀದನ ಹಿಂದೆ ಬಿದ್ದಿತ್ತು. ಆಗ ಬೃಜೇಶ ರೆಡ್ಡಿ ಫರೀದ್‌ಗೆ ನೆರವು ನೀಡುವುದಾಗಿ ಹೇಳಿ ಜನಾರೆಡ್ಡಿ, ಅಲಿಖಾನರನ್ನು ಪರಿಚಯಿಸಿದ್ದ. ಆಗಲೇ ರೆಡ್ಡಿ 20 ಕೋಟಿ ಡೀಲ್‌ನ ಮಾತಾಡಿದ್ದು. ಈ ಡೀಲ್ ಮಾರ್ಚ್ನಲ್ಲಿ ತಾಜ್‌ವೆಸ್ಟ್ ಎಂಡ್ ಹೊಟೇಲಿನಲ್ಲಿ ನಡೆದಿತ್ತು. ಮೊದಲು ನಗದು ಕೇಳಿದ್ದ ಜನಾರೆಡ್ಡಿ, ನಂತರ ಆಭರಣಂಗಡಿಯ ಮಾಲೀಕರನ್ನು ಕರೆತಂದ. ಅಲಿಖಾನ್ ಸೂಚನೆಯಂತೆ ಫರೀದ್ ಬೆಂಗಳೂರಿನ ಅಂಬಿಕಾ ಜ್ಯುವೆಲರಿಯ ರಮೇಶ್‌ಕೊಠಾರಿಯ ಖಾತೆಗೆ ಹಾಕಿದ್ದ. ಈ ಹಣ ಇಟ್ಟುಕೊಂಡ ಕೊಠಾರಿ ಅದಕ್ಕೆ ಪ್ರತಿಯಾಗಿ 57 ಕೆಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿ ಆಭರಣ ವ್ಯಾಪಾರಿ ರಮೇಶನಿಗೆ ನೀಡಿದ್ದ. ಈ ಗಟ್ಟಿಗಳನ್ನು ಅಲಿಖಾನ್ ಜನಾಗೆ ತಲುಪಿಸಿದ್ದ!
ಗಣಿಗಳ್ಳರು, ಇಂಟರ್ ನ್ಯಾಷನಲ್ ಆರ್ಥಿಕ ವಂಚಕ, ಆಭರಣ ವ್ಯಾಪಾರಿಗಳು…. ದಿಗ್ಭçಮೆ ಹುಟ್ಟಿಸುವ ವಂಚನೆಯ ಜಾಲ! ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಅಪರಾಧ ಲೋಕದ ಚಿತ್ರಕತೆಗಳನ್ನು ಬರೆಯುವವರು ಅಲಿಖಾನ್, ರೆಡ್ಡಿ, ಫರೀದ್‌ಗಳನ್ನು ಭೇಟಿಯಾದರೆ ಕಥಾಗುಚ್ಛಗಳೇ ಸಿಗಬಹುದು.
ಅಂದಂತೆ ಈ ಅಲಿಖಾನ್ ಜನಾರೆಡ್ಡಿಯ ಗಣಿಯ ಲೂಟಿಯ ಸ್ಕೆಚ್‌ಗಳನ್ನು ಅಪಾರ ’ಶ್ರಮ’ದಿಂದ ಹೆಣೆದ ಮಾಸ್ಟರ್ ಮೈಂಡ್. ಇಂಜಿನಿಯರಿಂಗ್ ಓದುವಾಗ ಇವನ ಟ್ಯಾಲೆಂಟ್ ನೋಡಿ ಪ್ರಾಧ್ಯಾಪಕರೇ ಅಚ್ಚರಿ ಪಡುತ್ತಿದ್ದರು. ಬಿಇ ನಂತರ ಈ ಹುಡುಗ ಐಟಿ ಅಥವಾ ಫೈನಾನ್ಸಿಯಲ್ ಸ್ಟಾರ್ಟ್ಅಪ್ ತೆರೆಯಬಲ್ಲ ಪ್ರತಿಭೆ ಹೊಂದಿದ್ದಾನೆ ಎಂದು ಗುಣಗಾನ ಮಾಡುತ್ತಿದ್ರಂತೆ. ಆದರೆ ಬಿಇ ಜುಜುಬಿ ಅಂದ ಅಲಿಖಾನ್ ಹೇಗೋ ರೆಡ್ಡಿಯ ಸಂಪರ್ಕಕ್ಕೆ ಬಂದ. ತನ್ನ ಜಾಣ್ಮೆತನವನ್ನು ವಂಚನೆಗೆ ಬಳಸಿ ರೆಡ್ಡಿಗಳಿಗೆ ಆಪ್ತನಾದ. ಬಳ್ಳಾರಿಯ ಸಾಮಾನ್ಯ ಅಕ್ಕಸಾಲಿಗರು, ಟೇಲರ್‌ಗಳ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ಅವುಗಳಲ್ಲಿ ಗಣಿಲೂಟಿ ದುಡ್ಡನ್ನು ಜಮಾ ಮಾಡಿದ್ದ, ಈ ಖಾತೆಗಳ ಜಾಡು ಹಿಡಿದು ಹೋದ ಅರಣ್ಯಾಧಿಕಾರಿಗಳು, ಲೋಕಾಯುಕ್ತ ಸಂತೋಷ ಹೆಗಡೆಯವರು ಬೆಚ್ಚಿ ಬಿದ್ದಿದ್ದರು. ಪಾಪ, ಈ ಅಮಾಯಕ ಬಡ ಅಕ್ಕಸಾಲಿಗರು, ಟೇಲರ್‌ಗಳಿಗೆ ಅಲಿಖಾನ್ ಗೊತ್ತೂ ಇರಲಿಲ್ಲ, ತಮ್ಮ ಹೆಸರಲ್ಲಿ ಖಾತೆಗಳಿರುವುದೂ ಗೊತ್ತಿರಲಿಲ್ಲ! ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಫೋರ್ಜರಿ ಮಾಡಿ ಖಾತೆಗಳನ್ನು ಸೃಷ್ಟಿಮಾಡಿ, ಸಾವಿರಾರು ಕೋಟಿಗಳ ವ್ಯವಹಾರ ನಡೆಸಿದ ‘ಪ್ರತಿಭಾವಂತ’ ಈ ಅಲಿಖಾನ್. ಬೇಲಿಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಸ್ಟಾಕ್ ಮಾಡಿದ್ದ ಅಕ್ರಮ ಅದಿರನ್ನೆÃ ಚೀನಾಕ್ಕೆ ರಫ್ತು ಮಾಡಿದ ಭೂಪ ಈ ಅಲಿಖಾನ್!
ಫರೀದ್ ನಂಬಿ ವಂಚನೆಗೊಳಗಾದ 15 ಸಾವಿರ ಗ್ರಾಹಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಗೃಹ ಸಚಿವ ಪರಮೇಶ್ವರ್ ಅವರದ್ದು. ಅವರು ಪೊಲೀಸ್ ಅಧಿಕಾರಿಗಳ ಕರ್ತವ್ಯದಲ್ಲಿ ಹಸ್ತಕ್ಷೆÃಪ ಮಾಡದಿದ್ದರೆ ಸಾಕಷ್ಟೆÃ.
‘ಆ್ಯಂಬಿಡೆಂಟ್ ಪ್ರಕರಣದಲ್ಲಿ ನಮ್ಮದೇನೂ ಪಾತ್ರವಿಲ್ಲ. ಸುಮ್ಮಸುಮ್ಮನೇ ಕೆಲವು ಕಿಡಿಗೇಡಿಗಳು ನಮ್ಮ ಪಬ್ಲಿಕ್ ಚಾನೆಲ್, ಮುಖ್ಯಸ್ಥ ಎಚ್‌ಆರ್ ರಂಗನಾಥ, ಸಿಬ್ಬಂದಿ ಅಜ್ಮತ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್‌ನ್ಯೂಸ್ ಹರಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳುತ್ತೆÃವೆ’ ಎಂದು ಪಬ್ಲಿಕ್ ಟಿವಿ ಸ್ಪಷ್ಟನೆ ನೀಡಿದ ಕೂಡಲೇ ಸೋಷಿಯಲ್‌ಮೀಡಿಯಾ ಬಳಸದ ‘ಅಸಂಖ್ಯ’ ರಂಗಣ್ಣಾಭಿಮಾನಿಗಳು ಗಲಿಬಿಲಿಗೆ ಬಿದ್ದಿದ್ದಾರೆ.
‘ರಂಗಣ್ಣರ ಮೇಲೆ ಕಿಡಿಗೇಡಿಗಳು ಮಾಡಿರುವ ಸುಳ್ಳು ಆರೋಪವೇನು’ ಎಂದು ಈ ವೀಕ್ಷಕ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಇದೆಲ್ಲ ಗೊತ್ತೆÃ ಇರದ ಜನಸಾಮಾನ್ಯರಿಗೆ ‘ಏನೋ ಲಫಡಾ ನಡೆದಿದೆಯಾ’ ಎಂಬ ಸಂಶಯ ಬರುವಂತೆ ಮಾಡಿ, ಸುಮ್ಮನೆ ಇರುವೆ ಬಿಟ್ಟುಕೊಂಡಿತಲ್ಲ ನಮ್ಮ ಚಾನೆಲ್ ಎಂದು ಹಲವು ಜಿಲ್ಲಾ ವರದಿಗಾರರು ಪಬ್ಲಿಕ್ಕಾಗಿಯೇ ನಗಾಡುತ್ತಿದ್ದರಂತೆ.
ಗೊಂದಲದಲ್ಲಿರುವ ಪಬ್ಲಿಕ್‌ನ ವೀಕ್ಷಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ತಿಳಿಸುವುದು ನಮ್ಮ ವೃತ್ತಿಧರ್ಮ ಎಂದು ಬಗೆದು ಅದನ್ನು ಇಲ್ಲಿ ನಿರೂಪಿಸುವ ಯತ್ನ ಮಾಡಿದ್ದೆÃವೆ. (ಇಲ್ಲಿ ಪ್ರಿಂಟ್ ಮೀಡಿಯಾ ಓದುಗರಿಗೆ ಬೋರ್ ಆಗದಿರಲೆಂದು ನಿರೂಪಣೆಯಲ್ಲಿ ರೋಚಕತೆ ಇದ್ದರೆ ಅದನ್ನು ಟಿವಿ ಮೀಡಿಯಾ ಪ್ರಭಾವವೆಂದು ಬಗೆದು ಕ್ಷಮಿಸಬೇಕು)
“ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರ್ ಮಿರರ್‌ನಲ್ಲಿ ಕ್ರೆöÊಮ್ ಬೀಟ್‌ಗಳಲ್ಲಿ ಕೆಲಸ ಮಾಡುತ್ತಾ ಅಪರಾಧ ಲೋಕದ ಒಳಸುಳಿವುಗಳನ್ನು ಪತ್ತೆ ಹಚ್ಚುತ್ತಾ, ತಾನೇ ಕ್ರಿಮಿನಲ್ ಆಗಿಬಿಟ್ಟರೆಂಬ ವದಂತಿ (ಇದು ಈ ‘ಫೇಕ್‌ನ್ಯೂಸ್’ ಹೊರಬಂದ ಮೇಲೆ ಹುಟ್ಟಿಕೊಂಡ ಕಥೆಯೂ ಇರಬಹುದು!) ಅಜ್ಮತ್ ಎಂಬ ಪತ್ರಕರ್ತನ ಕುರಿತು ಇದೆ. ಈತನ ಬಗ್ಗೆ ಬೆಂಗಳೂರಿನ ರೌಡಿಗಳು, ದಂಧೆಕೋರರ ಬಳಿ ರಂಗುರಂಗಿನ ಕತೆಗಳಿವೆಯಂತೆ. ಕೆಲವು ಪೊಲೀಸ್ ಅಧಿಕಾರಿಗಳಿಗೂ ಈತನ ‘ಪವಾಡ’ಗಳು ಗೊತ್ತಂತೆ. ಆದರೆ ಇಂತಹ ಹಿನ್ನೆಲೆಯ ಅಜ್ಮತ್ ಹಿರಿಯ ಪತ್ರಕರ್ತ ರಂಗನಾಥರ ಪಬ್ಲಿಕ್ ಟಿವಿಯಲ್ಲಿದ್ದಾರೆ ಈಗ! ಪಾಪ, ರಂಗನಾಥರಿಗೆ ಈತನ ಹಿನ್ನೆಲೆ ತಿಳಿಯಲು ಟೈಮ್ ಇರಲಿಲ್ಲವೆಂದೇ ಭಾವಿಸೋಣ.
ಅಜ್ಮತ್ ಸಂದರ್ಶ ಮಾಡುವಾಗ, ‘ ಈ ಕಾಲದಲ್ಲಿ ಚಾನೆಲ್ ನಡೆಸಲು ಎಷ್ಟು ದುಡ್ಡಾದರೂ ಸಾಲದು. ನಿನ್ನ ಟ್ಯಾಲೆಂಟನ್ನೆಲ್ಲ ಬಳಸಿ ತಿಂಗಳಿಗೆ 40 ಲಕ್ಷ ಆದಾಯ ತರಬೇಕು’ ಎಂದು ಅಜ್ಮತ್ ಮುಂದೆ ಚಾಲೆಂಜ್ ಇಡಲಾಗಿತ್ತಂತೆ. ‘ಓಕೆ’ ಎಂದು ರಿಪೋರ್ಟಿಂಗ್ ಶುರು ಹಚ್ಚಿದ ಅಜ್ಮತ್‌ಗೆ ಆ್ಯಂಬಿಡೆಂಟ್‌ನ ಫರೀದ್ ಅಕ್ಷಯಾಪಾತ್ರೆಯಂತೆ ಕಂಡದ್ದು ಸಹಜವೇ ಆಗಿತ್ತು.
‘ಆ್ಯಂಬಿಡೆಂಟ್‌ನಿಂದ ಭಾರಿ ವಂಚನೆ’ ಎಂದು ಬ್ರೆÃಕಿಂಗ್ ನ್ಯೂಸ್ ಹೊಡೆದ ಅಜ್ಮತ್ ಅದನ್ನು ಫರೀದನಿಗೆ ವ್ಯಾಟ್ಸಪ್ ಮಾಡಿದ. ಕಂಗಾಲಾದ ಫರೀದ್ ಸುದ್ದಿ ನಿಲ್ಲಿಸುವಂತೆ ಅಂಗಲಾಚುತ್ತಾನೆ. ಆಗ ಅಜ್ಮತ್ 5 ಕೋಟಿಗೆ ಬೇಡಿಕೆ ಇಡುತ್ತಾನೆ. ಸಾವಿರ ಕೋಟಿಯ ಒಡೆಯ ಫರೀದ್‌ಗೆ 5 ಕೋಟಿ ಜುಜುಬಿ. ಮೊದಲು ಅಜ್ಮತ್ ಅಕೌಂಟಿಗೆ 3 ಕೋಟಿ ಆರ್‌ಟಿಜಿಎಸ್ ಮಾಡಿ ಸ್ವಲ್ಪ ನಿರಾಳನಾಗಿತ್ತಾನೆ. ಆಹಣವನ್ನು ಅಜ್ಮತ್ ಪಬ್ಲಿಕ್ ಕ್ಯಾಪ್ಟನ್‌ಗೆ ನೀಡುವುದೆಲ್ಲ ಪ್ರೆöÊವೇಟ್ ಆಗಿ ನಡೆಯುತ್ತದೆ.
ಇಂತಹ ಎಂಜಲು ನೆಕ್ಕುವುದರಲ್ಲಿ ‘ಸಮಯಪ್ರಜ್ಞೆ’ ಹೊಂದಿರುವ ಸಮಯ್ ಚಾನೆಲ್‌ನ ವಿಜಯ್ ತಾತಯ್ಯ ತಂದೂ ಒಂದು ಕೈಚಾಚಿ ಆಖಾಡಕ್ಕೆ ಇಳಿಯುತ್ತಾನೆ.. ತನ್ನ ನಿತ್ಯ ಕಾಯಕದಂತೆ….ಇದಕ್ಕೆ ವೀಣಾ ಎಂಬ ಡೀಲ್-ಡಾಲ್ ಸಾಥ್ ನೀಡುತ್ತಾಳೆ. 40 ಕೋಟಿ ದೇಣಿಗೆ ನೀಡುವಂತೆ ಫರೀದ್‌ಗೆ ಪಾಪಿಗಳು ಬೇಡಿಕೆ ಇಡುತ್ತಾರೆ. 37 ಕೋಟಿ ವೈಟ್‌ಮನಿ, 3 ಕೋಟಿ ಬ್ಲಾö್ಯಕ್‌ಮನಿ (ಡಿಮಾನಿಟೇಷನ್‌ನಿಂದ ಕಪ್ಪು ಹಣಕ್ಕೆ ಕಡಿವಾಣ ಬಿತ್ತು, 3 ಲಕ್ಷ ಅಕ್ರಮ ಮತ್ತು ಫ್ಲೊÃಟಿಂಗ್ ಕಂಪನಿಗಳು ಮುಚ್ಚಿದವು ಎಂದು ಗಂಟಲು ಹರಿಯುವಂತೆ ಕಿರುಚುತ್ತಲೇ ಇರುವ ರಿ-‘ಪಬ್ಲಿಕ್’ ಗೋಸ್ವಾಮಿ ಮತ್ತಾತನ ‘ಆದರ್ಶ’ ನಾಯಕ ಇದನ್ನು ಗಮನಿಸಲಿ ಎಂದು ಕೋರಿಕೆ) ಸಂದಾಯ ಮಾಡುತ್ತಾನೆ ಫರೀದ್.
ಫರೀದ್ ಸಾರ್ವಜನಿಕರ ಹಣ ಲೂಟಿ ಹೊಡೆದ, ‘ಪಬ್ಲಿಕ್’ ಫರೀದ್‌ನಿಂದಾದ ಒಂದಿಷ್ಟು (ಸಖತ್ತಾಗೇ) ಕಿತ್ತುಕೊಂಡಿತು! ಜೈ ಪತ್ರಿಕೋದ್ಯಮ, ಜೈ ಜಾಗತಿಕರಣ, ಆರ್ಥಿಕ ಶಿಸ್ತು ತಂದು ಕಪ್ಪುಹಣಕ್ಕೆ ಕಡಿವಾಣ ಹಾಕಿದ ಚೌಕಿದಾರನಿಗೂ ಜೈಅನ್ನಲೇಬೇಕ್ಲವೇ?” ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೀಲ್ ಪ್ರಕರಣ.

– ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...