Homeಮುಖಪುಟಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

- Advertisement -
- Advertisement -

ಇಷ್ಟು ದಿನ ಬ್ಯಾಂಕುಗಳ ವಿಲೀನದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರ ಈಗ ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಾಡಲು ಮುಂದಾಗಿದೆ. ಈ ಕುರಿತು ನೀತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು, ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಯೋಜನೆ ಸಿದ್ದವಾಗುತ್ತಿದೆ ಎನ್ನಲಾಗುತ್ತಿದೆ.

2017 ರಿಂದಲೂ ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸುತ್ತಿದೆ. ಆದರೆ ಬ್ಯಾಂಕ್‌ ನೌಕರರ ವ್ಯಾಪಕ ವಿರೋಧದಿಂದಾಗಿ ಕ್ರಮಕ್ಕೆ ಮುಂದಾಗಿರಲಿಲ್ಲ. ಈಗ ಪ್ರಸ್ತುತ ಇರುವ ಕೊರೊನಾ ಲಾಕ್‌ಡೌನ್‌ನ ಲಾಭ ಪಡೆದು ಖಾಸಗೀಕರಣಗೊಳಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಪಂಜಾಬ್ ಸಿಂಧ್‌ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಪ್ರಾಯೋಗಿಕವಾಗಿ ಖಾಸಗೀಕರಣಗೊಳಿಸಲಾಗುತ್ತದೆ. ಹಂತ ಹಂತವಾಗಿ ಇತರೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎನ್ನಲಾಗಿದೆ.

ಇಷ್ಟು ದಿನ ಸರ್ಕಾರವು ಹಲವು ಬ್ಯಾಂಕುಗಳ ವಿಲೀನಗೊಳಿಸುವ ಕೆಲಸದಲ್ಲಿ ಮಗ್ನವಾಗಿತ್ತು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೆ ಹಾಗೆಯೇ ವಿಜಯ ಬ್ಯಾಂಕು  ಮತ್ತು ಬ್ಯಾಂಕ್‌ ಆಫ್‌ ಬರೋಡವು ದೇನಾ ಬ್ಯಾಂಕ್‌ ಜೊತೆಗೆ ವಿಲೀನವಾಗಿದೆ. ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ 10 ಬ್ಯಾಂಕುಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸಿದ್ದನ್ನು ಅದರ ಮುಂದುವರಿದ ಭಾಗವಾಗಿ ಈಗ ಬ್ಯಾಂಕುಗಳನ್ನೇ ಖಾಸಗೀಯವರಿಗೆ ಧಾರೆಯೆರೆದುಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ನೀತಿ ಆಯೋಗವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಯವರು ದೀರ್ಘಕಾಲದ ಬಂಡವಾಳ ಹೂಡಲು ಅವಕಾಶ ಮಾಡಿಕೊಡುವಂತೆ ಹಾಗೂ ಆಯ್ದ ಕೆಲ ಕೈಗಾರಿಕಾ ಸಂಸ್ಥೆಗಳ ಸಮೂಹಗಳಿಗೆ ಸಾಲ ಕೊಡದಂತೆ ತಾಕೀತು ಮಾಡಿ ಖಾಸಗೀಕರಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಈ ನಡುವೆ ಭಾರತೀಯ ಮಜ್ದೂರ್‌ ಸಂಘ (ಬಿಎಂಸಿ) ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ಜೂನ್‌ 10 ರಾಷ್ಟ್ರವ್ಯಾಪಿ ಧರಣಿಗೆ ಕರೆ ಕೊಟ್ಟಿದೆ. “ಸೇವ್‌ ಪಬ್ಲಿಕ್‌ ಸೆಕ್ಟರ್‌, ಸೇವ್‌ ಇಂಡಿಯಾ” ಎಂಬ ಅಭಿಯಾನವನ್ನು ಆರಂಭಿಸಿದೆ.


ಇದನ್ನೂ ಓದಿ: ಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಲಿಂಗಾಯಿತರಾಗಲು ಹೊರಟಿದ್ದು, ಹಿಂಜರಿದಿದ್ದು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೇಕ್ ಇನ್ ಇಂಡಿಯಾ ಬುಲೆಟ್ ಟ್ರೈನ್ ಮತ್ತು ಸ್ಮಾರ್ಟ್ ಸಿಟಿ ಮಾಡಲಿಕ್ಕೆ ಹಣಕಾಸು ಬೇಕಾಗಿರಬಹುದು ಸರ್ಕಾರಿ ಬ್ಯಾಂಕುಗಳನ್ನು ಖಾಸಗಿಯಾಗಿ ಪರಿವರ್ತಿಸಬೇಕೆಂಬ ನರೇಂದ್ರ ಮೋದಿ ರವರ ಹುಚ್ಚುತನದ ಆಟಕ್ಕೆ
    ದೇಶದ ನಾಗರೀಕರು ಏನನ್ನಬೇಕು ಎನ್ನುವುದು ತಿಳಿಯದಾಗಿದೆ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...