ಬಿಜೆಪಿ ವಕ್ತಾರ ನವೀನ್ ಕುಮಾರ್ ಅವರ ದೂರಿನ ಮೇರೆಗೆ “ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳನ್ನು ನೀಡಿದ್ದಾರೆ” ಎಂಬ ಆರೋಪದ ಮೇಲೆ ಹಿರಿಯ ಪತ್ರಕರ್ತ ವಿನೋದ್ ದುವಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಯೂಟ್ಯೂಬ್‌ನಲ್ಲಿ “ದಿ ವಿನೋದ್ ದುವಾ ಶೋ” ಮೂಲಕ ದುವಾ “ನಕಲಿ ಸುದ್ದಿಗಳನ್ನು ಹರಡಿದ್ದಾರೆ” ಎಂದು ಕುಮಾರ್ ಅಪರಾಧ ವಿಭಾಗಕ್ಕೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
“ನನ್ನನ್ನು ಇನ್ನೂ ಪೊಲೀಸರು ಸಂಪರ್ಕಿಸಿಲ್ಲ, ಈ ಸಮಯದಲ್ಲಿ ನಾನು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ದುವಾ ಹೇಳಿದರು.
ದೆಹಲಿ ಕೋಮು ಹಿಂಸಾಚಾರದ ಬಗ್ಗೆದುವಾ ಅವರು ತಪ್ಪಾಗಿ ವರದಿ ಮಾಡಿದ್ದಾರೆ ಮತ್ತು “ಹಿಂಸಾಚಾರವನ್ನು ತಡೆಯಲು ಕೇಂದ್ರ ಸರ್ಕಾರ ಏನೇನೂ ಮಾಡಿಲ್ಲ” ಎಂದು ವರದಿ ಮಾಡಿದ್ದಾರೆ. ಅಲ್ಲದೇ ದುವಾ ಪ್ರಧಾನ ಮಂತ್ರಿಯನ್ನು “ಹಲ್ಲುರಹಿತ” ಎಂದು ಕರೆದಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.
“ಪತ್ರಕರ್ತ ವಿನೋದ್ ದುವಾ ಅವರು ತಮ್ಮ ದಿ ವಿನೋದ್ ದುವಾ ಶೋ ಮೂಲು ಯೂಟ್ಯೂಬ್‌ನಲ್ಲಿ ವೀಕ್ಷಕರಿಗೆ ಸರಣಿ ಸುಳ್ಳು ಹೇಳಿದ್ದಾರೆ ಅಥವಾ ತಪ್ಪಾಗಿ ಮಾಹಿತಿ ನೀಡಿದ್ದಾರೆ. ಸರ್ಕಾರ, ಪೊಲೀಸ್ ಮತ್ತು ರಾಜಕೀಯ ನಾಯಕರ ವಿರುದ್ಧ ವಿಲಕ್ಷಣ ಮತ್ತು ಆಧಾರರಹಿತ ಆರೋಪಗಳನ್ನು ಈ ಮೊದಲು ಸಹ ಹೊರಿಸಿದ್ದಾರೆ. ಅವರ ವಿಷಯ ತಪ್ಪುದಾರಿಗೆಳೆಯುವ ಸಂದರ್ಭವಾಗಿವೆ” ಎಂದು ಕುಮಾರ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 290, 505, 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..



ಆಡಳಿತಾರೂಢರ ಚಕಾರ ಎತ್ತಿದವರ ವಿರುದ್ಧವೆಲ್ಲಾ ಎಫ್. ಐ.ಆರ್. ದಾಕಲಾಗುತ್ತಿದೆ. ಸರ್ವಾಧಿಕಾರಕ್ಕೆ ದಿಕ್ಕಾರವಿರಲಿ.