ದೇಶಾದ್ಯಂತ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಹೇರಲು ಸಿದ್ದತೆ ನಡೆದಿದೆ ಎಂಬ ಸುದ್ದಿ ಕೇವಲ ವದಂತಿ ಎಂದು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಯಡಿಯೂರಪ್ಪನವರು ನಾಳೆಯಿಂದ ಮತ್ತೊಮ್ಮೆ ಲಾಕ್‌ಡೌನ್ ಎಂಬದು ಇಲ್ಲವೇ ಇಲ್ಲ. ನಾಳೆ ಪ್ರಧಾನಿಯೊಂದಿಗಿನ ಚರ್ಚೆಯಲ್ಲಿ ಇರುವ ಲಾಕ್‌ಡೌನ್‌ನಲ್ಲಿಯೇ ಮತ್ತಷ್ಟು ಸಡಿಲಿಕೆಗಾಗಿ ಮನವಿ ಮಾಡುತ್ತೇವೆ. ಹೊರರಾಜ್ಯಗಳಿಂದು ಬರುತ್ತಿರುವವರಿಂದ ಕೊರೊನಾ ಹೆಚ್ಚುತ್ತಿದೆಯೇ ಹೊರತು ರಾಜ್ಯದಲ್ಲಿ ಇರುವವರಿಂದಲ್ಲ ಎಂದು ತಿಳಿಸಿದ್ದಾರೆ.
@CMofKarnataka clarifies that there is no plan of enforcing another total #lockdown (2 days in a week or otherwise).
Says will request PM for more relaxations. #COVID19 pic.twitter.com/fis5CzYYJj
— Sharan Poovanna (@sharanpoovanna) June 15, 2020
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ “ಕೆಲವರು ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸುಳ್ಳನ್ನು ಹರಡುತ್ತಿದ್ದಾರೆ. ಲಾಕ್ ಡೌನ್ ಹೇರುವ ಪ್ರಶ್ನೆಯೇ ಇಲ್ಲ, ಅಂತಹ ಯಾವುದೇ ಯೋಜನೆಗಳಿಲ್ಲ” ಎಂದು ಹೇಳಿದ್ದಾರೆ.
Many people are speculating whether another lockdown in Delhi in being planned. There are no such plans.
— Arvind Kejriwal (@ArvindKejriwal) June 15, 2020
ರಾಜಧಾನಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೂ ಲಾಕ್ ಡೌನ್ ಹೇರುವ ಯೋಜನೆ ಇಲ್ಲ. ಈ ಬಗ್ಗೆ ಸಭೆಯಲ್ಲಿ ಚರ್ಚೆಯೂ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಾಳೆಯಿಂದ ಮತ್ತೆ ಲಾಕ್‌ಡೌನ್! ಈ ಸುದ್ದಿ ನಿಜವೇ?


