ದಿನೇ ದಿನೇ ಉಲ್ಭಣಿಸುತ್ತಿರುವ ಕೊರೊನಾ ಸಾಂಕ್ರಾಮಿಕದ ಮುನ್ನೆಚ್ಚರಿಕೆ ಕ್ರಮವಾಗಿ SSLC ಪರೀಕ್ಷೆ ರದ್ದುಗೊಳಿಸಿದ ತೆಲಂಗಾಣ, ತಮಿಳುನಾಡು ಪಟ್ಟಿಗೆ ಆಂಧ್ರಪ್ರದೇಶವು ಸಹ ಸೇರಿಕೊಂಡಿದೆ.
COVID19 ಹಿನ್ನೆಲೆಯಲ್ಲಿ 10 ನೇ ತರಗತಿ (SSLC) ಪರೀಕ್ಷೆಗಳನ್ನು ನಡೆಸದಿರಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್ ತಿಳಿಸಿದ್ದಾರೆ.
Andhra Pradesh govt has decided not to conduct 10th class exams in the wake of #COVID19: State Education Minister Adimulapu Suresh pic.twitter.com/GNff7fdnYH
— ANI (@ANI) June 20, 2020
ಆಂಧ್ರ ಪ್ರದೇಶವು ಒಟ್ಟು 7961 ಪ್ರಕರಣಗಳನ್ನು ದಾಖಲಿಸಿದ್ದು 96 ಸಾವುಗಳು ಸಂಭವಿಸಿವೆ. 3948 ಜನರು ಇನ್ನು ಚಿಕಿತ್ಸೆ ಪಡೆಯುತ್ತಿದ್ದು, ಇಂದು ಒಂದೇ ದಿನ 443 ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ.
ದಕ್ಷಿಣದ ರಾಜ್ಯಗಳಲ್ಲಿ ಕೇರಳ ಮಾತ್ರ ಬಾಕಿ ಉಳಿದಿದ್ದ 3 ವಿಷಯದ SSLC ಪರೀಕ್ಷೆಯನ್ನು ಮೇ ಅಂತ್ಯದಲ್ಲಿ ಯಶಸ್ವಿಯಾಗಿ ನಡೆಸಿದೆ. ತೆಲಂಗಾಣ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಿದೆ.
ಆದರೆ ಕರ್ನಾಟಕ ಮಾತ್ರ ಜೂನ್ 25 ರಿಂದ ಪರೀಕ್ಷೆ ನಡೆಸುವುದಾಗಿ ಘೋಷಿಸಿ ಸರ್ವ ತಯಾರಿ ನಡೆಸಿದೆ. ಜೂನ್ 18 ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊರ್ವಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕವನ್ನು ಹೆಚ್ಚು ಮಾಡಿದೆ.
ಇಂದಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸುವುದು ಸೂಕ್ತವಲ್ಲ : ಶಿಕ್ಷಣ ತಜ್ಞರು, ಹೋರಾಟಗಾರರ ಅಭಿಮತ
ಈ ಬಾರಿ ಕರ್ನಾಟಕದಲ್ಲಿ SSLC ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ 8.5 ಲಕ್ಷ (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಮಾಹಿತಿಯಂತೆ). ಪರೀಕ್ಷೆಯ ನಿರ್ವಾಹಕ ಸಿಬ್ಬಂದಿ ಅಂದಾಜು 2.2 ಲಕ್ಷ. ಇವರಲ್ಲಿ ದುರದೃಷ್ಟವಶಾತ್ ಯಾರಿಗಾದರೂ ಸೋಂಕು ಉಂಟಾಗಿ ಅಲ್ಲಿಂದ ಹರಡಿದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಕುಟುಂಬದವರಿಗೆ ಕಾಡುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯ ಬಳಿ ಉತ್ತರವಿದೆಯೇ ಎಂದು ಚಿಂತಕರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದು ಪರೀಕ್ಷೆ ರದ್ದುಗೊಳಿಸಲು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಕೂಡ ಕೊರೊನಾ ಹರಡುವ ಇಂತಹ ಭಯದ ಸನ್ನಿವೇಶದಲ್ಲಿ ಹೇಗೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿ ಆತಂಕರಹಿತವಾಗಿ ಪರೀಕ್ಷೆಯನ್ನು ಬರೆಯಲು ಹೇಗೆ ಸಾಧ್ಯವಾಗುತ್ತದೆ? ಪರೀಕ್ಷೆಯ ನಿರ್ವಾಹಕ ಸಿಬ್ಬಂದಿಯು ಹೇಗೆ ತಾನೇ ಮಾನಸಿಕ ಒತ್ತಡದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯ?
ಇದನ್ನೂ ಓದಿ: PUC ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್!: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಕಾ?


