Homeನಿಜವೋ ಸುಳ್ಳೋಫ್ಯಾಕ್ಟ್ ಚೆಕ್: ಎಐಎಂಐಎಂ ಸದಸ್ಯರು ಭಾರತದ ಧ್ವಜಗಳನ್ನು ಸುಟ್ಟರೆ? ವಾಸ್ತವವೇನು?

ಫ್ಯಾಕ್ಟ್ ಚೆಕ್: ಎಐಎಂಐಎಂ ಸದಸ್ಯರು ಭಾರತದ ಧ್ವಜಗಳನ್ನು ಸುಟ್ಟರೆ? ವಾಸ್ತವವೇನು?

- Advertisement -
- Advertisement -

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲೀಮೀನ್ (ಎಐಎಂಐಎಂ) ಬ್ಯಾನರ್ ಮುಂದೆ ಇಬ್ಬರು ಮುಸ್ಲಿಮರು ಧ್ವಜಗಳನ್ನು ಸುಡುವ ಮೂರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ “ಉತ್ತರ ಪ್ರದೇಶದ ಎಐಎಂಐಎಂ ಪ್ರತಾಪಘಡದ ಸದಸ್ಯರು ಕೇಸರಿ ಧ್ವಜಗಳನ್ನು ಸುಟ್ಟುಹಾಕಿದರು” ಎಂದು ಬರೆಯಲಾಗಿದೆ.

ವೈರಲಾದ ಸಂದೇಶವನ್ನು ಹಲವಾರು ಜನರು ಟ್ವಿಟ್ಟರ್‌ನಲ್ಲಿ ಹಂಚಿ “ಇದು ಪ್ರತಾಪಗಡದ ಎಐಎಂಐಎಂನ ಎಂ.ಡಿ. ಸಲೀಮ್ ಅನ್ಸಾರಿ, ಅವರು ಕೇಸರಿ ಧ್ವಜವನ್ನು ಸಾರ್ವಜನಿಕವಾಗಿ ಸುಡುತ್ತಿದ್ದಾರೆ. ಇಂತವರು ಗಲಭೆಗೆ ಕಾರಣರಾಗುತ್ತಾರೆ” ಎಂದು ಯುಪಿ ಪೊಲೀಸರಿಗೆ ಆಪಾದಿತ ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕೆಲವು ಫೇಸ್‌ಬುಕ್ ಬಳಕೆದಾರರು ಘಟನೆಯ ಮತ್ತೊಂದು ಚಿತ್ರವನ್ನು ಹಂಚಿಕೊಂಡು, “ಭಾರತದ ರಾಷ್ಟ್ರಧ್ವಜವನ್ನು ಸುಟ್ಟುಹಾಕುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ಚಿತ್ರದ ಹಿನ್ನಲೆಯಲ್ಲಿ ‘ಇಂಡಿಯಾ ಮುರ್ದಾಬಾದ್’ ಎಂದು ಬರೆದ ಪೋಸ್ಟರ್ ಕಂಡುಬರುತ್ತಿದೆ.

ಫ್ಯಾಕ್ಟ್-ಚೆಕ್

ಈ ವೈರಲ್ ಚಿತ್ರವನ್ನು ಜೂನ್ 14 ರಂದು ಪರ್ವಾನ ಮಲಿಕ್ ಜಿಯಾ ಎಂಬವರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, “ಭಾರತೀಯ ಭೂಪ್ರದೇಶವನ್ನು ತಮ್ಮದೆಂದು ಘೋಷಿಸಿದ ನೇಪಾಳದ ವಿರುದ್ದ ನೇಪಾಳದ ಧ್ವಜವನ್ನು ಸುಟ್ಟು ಎಐಐಎಂ ಸದಸ್ಯರು ಪ್ರತಿಭಟಿಸಿದರು” ಎಂದು ಜಿಯಾ ಬರೆದಿದ್ದರು. ಈ ಪೋಸ್ಟ್ ಪ್ರಕಾರ ವೈರಲ್ ಚಿತ್ರದಲ್ಲಿರುವವರ ಹೆಸರು ಸಲೀಮ್ ಅಹ್ಮದ್ ಅನ್ಸಾರಿ ಮತ್ತು ಇಸ್ರಾರ್ ಅಹ್ಮದ್.

ಅಲ್ಲದೆ, ವೈರಲಾಗುತ್ತಿರುವ ಈ ಚಿತ್ರಕ್ಕೆ ಪ್ರತಾಪ್‌ಗಡದ ಪೊಲೀಸರು “ವಿವೇಕ್ 21 ಶುಕ್ಲಾ” ಎಂಬವರಿಗೆ ಪ್ರತಿಕ್ರಿಯಿಸಿ “ಮೇಲೆ ತಿಳಿಸಿದ ಪ್ರಕರಣದಲ್ಲಿ ಪ್ರದರ್ಶಿಸಲಾದ ಧ್ವಜ ನೇಪಾಳದದ್ದಾಗಿದ್ದು, ಭಾರತದ ಭೂಪ್ರದೇಶಗಳನ್ನು ತಮ್ಮ ಭೂಮಿ ಎಂದು ಘೋಷಿಸಿದ ನೇಪಾಳದ ಸಂಸತ್ತಿನ ವಿರುದ್ದ ಎಐಐಎಂ ಪಕ್ಷದ ಪ್ರತಾಪಗಡದ ಸದಸ್ಯರು ನೇಪಾಳದ ಧ್ವಜಗಳನ್ನು ಸುಟ್ಟುಹಾಕಿ ಪ್ರತಿಭಟಿಸಿದರು” ಎಂದು ಬರೆದಿದ್ದಾರೆ.

 

ಲಿಪುಲೆಖ್, ಕಾಲಾಪಾನಿ ಮತ್ತು ಲಿಂಪಿಯಾಡುರಾ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ನೇಪಾಳದ ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾಗಿದೆ.

ಪ್ರತಾಪ್‌‌ಗಡದ ಪೊಲೀಸರು ಹಂಚಿಕೊಂಡ ಕ್ಲಿಪಿಂಗ್‌ನಲ್ಲಿ ಧ್ವಜವೂ ನೇಪಾಳದ್ದು ಎಂದು ಸ್ಪಷ್ಟವಾಗಿ ಕಾಣಬಹುದಾಗಿದೆ.

ಟ್ವಿಟ್ಟರ್‌ ಬಳಕೆದಾರರಾದ @ಅಸ್ಲಿ_ಶಿವಾನಿ ಎಂಬವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರತಾಪಗಡ ಪೊಲೀಸರು ವೈರಲ್ ವೀಡಿಯೊದಲ್ಲಿರುವ ಪುರುಷರೊಬ್ಬರ ವೀಡಿಯೊ ಸ್ಪಷ್ಟೀಕರಣವನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಅವರು ಹೇಳಿದಂತೆ “ಈ ಪ್ರತಿಭಟನೆಯ ಕುರಿತು ಗೌರವಾನ್ವಿತ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ ಹಾಗೂ ನಾನು ನೇಪಾಳ ವಿರುದ್ಧ ಪ್ರತಿಭಟಿಸಿದ್ದೇನೆ. ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಎಂದು ಯಾರಾದರೂ ಭಾವಿಸಿದರೆ, ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

ಇದಲ್ಲದೆ, ‘ನೇಪಾಳ ಮುರ್ದಾಬಾದ್’ ಎನ್ನುವ ಪೋಸ್ಟರ್‌ನೊಂದಿಗೆ ವೈರಲ್ ಚಿತ್ರಗಳಲ್ಲಿ ಎಐಐಎಂ ನ ಬ್ಯಾನರ್ ಅನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

ಜೂನ್ 18 ರಂದು ಯೂಟ್ಯೂಬ್ ಚಾನೆಲ್ ಓಸೋಕಿಂಗ್ ಒ’ಟಿವಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಘಟನೆಯನ್ನು ಕಾಣಬಹುದಾಗಿದೆ.

ಆದ್ದರಿಂದ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವಂತೆ ವೈರಲಾಗುತ್ತಿರುವ ಚಿತ್ರ ನಕಲಿಯಾಗಿದ್ದು ಅದನ್ನು ತಿದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಿದ್ದಾರೆ. 


ಓದಿ: ಈ ಚಿತ್ರ ಭಾರತ-ಚೀನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧನದ್ದೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...