Homeಮುಖಪುಟಗಾಲ್ವನ್ ಸಂಘರ್ಷಕ್ಕೆ ಬಿಹಾರ 16 ನೇ ರೆಜಿಮೆಂಟ್ ಕಾರಣ: ಚೀನೀ ಸೇನೆ ಆರೋಪ

ಗಾಲ್ವನ್ ಸಂಘರ್ಷಕ್ಕೆ ಬಿಹಾರ 16 ನೇ ರೆಜಿಮೆಂಟ್ ಕಾರಣ: ಚೀನೀ ಸೇನೆ ಆರೋಪ

- Advertisement -
- Advertisement -

ಜೂನ್ 15 ರಂದು ಗಾಲ್ವನ್ ಗಡಿಯಲ್ಲಿ ನಡೆದ ಹಿಂಸಾಚಾರಕ್ಕೆ ಭಾರತೀಯ ಸೈನ್ಯದ ಪ್ರಮುಖ ಘಟಕವಾದ 16 ನೇ ಬಿಹಾರ ರೆಜಿಮೆಂಟ್‌ನ ಸೈನಿಕರು ಪ್ರಚೋದಿಸಿದ್ದಾರೆ ಎಂದು ಚೀನಾ ಸೇನೆ ಆರೋಪಿಸಿದೆ. ಅಲ್ಲದೆ ಭಾರತವು ಈ ಘಟಕವನ್ನು ಶಿಕ್ಷಿಸಬೇಕೆಂದು ಅದು ಆಗ್ರಹಿಸಿದೆ.

“ಜೂನ್ 15 ರ ಸಂಜೆ ನಡೆದ ಘರ್ಷಣೆಗೆ ಹೊಣೆಗಾರರಾಗಿರುವವರಿಗೆ ಭಾರತ ಕಠಿಣ ಶಿಕ್ಷೆ ವಿಧಿಸಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಚೀನಾದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ತನ್ನ ಮುಂಚೂಣಿ ಪಡೆಗಳನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧಗೊಳಿಸಬೇಕು ಎಂದು ಚೀನಾದ ಕಡೆಯವರು ಒತ್ತಾಯಿಸುತ್ತಾರೆ” ಎಂದು ಚೀನೀ ಸೇನೆಯ ಹಿರಿಯ ಕರ್ನಲ್ ಮತ್ತು ರಕ್ಷಣಾ ಸಚಿವಾಲಯದ ವಕ್ತಾರ ವೂ ಕಿಯಾನ್ ಬುಧವಾರ ಬೀಜಿಂಗ್‌ನಲ್ಲಿ ಹೇಳಿದ್ದಾರೆ.

“ಘರ್ಷಣೆಗೆ ಜವಾಬ್ದಾರರಾಗಿರುವವರ ಮುಂಚೂಣಿ ಪಡೆ” ಎಂದು ಚೀನಾ 16 ನೇ ಬಿಹಾರ ರೆಜಿಮೆಂಟ್ ಘಟಕವನ್ನು ಉದ್ದೇಶಿಸಿ ಹೇಳಿದೆ. ಅಂದು 16 ನೇ ಬಿಹಾರ ರೆಜಿಮೆಂಟ್‌ನ ನೇತೃತ್ವವನ್ನು ಕರ್ನಲ್ ಸಂತೋಷ್ ಬಾಬು ವಹಿಸಿಕೊಂಡಿದ್ದು, ಸಂಘರ್ಷದಲ್ಲಿ ಕೊಲ್ಲಲ್ಪಟ್ಟಿದ್ದರು.

“ಕಾರ್ಪ್ಸ್ ಕಮಾಂಡರ್-ಮಟ್ಟದ ಸಭೆಯಲ್ಲಿ ಆದ ಒಪ್ಪಂದವನ್ನು ಉಲ್ಲಂಘಿಸಿ, ಜೂನ್ 15 ರ ಸಂಜೆ, ಭಾರತದ ಮುಂಚೂಣಿ ಪಡೆಗಳು ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡಿ ಮತ್ತೊಮ್ಮೆ ಎಲ್‌ಎಸಿಯನ್ನು ದಾಟಿ ಅಲ್ಲಿದ್ದ ಚೀನಾದ ಅಧಿಕಾರಿಗಳು ಮತ್ತು ಸೈನಿಕರ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡಿದರು” ಇದು ಸಂಘರ್ಷಕ್ಕೆ ಕಾರಣವಾಯಿತು ಎಂದು ವೂ ಹೇಳಿದ್ದಾರೆ.

ಜೂನ್ 16 ರಂದು ನಡೆದ ಘರ್ಷಣೆಯ ಬಗ್ಗೆ ತನ್ನ ಮೊದಲ ಹೇಳಿಕೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾವನ್ನು ದೂಷಿಸಿತ್ತು. ಭಾರತೀಯ ಸೈನ್ಯದ ಚಟುವಟಿಕೆಗಳು ವಾಸ್ತವಿಕ ನಿಯಂತ್ರಣ ರೇಖೆಯ ಭಾರತೀಯ ಭಾಗದಲ್ಲಿವೆ ಎಂದು ಚಿವಾಲಯವು ಒತ್ತಿಹೇಳಿತ್ತು.


ಓದಿ: ಗಡಿ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಮೊದಲ ಶಾಖೆ ತೆರೆಯಿತೆ ಬ್ಯಾಂಕ್ ಆಫ್ ಚೀನಾ?; ಫ್ಯಾಕ್ಟ್‌ಚೆಕ್


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...