ರಾಕೆಟ್, ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣಾ ಸೇವೆಗಳನ್ನು ಒದಗಿಸುವಂತಹ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು ಖಾಸಗಿ ವಲಯಕ್ಕೆ ಅವಕಾಶ ನೀಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಗುರುವಾರ ಪ್ರಕಟಿಸಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಉದ್ಯಮದ ಚಟುವಟಿಕೆಗಳನ್ನು ಅನುಮತಿಸಲು ಮತ್ತು ನಿಯಂತ್ರಿಸಲು ಪ್ರತ್ಯೇಕ ಶೃಂಗೀಯ ಬಾಹ್ಯಾಕಾಶ ಇಲಾಖೆಯಡಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಡೀಕರಣ ಕೇಂದ್ರವನ್ನು ( IN-SPACe) ಸ್ಥಾಪಿಸುವುದಾಗಿ ಡಾ. ಶಿವನ್ ಘೋಷಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಪ್ರಯತ್ನಗಳನ್ನು ಆಸರೆಯಾಗಲು ಮತ್ತು ಉತ್ತೇಜಿಸಲು IN-SPACe ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದಕ್ಕಾಗಿ ಇಸ್ರೋ ತನ್ನ ತಾಂತ್ರಿಕ ಪರಿಣತಿಯನ್ನು ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳಲಿದೆ.
ಓದಿ: ಚಂದ್ರಯಾನ -3 ಕ್ಕೆ ಸಿದ್ಧತೆ: 2020ರ ನವೆಂಬರ್‌ಗೆ ಉಡ್ಡಯನ.
ಖಾಸಗಿ ಉದ್ಯಮದ ಅವಶ್ಯಕತೆಗಳನ್ನು ನಿರ್ಣಯಿಸಲು ಮತ್ತು ಚಟುವಟಿಕೆಗಳನ್ನು ಮತ್ತಷ್ಟು ಸಮನ್ವಯಗೊಳಿಸಲು ತಾಂತ್ರಿಕ, ಕಾನೂನು, ಸುರಕ್ಷತೆ ಮತ್ತು ಭದ್ರತೆ, ಮಾನಿಟರಿಂಗ್ ಮತ್ತು ಚಟುವಟಿಕೆಗಳ ಪ್ರಚಾರಕ್ಕಾಗಿ IN-SPACe ತನ್ನದೇ ಆದ ಸ್ವತಂತ್ರ ನಿರ್ದೇಶನಾಲಯಗಳನ್ನು ಹೊಂದಿರುತ್ತದೆ.
ಖಾಸಗಿ ವಲಯವು ಇಸ್ರೋನ ಅಂತರ-ಗ್ರಹಗಳ ಕಾರ್ಯಾಚರಣೆಯ ಭಾಗವಾಗಬಹುದು ಎನ್ನಲಾಗಿದೆ.
In his address today, Dr. Sivan announced establishment of IN-SPACe under Department of Space as a separate vertical for permitting and regulating the activities of private industry in space sector.
For further details please visit: https://t.co/RyizPC1cf9
— ISRO (@isro) June 25, 2020
ಗ್ರಹಗಳ ಪರಿಶೋಧನಾ ಕಾರ್ಯಾಚರಣೆಗಳು ಸೇರಿದಂತೆ ಸಂಪೂರ್ಣ ಶ್ರೇಣಿಯ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಕ್ಯಾಬಿನೆಟ್ ಬುಧವಾರ ಅನುಮೋದಿಸಿದೆ.
ಈ ನಿರ್ಧಾರದಿಂದಾಗಿ ಇಸ್ರೋ ಚಟುವಟಿಕೆಗಳು ಕಡಿಮೆಯಾಗುವುದಿಲ್ಲ, ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ, ಅಂತರ ಗ್ರಹಗಳು ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳು ಸೇರಿದಂತೆ ಬಾಹ್ಯಾಕಾಶ ಆಧಾರಿತ ಚಟುವಟಿಕೆಗಳನ್ನು ಮುಂದುವರಿಸಲಿದೆ ಎಂದು ಶಿವನ್ ಹೇಳಿದರು.
ಬಾಹ್ಯಾಕಾಶ ವಲಯದಲ್ಲಿನ ಸುಧಾರಣೆಗಳು ಖಾಸಗಿ ಉದ್ಯಮಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ಪ್ರತಿಯೊಂದು ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಮೂಲಕ ಇಡೀ ದೇಶದ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಟ್ಯಾಪ್ ಮಾಡುವ ಗುರಿಯನ್ನು ಹೊಂದಿವೆ ಎಂದು ಅದು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.


