Homeಮುಖಪುಟಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿಎಸ್‌ಆರ್‌ ಹಣ ಏಕಿಲ್ಲ?: ಸುಪ್ರೀಂ ಕದ ತಟ್ಟಿದ ರಾಜಸ್ಥಾನ

ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿಎಸ್‌ಆರ್‌ ಹಣ ಏಕಿಲ್ಲ?: ಸುಪ್ರೀಂ ಕದ ತಟ್ಟಿದ ರಾಜಸ್ಥಾನ

- Advertisement -
- Advertisement -

ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಯೋಜನೆಯಿಂದ ಮುಖ್ಯಮಂತ್ರಿಯ ಪರಿಹಾರ ನಿಧಿಯನ್ನು ಹೊರತುಪಡಿಸಿರುವ ಕೇಂದ್ರದ ಕ್ರಮವನ್ನು ರಾಜಸ್ಥಾನ ಸರ್ಕಾರವು  ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಸುತ್ತೋಲೆಯು ನಿರಾಶೆಗೊಳಿಸಿದೆ ಎಂದು ಅದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.

ಹೀಗಾಗಿ ಸಿಎಸ್ಆರ್ ವ್ಯಾಪ್ತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು (ಸಿಎಮ್ಆರ್‌ಎಫ್) ಹೊರತುಪಡಿಸುವ ಕೇಂದ್ರ ಸರ್ಕಾರದ ಸುತ್ತೋಲೆಯ ಮಾನ್ಯತೆಯು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ. ಕೊರೊನಾ ಪರಿಣಾಮವನ್ನು ತಗ್ಗಿಸಲು ಸಿಎಸ್ಆರ್ ಯೋಜನೆಯ ಭಾಗವಾಗಿ ದೇಣಿಗೆ ಸ್ವೀಕರಿಸಲು ಸಿಎಮ್ಆರ್‌ಎಫ್ ಅನ್ನು ರಚಿಸಲಾಗಿದೆ.

ಕಾಂಗ್ರೆಸ್ ನೇತೃತ್ವದ ರಾಜಸ್ಥಾನ್ ಸರ್ಕಾರ ಸಲ್ಲಿಸಿದ್ದ ಅರ್ಜಿಯಲ್ಲಿ, ಏಪ್ರಿಲ್ 10 ರ ಸುತ್ತೋಲೆ ಪಿಎಂ ಕೇರ್ಸ್ ಫಂಡ್‌ಗೆ ಇಂತಹ ದೇಣಿಗೆ ಪಡೆಯಲು ಅವಕಾಶವಿದೆ. ಆದರೆ ಸಿಎಮ್‌ಆರ್‌ಎಫ್ ಏಕೆ ಅವಕಾಶವಿಲ್ಲ ಎಂಬ ಬಗ್ಗೆ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.

ಪಿಎಂ ಕೇರ್ಸ್ ನಿಧಿಯನ್ನು ಕೇಂದ್ರವು ರಚಿಸಿದ ಒಂದು ದಿನದ ನಂತರ ಮಾರ್ಚ್ 29 ರಂದು ರಾಜಸ್ಥಾನ್ ಸರ್ಕಾರ ಈ ನಿಧಿಯನ್ನು ಸ್ಥಾಪಿಸಿತು.

ಜೂನ್ 16 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬಾಬ್ಡೆ ನೇತೃತ್ವದ ನ್ಯಾಯಪೀಠವು ಎರಡು ನಿಧಿಗಳ ನಡುವಿನ ಅಂತಹ ವ್ಯತ್ಯಾಸವು ಅಸಂವಿಧಾನಿಕವಾಗಿದೆ ಮತ್ತು ಸಹಕಾರಿ ಫೆಡರಲಿಸಂನ ತತ್ವಕ್ಕೆ ವಿರುದ್ಧವಾಗಿದೆ ಎಂದು ರಾಜಸ್ಥಾನದ ಪ್ರತಿಪಾದನೆಯ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಕೇಂದ್ರದ ಈ ಸುತ್ತೋಲೆಯು ಅಸಂವಿಧಾನಿಕ ಎಂದು ಘೋಷಿಸಲು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಇದುವೆ ಮೊದಲ ಬಾರಿಯಲ್ಲ. ಮೇ ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮೊಯಿತ್ರಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ, ಪಿಎಂ ಕೇರ್ಸ್ ಮತ್ತು ಸಿಎಮ್ಆರ್‌ಎಫ್ ನಡುವಿನ ಅಸಮಾನತೆಯನ್ನು ಅವರು ಎತ್ತಿ ತೋರಿಸಿದ್ದರು. ಕೇವಲ ಪಿಎಂ ಕೇರ್ಸ್‌‌ಗೆ ಮಾತ್ರ ಸಿಎಸ್‌ಆರ್‌ ದೇಣಿಗೆ ನೀಡಲು ಸಾಧ್ಯ, ರಾಜ್ಯ ಸರ್ಕಾರಗಳ ನಿಧಿಗೆ ಅವಕಾಶವಿಲ್ಲ ಎಂದು ವಾದಿಸಿದ್ದರು.

ಆದರೆ, ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ನಿರಾಕರಿಸಿ, ಲೋಕಸಭಾ ಸಂಸದರು ನ್ಯಾಯಾಲಯದಲ್ಲಿ ವಾದಿಸುವ ಬದಲು ತನ್ನ ವಿವಾದವನ್ನು  ಸಂಸತ್ತಿನಲ್ಲಿ ಚರ್ಚಿಸುವಂತೆ ಕೇಳಿಕೊಂಡಿತ್ತು.


ಓದಿ: ಬಿಜೆಪಿಗೂ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೂ ಸಂಬಂಧವೇನು? : ಕಾಂಗ್ರೆಸ್‌ನಿಂದ ಹತ್ತು ಪ್ರಶ್ನೆಗಳು


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...