Homeಮುಖಪುಟಕಾನೂನಿನ ದುರುಪಯೋಗ: ಸ್ಕ್ರೋಲ್.ಇನ್ ಸಂಪಾದಕರ ಮೇಲಿನ FIR ರದ್ಧತಿಗೆ ಅರ್ಜಿ

ಕಾನೂನಿನ ದುರುಪಯೋಗ: ಸ್ಕ್ರೋಲ್.ಇನ್ ಸಂಪಾದಕರ ಮೇಲಿನ FIR ರದ್ಧತಿಗೆ ಅರ್ಜಿ

ಈ ಎಫ್ಐಆರ್ ನೋಂದಣಿ ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮನಾಗಿರುತ್ತದೆ. ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಬೆದರಿಸುವ, ಮೌನಗೊಳಿಸುವ ಮತ್ತು ಶಿಕ್ಷಿಸುವ ಉದ್ದೇಶವನ್ನು ಹೊಂದಿದೆ.

- Advertisement -
- Advertisement -

ಖ್ಯಾತ ಸುದ್ದಿ ಪೋರ್ಟಲ್ ಸ್ಕ್ರೋಲ್.ಇನ್ ಸಂಪಾದಕರಾದ ಸುಪ್ರಿಯಾ ಶರ್ಮಾ ಮತ್ತು ನರೇಶ್ ಫರ್ನಾಂಡಿಸ್ ಅವರು ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಾರಣಾಸಿ ಕ್ಷೇತ್ರದಲ್ಲಿ ದತ್ತು ಪಡೆದ ಡೊಮರಿ ಗ್ರಾಮದಲ್ಲಿನ ಜನರ ಕಳಪೆ ಜೀವನ ಪರಿಸ್ಥಿತಿಗಳನ್ನು ಚಿತ್ರಿಸುವ ಸುದ್ದಿ ವರದಿಯನ್ನು ದಿ ಸ್ಕ್ರೋಲ್ ಮಾಡಿತ್ತು. ಅದಕ್ಕಾಗಿ ಅದರ ಸಂಪಾದಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

“ತಮ್ಮ ವಿರುದ್ಧದ ಎಫ್ಐಆರ್ ಸಂಪೂರ್ಣವಾಗಿ ಸುಳ್ಳು, ದ್ವೇಷ ಪ್ರೇರಿತ, ದುರುದ್ದೇಶಪೂರಿತ ಮತ್ತು ಆಧಾರರಹಿತವಾಗಿದೆ. ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಇದು ಸ್ವತಂತ್ರ ಪತ್ರಕರ್ತರನ್ನು ಬೆದರಿಸುವ ಮತ್ತು ಕಿರುಕುಳ ನೀಡುವುದಾಗಿದೆ. ದುರ್ಬಲ ಜನರ ಜೀವನದ ಬಗ್ಗೆ ಸತ್ಯ ಮತ್ತು ಕಠೋರ ವಾಸ್ತವತೆಯನ್ನು ತಿಳಿಸುವ ವಿಮರ್ಶಾತ್ಮಕ ವರದಿ ಮಾಡುವ ಪತ್ರಿಕಾ ಸ್ವಾತಂತ್ರ್ಯವನ್ನು ತಡೆಯುವುದಕ್ಕಾಗಿ ಈ ದೂರು ನೀಡಲಾಗಿದೆ ಎಂದು ಅರ್ಜಿಯಲ್ಲಿ ಅವರು ಪ್ರತಿಪಾದಿಸಿದ್ದಾರೆ.

ತನ್ನ ವರದಿಯಲ್ಲಿ ಶರ್ಮಾ ಉಲ್ಲೇಖಿಸಿರುವ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಯುಪಿ ಪೊಲೀಸರು ವಾರಣಾಸಿ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 269, 501 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ದೂರು ನೀಡಿದ ಮಹಿಳೆಯು ವರದಿಯಲ್ಲಿ ತಮ್ಮ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ಈ ಎಫ್ಐಆರ್ ನೋಂದಣಿ ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮನಾಗಿರುತ್ತದೆ. ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಬೆದರಿಸುವ, ಮೌನಗೊಳಿಸುವ ಮತ್ತು ಶಿಕ್ಷಿಸುವ ಉದ್ದೇಶವನ್ನು ಹೊಂದಿದೆ. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮವು ನ್ಯಾಯದ ಗಂಭೀರ ಅವಸಾನಕ್ಕೆ ಕಾರಣವಾಗುತ್ತದೆ ”ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನೈಜ ಪತ್ರಿಕೋದ್ಯಮ ಅಭ್ಯಾಸದ ಭಾಗವಾಗಿ ಮಹಿಳೆಯೊಂದಿಗೆ ಸಂದರ್ಶನದ ರೆಕಾರ್ಡ್ ಮಾಡಿದ ಆಡಿಯೊವನ್ನು ಶರ್ಮಾ ಹೊಂದಿದ್ದಾರೆ, ಅವರು ಹೇಳಿದ್ದನ್ನು ಆಧರಿಸಿಯೇ ವರದಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ನಿರಾಕರಿಸಿದ ಅರ್ಜಿದಾರರು ಸಮುದಾಯಕ್ಕೆ ಯಾವುದೇ ಉದ್ದೇಶಪೂರ್ವಕ ಅವಮಾನ ಅಥವಾ ನೋವುಂಟು ಮಾಡಿಲ್ಲ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧ ಯಾವುದೇ ಪ್ರಥಮ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ತಿಳಿಸಿ, ಅವರು ತಮ್ಮ ಬಂಧನವನ್ನು ತಡೆಹಿಡಿಯಲು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.


ತಮಿಳುನಾಡು ಲಾಕಪ್‌ ಸಾವು: ಪೊಲೀಸರ ಹಲ್ಲೆಗೆ ಸಿಕ್ಕಿವೆ ಹತ್ತಾರು ದಾಖಲೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...