Homeಮುಖಪುಟತಮಿಳುನಾಡು ಲಾಕಪ್‌ ಸಾವು: ಪೊಲೀಸರ ಹಲ್ಲೆಗೆ ಸಿಕ್ಕಿವೆ ಹತ್ತಾರು ದಾಖಲೆಗಳು

ತಮಿಳುನಾಡು ಲಾಕಪ್‌ ಸಾವು: ಪೊಲೀಸರ ಹಲ್ಲೆಗೆ ಸಿಕ್ಕಿವೆ ಹತ್ತಾರು ದಾಖಲೆಗಳು

- Advertisement -
- Advertisement -

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನಂಕುಳಂನ ಪೊಲೀಸ್ ಲಾಕಪ್‌ನಲ್ಲಿ ಮೃತಪಟ್ಟ ಜಯರಾಜ್(58) ಹಾಗೂ ಅವರ ಮಗ ಬೆನಿಕ್ಸ್(31) ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯವನ್ನು ದೃಢೀಕರಿಸುವ ಹಲವು ಸಾಕ್ಷ್ಯಗಳು ಬೆಳಕಿಗೆ ಬಂದಿವೆ.

ತೂತುಕುಡಿ ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿ ಮೃತಪಟ್ಟ ತಂದೆ – ಮಗ ಜಯರಾಜ್ ಮತ್ತು ಬೆನಿಕ್ಸ್ ಸಾವಿಗೆ ನ್ಯಾಯಕ್ಕಾಗಿ ತಮಿಳುನಾಡು ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಅವರ ಸ್ನೇಹಿತರು ಮತ್ತು ಕುಟುಂಬದವರು ಆರೋಪಿಸುತ್ತಿರುವುದನ್ನು ದೃಢಪಡಿಸುತ್ತದೆ ಜಯರಾಜ್ ಮತ್ತು ಬೆನಿಕ್ಸ್ ಅವರ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಾಗ ತೀವ್ರಥರವಾಗಿ ಹಲ್ಲೆ ಮಾಡಿದ್ದು, ಆ ಸಮಯದಲ್ಲಿಯೇ ಗಾಯಗಳಾಗಿವೆ ಎನ್ನಲಾಗಿದೆ.


ತಮಿಳುನಾಡು ಲಾಕಪ್ ಡೆತ್: ಪೊಲೀಸ್ ಹಾಗೂ ಮ್ಯಾಜಿಸ್ಟ್ರೇಟ್ ವಿರುದ್ದ ಹಲವಾರು ಆರೋಪ


ಕೋವಿಲ್ಪಟ್ಟಿ ಉಪ ಕಾರಾಗೃಹದಲ್ಲಿ ವೈದ್ಯರು ನಿರ್ವಹಿಸಿದ ದಾಖಲೆಯ ಒಂದು ಭಾಗವು ಸೋರಿಕೆಯಾಗಿದೆ. ಅದರಲ್ಲಿ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಜೂನ್ 20 ರಂದು ಪೊಲೀಸ್ ಕಸ್ಟಡಿಯಿಂದ ಕರೆತಂದಾಗ ಅವರ ದೇಹಲ ಮೇಲೆ ಗಾಯಗಳಾಗಿದ್ದವು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

58 ವರ್ಷದ ಜಯರಾಜ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿದ್ದರು ಎಂದು ಆಸ್ಪತ್ರೆಯ ದಾಖಲೆ ತಿಳಿಸಿದೆ. ಅವನ ಗ್ಲುಟಿಯಲ್ (ಪೃಷ್ಠದ) ಮೇಲೆ ಅನೇಕ ಹಲ್ಲೆಯ ಗುರುತುಗಳಿದ್ದವು ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ 31 ವರ್ಷದ ಬೆನಿಕ್ಸ್ ತನ್ನ ಗ್ಲುಟಿಯಲ್ ಮೇಲೆ ಅನೇಕ ಹಲ್ಲೆಯ ಗುರುತುಗಳಿದ್ದವು.

ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಜೂನ್ 20 ರ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆತರಲಾಯಿತು. ಅವರನ್ನು ರಿಮಾಂಡ್ ಪ್ರಕ್ರಿಯೆಗಾಗಿ ಸಾಥಂಕುಲಂನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಡಿ ಸರವಣನ್ ಅವರ ಬಳಿ ಕರೆದೊಯ್ಯಲಾಯಿತು.

ಗ್ಲುಟಿಯಲ್ ಪ್ರದೇಶದ ಗಾಯಗಳು ಮತ್ತು ಇತರ ಗಾಯಗಳನ್ನು ಕೋವಿಲ್ಪಟ್ಟಿ ಉಪ-ಜೈಲು ವೈದ್ಯರು ನಿರ್ವಹಿಸಿದ ಪ್ರವೇಶ ದಾಖಲೆಗಳಲ್ಲಿ ದಾಖಲಿಸಲಾಗಿದೆ. ಟೈಮ್ಸ್ ನೌ ಜೈಲಿನ ರಿಜಿಸ್ಟರ್ ಅನ್ನು ಪರಿಶೀಲಿಸಿದಾಗ ಅವರ ಪೃಷ್ಠದ ಗಾಯಗಳು ಮತ್ತು ರಕ್ತಸ್ರಾವವನ್ನು ದಾಖಲಿಸಿರುವುದು ಸ್ಪಷ್ಟವಾಗಿದೆ. ಜೈಲಿಗೆ ಪ್ರವೇಶಿಸುವ ಸಮಯದಲ್ಲಿ ಬೆನಿಕ್ಸ್ ಕಾಲುಗಳು ಮತ್ತು ಮಣಿಕಟ್ಟುಗಳು ಊದಿಕೊಂಡಿದ್ದವು ಎಂದು ಜೈಲಿನ ಪ್ರವೇಶ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರವೇಶ ದಾಖಲೆಗೆ ಜಯರಾಜ್, ಬೆನಿಕ್ಸ್ ಮತ್ತು ಸಾಥನ್‌ಕುಲಂ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು, ಚೆಲ್ಲದುರೈ ಮತ್ತು ಮುತ್ತುರಾಜ್ ಸಹಿ ಮಾಡಿದ್ದಾರೆ.

ಈ ದಾಖಲೆಗಳು ಇವರಿಬ್ಬರನ್ನು ಸಾಥಂಕುಲಂ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಿಂಸಿಸಿದ್ದಾರೆ ಎಂದು ಜೂನ್ 23 ರಿಂದ ಹಲವಾರು ಪ್ರತ್ಯಕ್ಷದರ್ಶಿಗಳು ಹೇಳುತ್ತಿರುವುದನ್ನು ಖಚಿತಪಡಿಸುತ್ತವೆ. ವರದಿಯ ಪ್ರಕಾರ, ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್ ಮತ್ತು ರಘುಗಾನೇಶ್ ಮತ್ತು ಐವರು ‘ಪೊಲೀಸ್ ಸ್ವಯಂಸೇವಕರು’ ಸಿಬ್ಬಂದಿ ಸೇರಿದಂತೆ ಎಂಟು ಪೊಲೀಸರು ಜೂನ್ 19 ರ ರಾತ್ರಿ ಠಾಣೆಯಲ್ಲಿದ್ದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.

ಜಯರಾಜ್ ಮತ್ತು ಬೆನಿಕ್ಸ್ ಅವರ ಕುಟುಂಬ ಮತ್ತು ಸ್ನೇಹಿತರು ಜೂನ್ 20 ರಂದು ಆಸ್ಪತ್ರೆಯ ಒಳಗೆ ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಗೆ ಹೋಗುವ ಮೊದಲು ಅವರ ಬಟ್ಟೆಗಳು ರಕ್ತದಿಂದ ಒದ್ದೆಯಾದ ಕಾರಣಕ್ಕೆ ಅನೇಕ ಬಾರಿ ತಮ್ಮ ಶರ್ಟ್ ಮತ್ತು ಲುಂಗಿಯನ್ನು ಬದಲಾಯಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ಆಸ್ಪತ್ರೆಯ ದಾಖಲೆಯಲ್ಲಿ ಸೋರಿಕೆಯಾದ ಭಾಗವು ಆಶ್ಚರ್ಯಕರವಾಗಿದೆ, ರಕ್ತಸ್ರಾವದ ಬಗ್ಗೆ ಇದರಲ್ಲಿ ಯಾವುದೇ ಉಲ್ಲೇಖ ಇಲ್ಲ. ಕಾನೂನಿನ ಪ್ರಕಾರ ಈ ವೈದ್ಯಕೀಯ ತಪಾಸಣೆ ಸಂಪೂರ್ಣ ವಂಚನೆ ಮತ್ತು ಆಸ್ಪತ್ರೆಯಲ್ಲಿ ಇವರಿಬ್ಬರನ್ನು ಪೊಲೀಸರು ಸುತ್ತುವರೆದಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿಯೂ ಸಹ ಅನೇಕ ಪೊಲೀಸ್ ಸಿಬ್ಬಂದಿ ಇದ್ದರು ಮತ್ತು ಜಯರಾಜ್ ಮತ್ತು ಬೆನಿಕ್ಸ್ ಅವರು ಮ್ಯಾಜಿಸ್ಟ್ರೇಟ್‌ಗೆ ತಮ್ಮ ಗಾಯಗಳ ಬಗ್ಗೆ ಮಾತನಾಡದಂತೆ ನೋಡಿಕೊಂಡರು. ದೈಹಿಕ ತಪಾಸಣೆ ಮತ್ತು ಸ್ಥಿತಿಗತಿಯ ಬಗ್ಗೆ ಕೇಳದ ಕಾರಣಕ್ಕಾಗಿ ಹಲವಾರು ನ್ಯಾಯಶಾಸ್ತ್ರಜ್ಞರು ಮ್ಯಾಜಿಸ್ಟ್ರೇಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮ್ಯಾಜಿಸ್ಟ್ರೇಟ್ ಕಛೇರಿ ತಲುಪುವ ಮೊದಲು ಪೊಲೀಸರು ಕುಟುಂಬಕ್ಕೆ ಗಾಢ ಬಣ್ಣದ ಲುಂಗಿಗಳನ್ನು ತರಲು ಹೇಳಿದ್ದರು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಇದೆಲ್ಲವೂ ಪೊಲೀಸರು ತಮ್ಮ ಹಲ್ಲೆಯನ್ನು ಮುಚ್ಚಿಕೊಳ್ಳಲು ಮಾಡಿದ ಪ್ರಯತ್ನ ಎಂದು ಸಂಬಂಧಿಕರು ದೂರಿದ್ದಾರೆ.

ತೂತುಕುಡಿ ಜಿಲ್ಲಾಡಳಿತ ನಿರ್ದಿಷ್ಟಪಡಿಸಿದ ಲಾಕ್‌ಡೌನ್ ಸಮಯವನ್ನು ಮೀರಿ ತಮ್ಮ ಅಂಗಡಿಯನ್ನು ತೆರೆದಿರುವ ಆರೋಪದ ಮೇಲೆ ಬೆನಿಕ್ಸ್ ಮತ್ತು ಜಯರಾಜ್ ಅವರನ್ನು ಜೂನ್ 19 ರಂದು ಸಾಥನ್‌ಕುಲಂ ಪೊಲೀಸರು ಬಂಧಿಸಿದ್ದರು. ಅವರನ್ನು ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಿಂಸಿಸಿ ನಂತರ ಜೂನ್ 20 ರಂದು ಕೋವಿಲ್ಪಟ್ಟಿ ಉಪ ಜೈಲಿನಲ್ಲಿ ರಿಮಾಂಡ್ ಮಾಡಲಾಯಿತು. ಬೆನಿಕ್ಸ್‌ಗೆ ಜೂನ್ 22 ರಂದು ಎದೆನೋವು ಕಾಣಿಸಿಕೊಂಡು ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದರು. ಜಯರಾಜ್ ಮರುದಿನ ಬೆಳಿಗ್ಗೆ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಪೊಲೀಸ್ ದೌರ್ಜನ್ಯದ ಘಟನೆಗಳನ್ನು ವಿರೋಧಿಸಿ ಜನರು ಮತ್ತು ರಾಜಕಾರಣಿಗಳು ತೀವ್ರ ರೀತಿಯಲ್ಲಿ ಖಂಡಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ತೀವ್ರ ಪ್ರತಿಭಟನೆ ಕಂಡುಬಂದಿದೆ.


ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...