Homeಮುಖಪುಟಬಾಯ್ಕಾಟ್ ಚೀನಾ: ಟೀಶರ್ಟ್‌ ಸುಟ್ಟು ಪ್ರತಿಭಟಿಸಿದ ಜೊಮಾಟೊ ಉದ್ಯೋಗಿಗಳು!

ಬಾಯ್ಕಾಟ್ ಚೀನಾ: ಟೀಶರ್ಟ್‌ ಸುಟ್ಟು ಪ್ರತಿಭಟಿಸಿದ ಜೊಮಾಟೊ ಉದ್ಯೋಗಿಗಳು!

- Advertisement -
- Advertisement -

ಕಳೆದ ವಾರ ಲಡಾಖ್‌ನಲ್ಲಿ ಚೀನಾದ ಸೇನೆಯು 20 ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದನ್ನು ವಿರೋಧಿಸಿ ಕೋಲ್ಕತ್ತಾದ ಆಹಾರ ವಿತರಣಾ ವೇದಿಕೆಯ ಜೊಮಾಟೊದ ನೌಕರರ ಗುಂಪು ಶನಿವಾರ ನಿನ್ನೆ ತಮ್ಮ ಅಧಿಕೃತ ಟೀ ಶರ್ಟ್‌ಗಳನ್ನು ಹರಿದು ಸುಟ್ಟುಹಾಕಿ ಪ್ರತಿಭಟನೆ ದಾಖಲಿಸಿದ್ದಾರೆ.

ಬೆಹಾಲಾದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ, ಅವರಲ್ಲಿ ಕೆಲವರು ಜೊಮಾಟೊ ಕಂಪನಿಯು ಚೀನಾದಿಂದ ಗಣನೀಯ ಪ್ರಮಾಣದ ಹೂಡಿಕೆಯನ್ನು ಹೊಂದಿರುವುದರಿಂದ ತಾವು ಕೆಲಸ ತ್ಯಜಿಸಿರುವುದಾಗಿ ಹೇಳಿಕೊಂಡರು ಮತ್ತು ಕಂಪನಿಯ ಮೂಲಕ ಆಹಾರವನ್ನು ಆದೇಶಿಸುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.

2018 ರಲ್ಲಿ, ಚೀನಾದ ಪ್ರಮುಖ ಕಂಪನಿ ಅಲಿಬಾಬಾದ ಭಾಗವಾಗಿರುವ ಆಂಟ್ ಫೈನಾನ್ಷಿಯಲ್ಜೊ ಮಾಟೊದಲ್ಲಿ ಶೇಕಡಾ 14.7 ರಷ್ಟು ಪಾಲನ್ನು ಹೊಂದುವ ಮೂಲಕ 210 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಅಲ್ಲದೇ ಜೊಮೊಟೊಗೆ ಇತ್ತೀಚೆಗೆ ಆಂಟ್ ಫೈನಾನ್ಷಿಯಲ್‌ ಹೆಚ್ಚುವರಿ 150 ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ.

“ಚೀನಾದ ಕಂಪನಿಗಳು ಇಲ್ಲಿಂದ ಲಾಭ ಗಳಿಸುತ್ತಿವೆ ಮತ್ತು ನಮ್ಮ ದೇಶದ ಸೈನ್ಯದ ಮೇಲೆ ಆಕ್ರಮಣ ಮಾಡುತ್ತಿವೆ. ಅವರು ನಮ್ಮ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಒಪ್ಪುವುದಿಲ್ಲ ”ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಮತ್ತೊಬ್ಬ ಪ್ರತಿಭಟನಾಕಾರರು ನನಗೆ ಬೇರೆ ಕೆಲಸವಿಲ್ಲ ಆದರೂ ಚೀನಾದಿಂದ ಹೂಡಿಕೆ ಹೊಂದಿರುವ ಕಂಪನಿಗಳಲ್ಲಿ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಮೇ ತಿಂಗಳಲ್ಲಿ, ಜೊಮಾಟೊ 520 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು.

ಈ ಪ್ರತಿಭಟನೆಯ ಕುರಿತಾಗಿ ಜೊಮಾಟೊದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.


ಇದನ್ನೂ ಓದಿ: ಹಸಿವಿಗಿಂತ ಕೊರೊನಾ ವೈರಸ್‌ ಉತ್ತಮ: ಕೆಲಸಕ್ಕೆ ಮರಳಿದ ಯುಪಿ ಕಾರ್ಮಿಕರು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...