Homeಮುಖಪುಟಗಾಲ್ವಾನ್‌ನಿಂದ ವಾಪಸಾಗುತ್ತಿರುವ ಇಂಡೋ-ಚೀನಾ ಸೇನೆ

ಗಾಲ್ವಾನ್‌ನಿಂದ ವಾಪಸಾಗುತ್ತಿರುವ ಇಂಡೋ-ಚೀನಾ ಸೇನೆ

- Advertisement -
- Advertisement -

ಗಾಲ್ವಾನ್ ಕಣಿವೆಯಿಂದ ಭಾರತೀಯ ಮತ್ತು ಚೀನಾದ ಸೈನಿಕರು ಪರಸ್ಪರ ವಾಪಸ್ ತೆರಳುತ್ತಿದ್ದಾರೆ. ಆದರೆ ಇದು ಹೆಚ್ಚಾಗಿ ಗಾಲ್ವಾನ್‌ ಗಡಿ ಮಾತ್ರ ಸೀಮಿತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಬಫರ್ ವಲಯವನ್ನು ರಚಿಸಲಾಗಿದೆ ಎನ್ನಲಾಗಿದೆ. ಎಷ್ಟು ದೂರದವರೆಗೆ ವಾಪಾಸಾಗುತ್ತಾರೆ ಎಂಬುದು ನಿರ್ದಿಷ್ಟಪಡಿಸಲಾಗಿಲ್ಲ.

“ಇದು ಶಾಶ್ವತವಾದ, ನಿಜವಾದ ನಡೆಯಾಗಿದೆಯೇ ಎಂದು ತಿಳಿಯುವುದಕ್ಕೆ ಸ್ವಲ್ಪ ಕಾಲ ನಾವು ಕಾಯಬೇಕಾಗಿದೆ” ಎಂದು ಮೂಲಗಳು ತಿಳಿಸಿವೆ.

ಗಾಲ್ವಾನ್‌ನಲ್ಲಿ ಬೀಡು ಬಿಟ್ಟಿದ್ದ ಎರಡು ಕಡೆಯ ಸೈನ್ಯವನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದ್ದು, ಎರಡು ಕಡೆಯಿಂದ ಪರಿಶೀಲನೆ ನಡೆಯುತ್ತಿದೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್‌ 15ರಂದು ನಡೆದ ಘರ್ಷಣೆಯಲ್ಲಿ ಭಾರತೀಯ 20 ಸೈನಿಕರು ಸಾವನ್ನಪ್ಪಿದ್ದಾರೆ. ನಂತರ ಈ ಕುರಿತು ಕಮಾಂಡರ್‌ಗಳ ಮೂರನೇ ಸುತ್ತಿನ ಮಾತುಕತೆಗಾಗಿ ಭೇಟಿಯಾದ ಕೆಲವೇ ದಿನಗಳಲ್ಲಿ ವಾಪಸಾತಿ ಪ್ರಕ್ರಿಯೆ ಸಂಭವಿಸಿದೆ.

ಲೆಫ್ಟಿನೆಂಟ್-ಜನರಲ್-ಮಟ್ಟದ ಮಾತುಕತೆಗಳು ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕೇಂದ್ರೀಕರಿಸಿದೆ ಎನ್ನಲಾಗಿದೆ.

ಕನಿಷ್ಟ ಒಂದು ಕಿ.ಮೀ ನಷ್ಟು ಚೀನಾದ ಸೈನ್ಯ ಹಿಂದೆ ಸರಿದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ವಿಸ್ತರಣಾವಾದಿಗಳ ಕಾಲ ಮುಗಿದಿದೆ, ಇದು ಪ್ರಗತಿಯ ಯುಗ: ನರೇಂದ್ರ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...