Homeಕರೋನಾ ತಲ್ಲಣಪಡಿತರ ವಿತರಕರನ್ನೂ ’ಕೊರೊನಾ ವಾರಿಯರ್’ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ಪಡಿತರ ವಿತರಕರನ್ನೂ ’ಕೊರೊನಾ ವಾರಿಯರ್’ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ನಮಗೂ ಕುಟುಂಬವಿದೆ , ಕೊರೊನಾ ಬಿಕ್ಕಟ್ಟಿನಲ್ಲೂ ಸರ್ಕಾರಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ ಇದನ್ನು ಸರ್ಕಾರ ಪರಿಗಣಿಸಬೇಕು ಎಂದು ಪಡಿತರ ವಿತರಕರು ಹೇಳಿದ್ದಾರೆ.

- Advertisement -
- Advertisement -

ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ವಿತರಕರಿಗೆ ಭದ್ರತೆಯನ್ನು ಒದಗಿಸಿ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದೆ.

ಕೊರೊನಾ ಲಾಕ್‌ಡೌನ್‌ ಪ್ರಾರಂಭವಾಗಿದಂದಿನಿಂದ ಈವರೆಗೂ ಪಡಿತರ ಅಂಗಡಿಯವರು ತಮ್ಮ ಸೇವೆಯನ್ನು ಮಾಡುತ್ತಿದ್ದು, ಇದರಿಂದಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಡಿತರ ಅಂಗಡಿಯ ಮಾಲಕರು ಕೊರೊನಾ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ.

ಸಂಘವೂ ಮನವಿಯಲ್ಲಿ, “ಲಾಕ್‌ಡೌನ್ ಘೋಷಣೆಯಾದ ದಿನದಿಂದ ಇದುವರೆಗೂ ಸರ್ಕಾರದ ಆದೇಶದಂತೆ ಪ್ರಾಣವನ್ನು ಪಣಕ್ಕಿಟ್ಟು ಸಮರ್ಪಕವಾಗಿ ಪಡಿತರ ವಿತರಣೆ ಮಾಡಿರುತ್ತೇವೆ. ಕೊಲೋನಾ ವಾರಿಯರ್‌ನ ಒಂದು ಭಾಗವಾಗಿ ಸರ್ಕಾರಕ್ಕೆ ಸೇವೆಯನ್ನು ಮಾಡಿದ್ದೇವೆ. ಪಡಿತರ ವಿತರಣೆಯ ಸಂದರ್ಭದಲ್ಲಿ ಸೋಂಕಿತರು ಸಹ ಬಂದು ಪಡಿತರವನ್ನು ಪಡೆದಿರುತ್ತಾರೆ. ಇದರಿಂದ ಸೋಂಕು ಪಡಿತರರ ವಿತರಕರಿಗೆ ಹರಡುವ ಸಾಧ್ಯತೆಗಳಿವೆ” ಎಂದು ಹೇಳಲಾಗಿದೆವಿತರಕರ ಸಂಘದ ಮನವಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಸ್ಪಂದಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಪಡಿತರ ಅಂಗಡಿಯವರನ್ನೂ ಕೊರೊನಾ ಕೊರೊನಾ ವಾರಿಯರ್‌ ಪಟ್ಟಿಗೆ ಸೇರಿಸಿ ಅವರಿಗೂ ವಿಮೆಯನ್ನು ಒದಗಿಸಿ ಭದ್ರತೆ ವ್ಯವಸ್ಥೆ ನೀಡುವಂತೆ ವಿನಂತಿಸಿದ್ದಾರೆ.

 

ಈ ಬಗ್ಗೆ ನಾನುಗೌರಿ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಕೆ. ಕೆ. ಕೃಷ್ಣಪ್ಪ “ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದೇವೆ, ಸರ್ಕಾರ ನಮ್ಮ ಮನವಿಯನ್ನು ಮನ್ನಿಸುತ್ತದೆ ಎಂದು ಭಾವಿಸುತ್ತೇವೆ. ಅವರ ತೀರ್ಮಾನ ನಂತರ ನಮ್ಮ ಮುಂದಿನ ನಡೆ ಇರುತ್ತದೆ.” ಎಂದು ಹೇಳಿದ್ದಾರೆ.

ಈ ಹಿಂದೆ ಪಡಿತರ ಚೀಟಿ ಇಟ್ಟುಕೊಂಡು ಪಡಿತರ ಕೊಡುತ್ತಿದ್ದರಾದರೂ ಈಗ ಯಾವುದೇ ಗುರುತಿನ ಚೀಟಿ ಇಲ್ಲದೆ ಪಡಿತರ ಕೊಡಬೇಕಾಗುತ್ತದೆ. ಈ ಸಮಯದಲ್ಲಿ ಗ್ರಾಹಕರು ಕೆಲವೊಮ್ಮೆ ಕಂಟೈನ್‌ಮೆಂಟ್ ಪ್ರದೇಶದಿಂದ ಕೂಡಾ ಬಂದಿರುತ್ತಾರೆ. ಇದು ಪಡಿತರ ಅಂಗಡಿಯವರಿಗೆ ಸಮಸ್ಯೆ ತಂದೊಡ್ಡುತ್ತದೆ ಎಂದು ಪಡಿತರ ಅಂಗಡಿ ಮಾಲಿಕರು ಅಲವತ್ತುಕೊಂಡಿದ್ದಾರೆ.

ಪಡಿತರ ಅಂಗಡಿಯ ಮಾಲಕರಾದ ಹೇಮಂತ್ ಕುಮಾರ್‌ “ನಮಗೂ ಕುಟುಂಬಗಳಿವೆ, ಈ ಸಂದಿಗ್ಧ ಸಮಯದಲ್ಲಿ ಕೂಡಾ ನಾವು ನಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಸರ್ಕಾರ ನಮ್ಮ ಸೇವೆಯನ್ನೂ ಪರಿಗಣಿಸಿ, ನಮಗೂ ಕೊರೊನಾ ವಾರಿಯರ್ಸ್ ವಿಮೆ ಹಾಗೂ ಭದ್ರತೆಯನ್ನ ನೀಡಬೇಕು” ಎಂದು ನಾನುಗೌರಿ.ಕಾಮ್‌ಗೆ ಪ್ರತಿಕ್ರಿಯಿಸಿದ್ದಾರೆ.


ಓದಿ: ಕೊರೊನಾ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರ್ಕಾರಕ್ಕೆ ಸೋಂಕು ಪರೀಕ್ಷೆ ನಡೆಸಲು ಗೊತ್ತಿಲ್ಲ: ಸಿದ್ದರಾಮಯ್ಯ ಕಿಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...