ಪಶ್ಚಿಮ ಬಂಗಾಳದ ವಿಧಾನ ಸಭಾ ಕ್ಷೇತ್ರ ಹೆಮತಾಬಾದ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದೇಬೇಂದ್ರ ನಾಥ್ ರಾಯ್ ಅವರು ಉತ್ತರ ದಿನಾಜ್‌ಪುರ್ ಜಿಲ್ಲೆಯಲ್ಲಿರುವ ತಮ್ಮ ನಿವಾಸದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಕೊಲೆಯ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
“ಅವರನ್ನು ಕೊಲೆ ಮಾಡಲಾಗಿದ್ದು, ನಂತರ ನೇಣು ಬಿಗಿಯಲಾಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿರುವುದ್ದಾರೆ” ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಆರೋಪಿಸಿದೆ.
ಪಶ್ಚಿಮ ಬಂಗಾಳದ ಗವರ್ನರ್, ರಾಜಕೀಯ ಹಿಂಸಾಚಾರ ತಗ್ಗಿಸಲು ಮಮತಾ ಬ್ಯಾನರ್ಜಿ ಯಾವುದೆ ಕ್ರಮಕೈಗೊಳ್ಳುತ್ತಿಲ್ಲ, ಇದನ್ನು ನಿಷ್ಪಕ್ಷವಾಗಿ ತನಿಖೆ ನಡೆಸಿ ಎಂದು ಟ್ವೀಟ್ ಮಾಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
Death of Debendra Nath Roy, Hemtabad MLA-Uttar Dinajpur District, raises serious issues including allegations of murder. Need for a thorough impartial probe to unravel the truth and blunt political violence, tweets West Bengal Governor Jagdeep Dhankhar pic.twitter.com/Pgj6jHpMuE
— ANI (@ANI) July 13, 2020
ಇದನ್ನೂ ಓದಿ: ಜೈಲಿನಲ್ಲಿ ಕವಿ ವರವರ ರಾವ್‌ರನ್ನು ಕೊಲ್ಲಬೇಡಿ! ಕುಟುಂಬ ಸದಸ್ಯರ ಮನವಿ


