ಕೊರೊನಾ ಸೋಂಕಿಗೆ ಲಸಿಕೆ ನೀಡಲು ಮಾನವ ಸ್ವಯಂಸೇವಕರನ್ನು ಒಳಗೊಂಡ ಕ್ಲಿನಿಕಲ್ ಅಧ್ಯಯನವು ಪ್ರಸ್ತುತ ಭಾರತದಲ್ಲಿ ನಡೆಯುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಮಂಗಳವಾರ ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ನಡೆಸಿದ ಯಶಸ್ವಿ ಅಧ್ಯಯನಗಳ ನಂತರ ಎರಡು ಲಸಿಕೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
“ಎರಡು ಭಾರತೀಯ ಲಸಿಕೆಗಳಿವೆ. ಅವುಗಳನ್ನು ಇಲಿಗಳು ಮತ್ತು ಮೊಲಗಳ ಮೇಲೆ ಅದನ್ನು ಯಶಸ್ವಿ ಅಧ್ಯಯನಕ್ಕೆ ಒಳಪಡಿದ್ದಾರೆ. ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಡೇಟಾವನ್ನು ಸಲ್ಲಿಸಲಾಗಿದೆ, ಈ ತಿಂಗಳ ಆರಂಭದಲ್ಲಿ ಆರಂಭಿಕ ಹಂತದ ಮಾನವ ಪ್ರಯೋಗಗಳನ್ನು ಪ್ರಾರಂಭಿಸಲು ಇವೆರಡೂ ಅನುಮತಿ ಪಡೆದಿವೆ ” ಎಂದು ಭಾರ್ಗವ ದೇಶದ ಕೊರೊನಾ ಪರಿಸ್ಥಿತಿ ಕುರಿತು ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
“ಈ ಲಸಿಕೆಗಳನ್ನು ಸುಮಾರು 1,000 ಮಾನವ ಸ್ವಯಂಸೇವಕರ ಮೇಲೆ ವಿವಿಧ ಸೈಟ್‌ಗಳಲ್ಲಿ ತಮ್ಮ ಕ್ಲಿನಿಕಲ್ ಅಧ್ಯಯನವನ್ನು ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.
ಅಮೆರಿಕಾ, ಯುಕೆ ಮತ್ತು ರಷ್ಯಾದಂತಹ ದೇಶಗಳು ಸಹ ತಮ್ಮ ಲಸಿಕೆಗಳನ್ನು ವೇಗವಾಗಿ ಪತ್ತೆ ಹಚ್ಚಿವೆ ಎಂದು ಐಸಿಎಂಆರ್ ಮುಖ್ಯಸ್ಥರು ತಿಳಿಸಿದ್ದಾರೆ.
“ರಷ್ಯಾ ಲಸಿಕೆಯನ್ನು ವೇಗವಾಗಿ ಪತ್ತೆಹಚ್ಚಿದೆ, ಅದು ಅದರ ಆರಂಭಿಕ ಹಂತಗಳಲ್ಲಿ ಯಶಸ್ವಿಯಾಗಿದೆ. ಅಮೆರಿಕಾ ಕೂಡಾ ಇಂದು ನೀವು ಓದಿದಂತೆ ಎರಡು ಲಸಿಕೆಗಳನ್ನು ವೇಗವಾಗಿ ಪತ್ತೆ ಮಾಡಿದೆ. ಯುಕೆ ಕೂಡಾ ಲಸಿಕೆಗಳನ್ನು ಹೇಗೆ ವೇಗವಾಗಿ ಪತ್ತೆಹಚ್ಚಹುದು ಹಾಗೂ ಅದನ್ನು ಮಾನವ ಬಳಕೆಗಾಗಿ ಹೇಗೆ ವೇಗವಾಗಿ ಮಾಡಬಹುದು ಎಂಬುದನ್ನು ಎದುರು ನೋಡುತ್ತಿದೆ,” ಎಂದು ಅವರು ಹೇಳಿದರು.
ಮೂರು ತಿಂಗಳ ಕ್ಲಿನಿಕಲ್ ಪ್ರಯೋಗಗಳನ್ನು ಐದು ವಾರಗಳಲ್ಲಿ ಸಂಕುಚಿತಗೊಳಿಸಿ ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಹೇಳಿ ಐಸಿಎಂಆರ್ ಈ ತಿಂಗಳ ಆರಂಭದಲ್ಲಿ ವಿವಾದಕ್ಕೆ ಒಳಗಾಗಿತ್ತು.
ಓದಿ: ತ್ವರಿತ ಲಸಿಕೆ ಹೆಸರಿನಲ್ಲಿ ನಮ್ಮ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ICMR!


