ಬ್ರಿಟನ್ ಮತ್ತು ಚೀನಾದ ಸಂಶೋಧಕರು ಸೋಮವಾರ ಕೊರೊನಾ ವಿರುದ್ಧದ ತಮ್ಮ ಎರಡು ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಈ ಲಸಿಕಗಳು ಸುರಕ್ಷಿತ ಮತ್ತು ಪ್ರತಿರಕ್ಷಣಾ(ಇಮ್ಯೂನಿಟಿ) ಪ್ರಕ್ರಿಯೆಯನ್ನು ಉಂಟುಮಾಡಲು ಸಮರ್ಥವಾಗಿಯೆ ಎಂದು ಕಂಡುಕೊಳ್ಳಲು ಇದರ ಮೂರನೆ ಹಂತದ ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಎರಡೂ ಲಸಿಕೆಗಳ ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಉತ್ತೇಜನಕಾರಿಯಾಗಿದ್ದರೂ, ತಮ್ಮ ಲಸಿಕೆಯು ಕೊರೊನಾ ವೈರಸ್‌ಗೆ ಕಾರಣವಾಗುವ ಸೂಕ್ಷ್ಮಜೀವಿ SARS-CoV-2 ನಿಂದ ಜನರನ್ನು ರಕ್ಷಿಸುತ್ತದೆಯೇ ಎಂದು ನಿರ್ಧರಿಸಲು ಹೆಚ್ಚಿನ ಸಂಶೋಧನೆಗಳು ಅಗತ್ಯವೆಂದು ಎಚ್ಚರಿಸಿದ್ದಾರೆ.
1,077 ಆರೋಗ್ಯವಂತ ವಯಸ್ಕ ಸ್ವಯಂಸೇವಕರ ಮೇಲೆ ನಡೆಸಿದ ಬ್ರಿಟೀಷ್ ಪ್ರಯೋಗವು ಲಸಿಕೆ ಸುರಕ್ಷಿತವಾಗಿದೆ ಎಂದು ಕಂಡುಕೊಂಡಿದೆ. ಪ್ಯಾರಸಿಟೊಮೊಲ್ ಮೂಲಕ ಚಿಕಿತ್ಸೆ ನೀಡಬಹುದಾದ ಕೆಲವು ಅಡ್ಡಪರಿಣಾಮಗಲು ಮತ್ತು ಪ್ರಯೋಗದ 56 ನೇ ದಿನದವರೆಗೆ ಆಂಟಿಬಾಡಿ ಮತ್ತು ಟಿ-ಸೆಲ್ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವ್ಯಾಕ್ಸಿನೇಷನ್ ಮಾಡಿದ 14 ದಿನಗಳಲ್ಲಿ ವೈರಸ್ ಸೋಂಕಿತ ಕೋಶಗಳನ್ನು ಕಂಡುಹಿಡಿಯಲು ಮತ್ತು ಆಕ್ರಮಣ ಮಾಡಲು ಲಸಿಕೆಯು ಟಿ-ಸೆಲ್ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಿದೆ. ರಕ್ತ ಅಥವಾ ದುಗ್ಧರಸದಲ್ಲಿ ಹರಡುವ ವೈರಸ್ ಅನ್ನು 28 ದಿನಗಳ ಒಳಗೆ ಕಂಡುಹಿಡಿದು ಆಕ್ರಮಣ ಮಾಡುವ ಪ್ರತಿಕಾಯ(ಆಂಟಿಬಾಡಿ) ಪ್ರತಿಕ್ರಿಯೆಯೆ ವ್ಯಾಕ್ಸಿನೇಷನ್ ಅಗಿದೆ ಎಂದಿದ್ದಾರೆ.
“ಪ್ರತಿರಕ್ಷಣಾ(ಇಮ್ಯೂನಿಟಿ) ವ್ಯವಸ್ಥೆಯು ರೋಗಕಾರಕಗಳನ್ನು ಕಂಡುಹಿಡಿಯುವ ಮತ್ತು ಆಕ್ರಮಣ ಮಾಡುವ ಆಂಟಿಬಾಡಿ ಮತ್ತು ಟಿ-ಸೆಲ್ ಪ್ರತಿಕ್ರಿಯೆಗಳು ಎಂಬ ಎರಡು ಮಾರ್ಗಗಳನ್ನು ಹೊಂದಿದೆ” ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪ್ರಯೋಗ ಅಧ್ಯಯನದ ಪ್ರಮುಖ ಲೇಖಕ ಆಂಡ್ರ್ಯೂ ಪೊಲಾರ್ಡ್ ಹೇಳಿದ್ದಾರೆ.
“ಈ ಲಸಿಕೆ ಎರಡನ್ನೂ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ” ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೀನಾದ ಪ್ರಯೋಗವು ಲಸಿಕೆ ಸೌಮ್ಯ ಅಡ್ಡಪರಿಣಾಮಗಳನ್ನು ಮಾತ್ರ ಉಂಟುಮಾಡಿದೆ. ಒಂದೇ ಡೋಸ್ ರೋಗ ನಿರೋಧಕತೆಯು ಸ್ವೀಕರಿಸಿದ 28 ದಿನಗಳಲ್ಲಿ ಗಮನಾರ್ಹವಾದ ಪ್ರತಿಕಾಯ(ಆಂಟಿಬಾಡಿ) ಮತ್ತು ಟಿ-ಸೆಲ್ ಪ್ರತಿಕ್ರಿಯೆಗಳನ್ನು ಉಂಟುಮಾಡಲು ಸಾಧ್ಯವಾಯಿತು ಎಂದು ಚೀನಾದ ಸಂಶೋಧಕರು ಹೇಳಿದ್ದಾರೆ.
ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿಯ ವೀ ಚೆನ್ ಮತ್ತು ಅವರ ಸಹೋದ್ಯೋಗಿಗಳು ತಮ್ಮ ಲಸಿಕೆಯ ಪರಿಣಾಮಕಾರಿತ್ವವನ್ನು ಮತ್ತಷ್ಟು ಮೌಲ್ಯಮಾಪನ ಮಾಡಲು ಅಂತರರಾಷ್ಟ್ರೀಯ, ಮಲ್ಟಿಸೆಂಟರ್, ಡಬಲ್-ಬ್ಲೈಂಡ್, ನಿಯಂತ್ರಿತ ಮೂರನೇ ಹಂತದ ಪ್ರಯೋಗವನ್ನು ಯೋಜಿಸಿದ್ದಾರೆ ಎಂದು ಹೇಳಿದರು.
ಎರಡೂ ಸಂಶೋಧನಾ ಗುಂಪುಗಳು ತಮ್ಮ ಸಂಶೋಧನೆಗಳನ್ನು ದಿ ಲ್ಯಾನ್ಸೆಟ್ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಸೋಮವಾರ ಪ್ರಕಟಿಸಿವೆ.
“ಈ ಪ್ರಯೋಗ ಫಲಿತಾಂಶಗಳು ಭಾರಿ ನಿರೀಕ್ಷೆ ಹುಟ್ಟಿಸಿದೆ” ಎಂದು ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಹಾಯಕ ಪ್ರಾಧ್ಯಾಪಕ ನೌರ್ ಬಾರ್- ಝೀವ್ ಹೇಳಿದರು.
“ಮೂರನೇ ಹಂತದ ಪ್ರಯೋಗದ ಫಲಿತಾಂಶ ಬಹಳ ಪ್ರಾಮುಖ್ಯತೆ ಹೊಂದಿದೆ, ಯಾಕೆಂದರೆ ಅಲ್ಲಿ ಈ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ನಿರ್ಣಯಿಸಲು ಹೆಚ್ಚಿನ ಜನಸಂಖ್ಯೆಯ ಮೇಲೆ ಪರೀಕ್ಷಿಸಲಾಗುತ್ತದೆ.”
“ಒಟ್ಟಾರೆಯಾಗಿ, ಎರಡೂ ಲಸಿಕೆಗಳು ಭರವಸೆ ಮೂಡಿಸುತ್ತಿದೆ. ಅದರ ಮೂರನೇ ಹಂತದ ಪ್ರಯೋಗಗಳ ಫಲಿತಾಂಶಗಳನ್ನು ಬಹಳ ಉತ್ಸಾಹದಿಂದ ವೀಕ್ಷಿಸಲಾಗುವುದು” ಎಂದು ಹಿರಿಯ ವೈರಾಲಜಿಸ್ಟ್ ಮತ್ತು ಯುಕೆ-ಭಾರತ ಸರ್ಕಾರದ ಸಹಭಾಗಿತ್ವದ ವೆಲ್ಕಂ ಟ್ರಸ್ಟ್-ಡಿಬಿಟಿ ಇಂಡಿಯಾ ಅಲೈಯನ್ಸ್ ಮುಖ್ಯಸ್ಥ ಶಾಹಿದ್ ಜಮೀಲ್ ಹೇಳಿದ್ದಾರೆ.
ಓದಿ:ಕೊರೊನಾಗೆ ಲಸಿಕೆ ಸಿದ್ಧ: ಕ್ಲಿನಿಕಲ್ ಪ್ರಯೋಗಕ್ಕೆ ಬನ್ನಿ ಎಂದ ದೆಹಲಿಯ ಏಮ್ಸ್!


