Homeಮುಖಪುಟಪಂಜಾಬಿಗಳು ಮತ್ತು ಜಾಟ್‌ಗಳು ದೈಹಿಕವಾಗಿ ಶಕ್ತರು; ಆದರೆ ಅವರಿಗೆ ಮಿದುಳಿಲ್ಲ: ತ್ರಿಪುರ ಸಿಎಂ ಬಿಪ್ಲಬ್ ದೇಬ್...

ಪಂಜಾಬಿಗಳು ಮತ್ತು ಜಾಟ್‌ಗಳು ದೈಹಿಕವಾಗಿ ಶಕ್ತರು; ಆದರೆ ಅವರಿಗೆ ಮಿದುಳಿಲ್ಲ: ತ್ರಿಪುರ ಸಿಎಂ ಬಿಪ್ಲಬ್ ದೇಬ್ ವಿವಾದ

ಖಟ್ಟರ್‌ಜಿ ಮತ್ತು ದುಶ್ಯಂತ್ ಚೌತಲಾ ಏಕೆ ಸುಮ್ಮನಿದ್ದೀರಿ? ಮೋದಿ ಜಿ ಮತ್ತು ನಾಡ್ಡಜಿ ಎಲ್ಲಿದ್ದೀರಿ? ಕ್ಷಮೆಯಾಚಿಸಿ, ಕ್ರಮ ತೆಗೆದುಕೊಳ್ಳಿ ಎಂದು ರಣದೀಪ್‌ ಸಿಂಗ್ ಆಗ್ರಹಿಸಿದ್ದಾರೆ.

- Advertisement -
- Advertisement -

“ಎಲ್ಲರಿಗೂ ಗೊತ್ತಿರುವಂತೆ ಬಂಗಾಳಿಗಳು ಅತಿ ಬುದ್ಧಿವಂತರು. ಪಂಜಾಬಿಗಳು ಮತ್ತು ಜಾಟ್‌ಗಳು ಕೇವಲ ದೈಹಿಕವಾಗಿ ಮಾತ್ರ ಶಕ್ತರು, ಅವರಿಗೆ ಮಿದುಳಿಲ್ಲ” ಎಂದು ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾನುವಾರ ಅಗರ್ತಲಾದ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿನ ಪ್ರತಿಯೊಂದು ಸಮುದಾಯವೂ ಸಹ ತನ್ನದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಹೇಳಿಕೆಯಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ಬುದ್ಧಿವಂತಿಕೆಯ ವಿಚಾರದಲ್ಲಿ ಬಂಗಾಳಿಗಳಿಗೆ ಯಾರೂ ಸಾಟಿಯಾಗಲಾರರು. ಎಲ್ಲರಿಗೂ ತಿಳಿದಿರುವಂತೆ ಬಂಗಾಳಿಗಳು ಅತೀ ಬುದ್ಧಿವಂತರು. ಇದೇ ಅವರ ಗುರುತಾಗಿದೆ, ಆದರೆ ಪಂಜಾಬಿಗಳು ಮತ್ತು ಜಾಟ್‌ಗಳು ದೈಹಿಕವಾಗಿ ಸಮರ್ಥರು’ ಎಂದು ವೀಡಿಯೋದಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಮಾತನಾಡುವಾಗ ಪಂಜಾಬ್‌ ಜನರನ್ನು ಪಂಜಾಬಿ, ಸರ್ದಾರ್ ಎಂದು ಹೇಳುತ್ತೇವೆ. ಅವರನ್ನು ದೈಹಿಕ ಸಾಮರ್ಥ್ಯದಿಂದ ಯಾರೊಬ್ಬರೂ ಗೆಲ್ಲಲಾಗುವುದಿಲ್ಲ. ಆದರೆ ಅವರು ಬುದ್ಧಿಹೀನರು. ಹರಿಯಾಣದಲ್ಲಿ ಜಾಟ್‌ಗಳು ಹೆಚ್ಚಾಗಿದ್ದಾರೆ. ಅಲ್ಲಿನ ಜನರು ಅವರ ಕುರಿತು ‘ಇವರು ದೈಹಿಕವಾಗಿ ಆರೋಗ್ಯವಂತರು. ಆದರೆ ಬುದ್ಧಿಹೀನರು’ ಎನ್ನುತ್ತಾರೆ. ಯಾರಾದರೂ ಜಾಟ್‌ರನ್ನು ಎದುರಿಸಬೇಕಾದರೆ ಅವರ ಮನೆಯಿಂದ ಗನ್ ತರಬೇಕಾಗುತ್ತದೆ ಎಂದು ಬಿಪ್ಲಬ್ ಹೇಳಿದ್ದಾರೆ.

ಬಿಪ್ಲಬ್‌ ದೇಬ್‌ರವರ ಈ ವಿವಾದಾತ್ಮಕ ಹೇಳಿಕೆಗೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ಖಂಡಿಸಿ, ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಈ ಹೇಳಿಕೆ ನಾಚಿಕೆ ಮತ್ತು ದುರದೃಷ್ಟಕರವಾಗಿದೆ. ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರು ಪಂಜಾಬ್‌ನ ಸಿಖ್ ಸಹೋದರರನ್ನು ಮತ್ತು ಹರಿಯಾಣದ ಜಾಟ್ ಸಮುದಾಯವನ್ನು ಅವಮಾನಿಸಿ, ಅವರನ್ನು ಬುದ್ದಿ ಇಲ್ಲದವರು ಎಂದು ಕರೆದಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯಾಗಿದೆ.

ಖಟ್ಟರ್‌ಜಿ ಮತ್ತು ದುಶ್ಯಂತ್ ಚೌತಲಾ ಏಕೆ ಸುಮ್ಮನಿದ್ದೀರಿ?
ಮೋದಿ ಜಿ ಮತ್ತು ನಾಡ್ಡಜಿ ಎಲ್ಲಿದ್ದೀರಿ?
ಕ್ಷಮೆಯಾಚಿಸಿ, ಕ್ರಮ ತೆಗೆದುಕೊಳ್ಳಿ ಎಂದು ರಣದೀಪ್‌ ಸಿಂಗ್ ಆಗ್ರಹಿಸಿದ್ದಾರೆ.

ಬಿಪ್ಲಬ್ ಕುಮಾರ್ ಈ ಹಿಂದೆಯೂ ‘ಮಹಾಭಾರತ ಕಾಲದಲ್ಲಿ ಉಪಗ್ರಹ ಮತ್ತು  ದೂರದರ್ಶನವಿತ್ತು ಎಂದು ಹೇಳಿಕೆ ನೀಡಿ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದರು.


ಇದನ್ನೂ ಓದಿ: ಕೊರೊನಾದಿಂದ ಒಂದೂ ಸಾವು ಕಾಣದ ಭಾರತದ ಅದೃಷ್ಠಶಾಲಿ ರಾಜ್ಯಗಳಿವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...