ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್, ಮತ್ತೊಬ್ಬ ಅಪರಾಧಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವಿಚಾರಣೆ ನಡೆಸುವಾಗ, ಕಳೆದ ರಾತ್ರಿ ಜೈಲಿನಲ್ಲಿ ತಾನೇ ಅತ್ಮಹತ್ಯೆ ಬೆದರಿಕೆ ಹಾಕಿದ್ದಾಳೆ ಎಂದು ತಮಿಳುನಾಡಿನ ಉನ್ನತ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
“ಇದು ಬ್ಲ್ಯಾಕ್ ಮೇಲ್ ಅಥವಾ ಬೆದರಿಕೆಯಂತೆಯೇ ಇತ್ತು. ಅವರು ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ” ಎಂದು ತಮಿಳುನಾಡು ಕಾರಾಗೃಹ ವಿಭಾಗದ ಮುಖ್ಯಸ್ಥ ಸುನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವೆಲ್ಲೂರು ಮಹಿಳಾ ಜೈಲಿನಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ನಳಿನಿ ಸುಮಾರು ಮೂರು ದಶಕಗಳಿಂದ ಜೈಲಿನಲ್ಲಿದ್ದಾರೆ.
ಜೈಲು ಕಿರುಕುಳ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ ತನ್ನನ್ನು ಕೊಲ್ಲುವುದಾಗಿ ನಳಿನಿ ಬೆದರಿಕೆ ಹಾಕಿದ್ದಾಳೆ ಎಂದು ಇನ್ನೊಬ್ಬ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಹೇಳಿದ್ದಾಳೆ.
ಮಹಿಳೆಯನ್ನು ಸ್ಥಳಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಳಿನಿ ಬೆದರಿಕೆ ಹಾಕಿದ್ದಾಳೆ” ಎಂದು ಸಿಂಗ್ ಹೇಳಿದ್ದಾರೆ .
ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ನಳಿನಿ ಪರ ವಕೀಲರು, ನಳಿನಿಯನ್ನು ಮತ್ತೊಂದು ಜೈಲಿಗೆ ವರ್ಗಾಯಿಸಲು ವ್ಯವಸ್ಥೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು.
“ರಾತ್ರಿ 8:30 ಕ್ಕೆ ಜೈಲರ್ ನಳಿನಿಯ ವಿಭಾಗಕ್ಕೆ ಹೋಗಿ ದೂರಿನ ಬಗ್ಗೆ ವಿಚಾರಿಸಿದರು. ವಿಚಾರಣೆಯ ವೇಳೆ ಜೈಲರ್ ಮತ್ತು ನಳಿನಿ ನಡುವೆ ಜಗಳ ನಡೆಯಿತು. ಅವಳು ಅಸಮಾಧಾನಗೊಂಡು ಆತ್ಮಹತ್ಯೆಗೆ ಯತ್ನಿಸಿದಳು” ಎಂದು ಪುಗಲೆಂತಿ ಎಎನ್‌ಐಗೆ ತಿಳಿಸಿದ್ದಾರೆ.
“ಇದು ಅಧಿಕಾರಿಗಳ ದೃಷ್ಟಿಕೋನ. ನಾವು ಇದನ್ನು ನಂಬುವುದಿಲ್ಲ. ಅವರು ಕಳೆದ 30 ವರ್ಷಗಳ ಜೈಲುವಾಸ ಅನುಭವಿಸಿದ್ದಾರೆ. ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಎಂದಿಗೂ ಪ್ರಯತ್ನಿಸಲಿಲ್ಲ. ಜೈಲಿನ ಅಧಿಕಾರಿಗಳು ಅವಳನ್ನು ಹಿಂಸಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ವಕೀಲರು ವಿಚಾರಣೆಗೆ ಒತ್ತಾಯಿಸಿದ್ದಾರೆ.
ನಳಿನಿ ಅವರ ಪ್ರಾಣಕ್ಕೆ ಅಪಾಯವಿದೆ ಎಂದಿರುವ ವಕೀಲರು, ಜೈಲಿನ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಇ ಪಳನಿಸಾಮಿ ಅವರ ಬಳಿ ಚೆನ್ನೈನ ಜೈಲಿಗೆ ವರ್ಗಾಯಿಸುವಂತೆ ಕೋರಿದ್ದಾರೆ.
1991 ರಲ್ಲಿ ರಾಜೀವ್ ಗಾಂಧಿ ಅವರನ್ನು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‌ಟಿಟಿಇ) ಯ ಆತ್ಮಾಹುತಿ ಬಾಂಬರ್ ಹತ್ಯೆಗೈದ ಪ್ರಕರಣದಲ್ಲಿ ನಳಿನಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.
ಆದರೆ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರ ಮನವಿಯ ಮೇಲೆ ಶಿಕ್ಷೆಯನ್ನು ಜೀವಾವಧಿ ಅವಧಿಗೆ ಇಳಿಸಲಾಯಿತು. ವರ್ಷಗಳ ನಂತರ, ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಇನ್ನೂ ಆರು ಆರೋಪಿಗಳ ಶಿಕ್ಷೆಯನ್ನು ರದ್ದುಗೊಳಿಸಿತು.
ಕಳೆದ ವರ್ಷ ನಳಿನಿಗೆ ಅವರ ಮಗಳು ಹರಿತ್ರಾಳ ಮದುವೆಗೆ ಒಂದು ತಿಂಗಳು ಪೆರೋಲ್ ನೀಡಲಾಗಿತ್ತು. ಮಗಳು ಯುಕೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ.
ಇತ್ತೀಚೆಗೆ, ಯುಕೆ ಮತ್ತು ಶ್ರೀಲಂಕಾದಲ್ಲಿರುವ ತನ್ನ ಕುಟುಂಬಕ್ಕೆ ವಾಟ್ಸಾಪ್ ಕರೆ ಮಾಡಲು ಅವಕಾಶ ನೀಡುವಂತೆ ನಳಿನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಅಪರಾಧಿಗಳಿಗೆ ವಿದೇಶಿ ಕರೆಗಳನ್ನು ಅನುಮತಿಸಲಾಗುವುದಿಲ್ಲ. ಇದನ್ನು ಕೇಂದ್ರ ಮಾತ್ರ ನಿರ್ಧರಿಸಬಹುದು ಎಂದು ಜೈಲಿನ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ದೇಶಭಕ್ತನ ಮಗನಾಗಿರುವುದಕ್ಕೆ ಹೆಮ್ಮೆಯಿದೆ; ರಾಜೀವ್ ಗಾಂಧಿ ಪುಣ್ಯಸ್ಮರಣೆ ಮಾಡಿದ ರಾಹುಲ್


