ಕೊರೊನಾ ಸೋಂಕಿತರ ಪ್ರಮಾಣವನ್ನು ಶೇಕಡಾ 5 ಕ್ಕೆ ಇಳಿಸುವುದು ಮತ್ತು ಸೋಂಕು ಪರೀಕ್ಷಾ ಮಟ್ಟವನ್ನು ಕಾಯ್ದುಕೊಳ್ಳುವುದು ಸರ್ಕಾರದ “ಅಂತಿಮ ಗುರಿ” ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಅಂಕಿಗಳನ್ನು ಹೊಂದಿವೆ ಎಂದು ಅದು ಹೇಳಿದೆ.
ಪರೀಕ್ಷಿಸಿದವರಲ್ಲಿ ಶೇಕಡಾವಾರು ಸೋಂಕಿಗೆ ಒಳಗಾದವರ ರಾಷ್ಟ್ರೀಯ ಸಕಾರಾತ್ಮಕ ದರವು ಮಂಗಳವಾರ ಬೆಳಿಗ್ಗೆ ಶೇಕಡಾ 11.14 ರಷ್ಟಿತ್ತು. ಇದು ವಾರದ ಹಿಂದೆ ಶೇ 10 ಇತ್ತ. ಎರಡು ವಾರಗಳ ಹಿಂದೆ ಶೇ 9.7 ಮತ್ತು ನಾಲ್ಕು ವಾರಗಳ ಹಿಂದಿನ ಪ್ರಮಾಣ ಶೇಕಡಾ 8 ಇತ್ತು. ಏಪ್ರಿಲ್ 23 ರಿಂದ ಒಟ್ಟಾರೆ ಸರಾಸರಿ ಶೇಕಡ 8 ಇದೆ ಎಂದು ಸಚಿವಾಲಯ ತಿಳಿಸಿದೆ.
ಮಂಗಳವಾರ ಬೆಳಿಗ್ಗೆಯ ವೇಳೆಗೆ ಕಳೆದ 24 ಗಂಟೆಗಳಲ್ಲಿ 3.34 ಲಕ್ಷ ಕೊರೊನಾವೈರಸ್ ಪರೀಕ್ಷೆಗಳನ್ನು ನಡೆಸಲಾಯಿತು. ಇದು ವಾರದ ಹಿಂದೆ 2.87, ಎರಡು ವಾರಗಳ ಹಿಂದೆ 2.41 ಮತ್ತು ನಾಲ್ಕು ವಾರಗಳ ಹಿಂದೆ 1.87 ಇತ್ತು ಎಂದು ಹೇಳಿದೆ.
ಪರೀಕ್ಷೆಯ ಮಟ್ಟ ಹೆಚ್ಚಿದ್ದರಿಂದ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 37,148 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಮಂಗಳವಾರ ಬೆಳಿಗ್ಗೆ ಸರ್ಕಾರ ಹೇಳಿದೆ; ಅದಕ್ಕೂ ಮೊದಲು 24 ಗಂಟೆಗಳಲ್ಲಿ 40,000 ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದೆ.
ಭಾರತದಲ್ಲಿ ಇದುವರೆಗೆ 11.55 ಲಕ್ಷ ಕೊರೊನಾ ಪ್ರಕರಣಗಳಿದ್ದು, 28,084 ಸಾವುಗಳು ಸಂಭವಿಸಿವೆ. ಭಾರತವು ಏಳು ಲಕ್ಷ ಗಡಿ ದಾಟಿದ ಜುಲೈ 6 ರಿಂದ ಒಟ್ಟು ಪ್ರಕರಣಗಳ ಸಂಖ್ಯೆ 4.5 ಲಕ್ಷಕ್ಕೂ ಹೆಚ್ಚಾಗಿದೆ.
“ದೇಶವು ಕೊರೊನಾ ಬಿಕ್ಕಟ್ಟನ್ನು ತುಲನಾತ್ಮಕವಾಗಿ, ಚೆನ್ನಾಗಿ ನಿಭಾಯಿಸಿದೆ. ಕೇಂದ್ರವು ರಾಜ್ಯಗಳನ್ನು ಬೆಂಬಲಿಸುತ್ತಿದೆ. ಕೇಂದ್ರ ತಂಡಗಳು ರಾಜ್ಯಗಳಿಗೆ ಸಲಹೆ ನೀಡುತ್ತಿವೆ ಮತ್ತು ಅವರ ಪ್ರಯತ್ನಗಳನ್ನು ಬೆಂಬಲಿಸಲು ಅವರನ್ನು ಭೇಟಿ ಮಾಡುತ್ತಿವೆ” ಎಂದು ಸರ್ಕಾರ ಇಂದು ಹೇಳಿದೆ.
“ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ನಾವು ಸಾವಿನ ಪ್ರಮಾಣವನ್ನು ಶೇಕಡಾ 2.43 ಕ್ಕೆ ತಂದಿದ್ದೇವೆ” ಎಂದು ಸರ್ಕಾರ ಹೇಳಿದೆ. ಈ ಹಿರಿಮೆಯು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತಲುಪುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಮರಣ ಪ್ರಮಾಣ – ಅಥವಾ ಒಟ್ಟು ಪ್ರಕರಣಗಳಲ್ಲಿ ಶೇಕಡಾವಾರು ಸಾವಿನ ಸಂಖ್ಯೆ ಭಾರತದಲ್ಲಿ ವಿಶ್ವಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ ನಾಲ್ಕು ವಾರಗಳಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ಕಡಿಮೆಯಾಗಿದೆ; ಎರಡು ವಾರಗಳ ಹಿಂದೆ ಅದು ಶೇಕಡಾ 2.8 ಕ್ಕೆ ಇಳಿಯುವ ಮೊದಲು ಅದು ಶೇಕಡಾ 3.2 ರಷ್ಟಿತ್ತು. ಕಳೆದ ವಾರ ಅದು ಶೇಕಡಾ 2.6 ರಷ್ಟಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ: ಹಳ್ಳಿಗೆ ಬಿಟ್ಟುಕೊಳ್ಳದ ಗ್ರಾಮಸ್ಥರು: ಮರದ ಕೆಳಗೆ ವಾಸಿಸುತ್ತಿರುವ ಕೊರೊನಾ ಸೋಂಕಿತೆ!


