ಕಳೆದ ವಾರ ಪಾಕಿಸ್ತಾನದಲ್ಲಿ ಬುದ್ಧನ ಪ್ರತಿಮೆಯನ್ನು ನಾಶಪಡಿಸಲಾಗಿದೆ ಎಂಬ ವರದಿಗಳ ಬಗ್ಗೆ ಭಾರತ ಗುರುವಾರ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಅಲ್ಪಸಂಖ್ಯಾತ ಗುಂಪುಗಳನ್ನು ಮತ್ತು ಸಾಂಸ್ಕೃತಿಕ ತಾಣಗಳನ್ನು ರಕ್ಷಿಸಲು ಪಾಕಿಸ್ತಾನವನ್ನು ಕೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮರ್ದಾನ್ ಜಿಲ್ಲೆಯಲ್ಲಿ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಂದ ಬುದ್ಧನ ಅಪರೂಪದ ಪ್ರತಿಮೆಯು “ಇಸ್ಲಾಮಿಕ್” ಅಲ್ಲ ಎಂಬ ಕಾರಣಕ್ಕೆ ಹಾನಿಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಶನಿವಾರ ವರದಿ ಮಾಡಿದೆ.
ಈ ಪ್ರತಿಮೆಯು ಸುಮಾರು 1,700 ವರ್ಷಗಳಷ್ಟು ಹಳೆಯದಾಗಿದ್ದು, ಇದು ಗಾಂಧಾರ ನಾಗರಿಕತೆಗೆ ಸೇರಿದೆ ಎಂದು ಊಹಿಸಲಾಗಿದೆ.
“ಧಾರ್ಮಿಕ ಮುಖಂಡರೊಬ್ಬರ ಆಜ್ಞೆಯ ಮೇರೆಗೆ ಆ ನಾಲ್ಕು ಪಾಕಿಸ್ತಾನಿ ನಾಗರಿಕರು ಪ್ರತಿಮೆಯನ್ನು ಕೆಡವದಿದ್ದರೆ ಅವರ ನಂಬಿಕೆಯನ್ನು ತ್ಯಜಿಸಿದಂತಾಗುವುದು ಎಂದು ಹೇಳಿದರು. ಆ ಪ್ರತಿಮೆಯನ್ನು ಸುತ್ತಿಗೆಯಿಂದ ಒಡೆದು ಹಾಕಿದರು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾವು ನಮ್ಮ ಆತಂಕವನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ. ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆ ಮತ್ತು ಅವರ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುತ್ತಾರೆ ಎಂಬ ನಮ್ಮ ನಿರೀಕ್ಷೆಯನ್ನು ನಾವು ಅವರಿಗೆ ತಿಳಿಸಿದ್ದೇವೆ.
ಪ್ರತಿಮೆಗೆ ಹಾನಿ ಮಾಡಿದ್ದಕ್ಕಾಗಿ ಪೊಲೀಸರು ಕಳೆದ ವಾರ ನಾಲ್ಕು ಜನರನ್ನು ಬಂಧಿಸಿದ್ದರು. ಧಾರ್ಮಿಕ ಮುಖಂಡನ ಆದೇಶದ ನಂತರ ಅವರು ಪ್ರತಿಮೆಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಹಾನಿಗೊಳಗಾದ ಪ್ರತಿಮೆಯ ಭಾಗಗಳನ್ನು, ಅದರ ಐತಿಹಾಸಿಕ ಮೌಲ್ಯವನ್ನು ಅಧ್ಯಯನ ಮಾಡುವ ಸಲುವಾಗಿ ಭಾನುವಾರ ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಸರ್ಕಾರ ಕೊರೊನಾ ಸೊಂಕಿತರ ಹೆಣದ ಮೇಲೆ ಹಣ ಮಾಡುತ್ತಿದೆ: ಡಿಕೆಶಿ



Cow at the back laughed at the nakedness of the cow in front
They demolished babri and other masjids and killed thousands of Muslims and.now giving advise to Pakistan
Dear Indian govt correct yourself before you preach