Homeಕರ್ನಾಟಕಮುಂದಿನ ಮೂರು ವರ್ಷದಲ್ಲಿ ರಾಜ್ಯದ ಎಲ್ಲಾ ಮನೆಗಳಿಗೂ ನೀರು: ಮನೆಮನೆಗೆ ಗಂಗೆ, ವಸೂಲಿ ಹೆಂಗೆ!

ಮುಂದಿನ ಮೂರು ವರ್ಷದಲ್ಲಿ ರಾಜ್ಯದ ಎಲ್ಲಾ ಮನೆಗಳಿಗೂ ನೀರು: ಮನೆಮನೆಗೆ ಗಂಗೆ, ವಸೂಲಿ ಹೆಂಗೆ!

ಗ್ರಾಮಾಂತರ ಪ್ರದೇಶಗಳಲ್ಲೂ ಹಳ್ಳಿಯ ಜನರು ಕುಡಿಯುವ ನೀರಿಗೆ ಶುಲ್ಕ ತೆರಬೇಕಾಗುತ್ತದೆ. ಪ್ರತಿ ಮನೆಯವರೂ 30 ರೂಪಾಯಿಯಿಂದ 50 ರೂಪಾಯಿ ಕಟ್ಟಬೇಕಾಗಿ ಬರಬಹುದು.

- Advertisement -
- Advertisement -

ಜಲ ಜೀವನ್ ಮಿಷನ್ ಯೋಜನೆ ಹೊಸದಾಗಿ ಜಾರಿಗೆ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆ ಇದಾಗಿದ್ದು, ಜಲಸಂಪನ್ಮೂಲ ಹೆಚ್ಚಿರುವ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಆಗಸ್ಟ್ 2ರಂದು ಎಲ್ಲಾ ಪತ್ರಿಕೆಗಳಲ್ಲೂ ಜಾಹೀರಾತು ನೀಡಲಾಗಿದೆ. ಮನೆ ಮನಗೆ ನೀರು ಹರಿಸುವುದು ಯೋಜನೆಯ ಉದ್ದೇಶವಾಗಿದೆ. ಮನೆಮನೆಗೂ ಗಂಗೆ, ವಸೂಲಿ ಹೆಂಗೆ ಎನ್ನುವ ಗೇಲಿಗೂ ಒಳಗಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಇಡೀ ರಾಜ್ಯಾದ್ಯಂತ ಎಲ್ಲ ಮನೆಗಳಿಗೂ ಕುಡಿಯುವ/ಬಳಸುವ ನೀರು ಪೂರೈಕೆ ಉದ್ದೇಶ ಹೊಂದಿರುವ ಯೋಜನೆ ಇದಾಗಿದೆ. ಪ್ರತಿಯೊಬ್ಬರಿಗೂ ನೀರು ಕೊಡಬೇಕೆಂಬುದು ಒಳ್ಳೆಯದೇ ಆದರೂ ನೀರು ಎಲ್ಲಿಂದ ತರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಜಲ ಜೀವನ್ ಯೋಜನೆಯಲ್ಲಿ ಇದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಸಧ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಸ್ವಚ್ಛ ಗ್ರಾಮೋದಯಕ್ಕೆ ನಮ್ಮ ಸೂತ್ರ ಎಂಬ ಯೋಜನೆಯಡಿ ಜಲ ಜೀವನ್ ಮಿಷನ್ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಪ್ರಕಾರ ಪ್ರತಿಯೊಬ್ಬರಿಗೂ ಪ್ರತಿನಿತ್ಯ 35 ಲೀಟರ್ ನೀರು ಪೂರೈಕೆಗೆ ಕ್ರಮ ವಹಿಸುವುದು, ಶುದ್ಧ ನೀರಿನ ಘಟಕಗಳ ಸ್ಥಾಪನೆ ಮಾಡುವುದು, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ 77 ಸುವ್ಯವಸ್ಥಿತ ಪ್ರಯೋಗಾಲಯಗಳ ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ.

ಕೇಂದ್ರ ಸರ್ಕಾರ ಶೇಕಡ 75ರಷ್ಟು ಮತ್ತು ರಾಜ್ಯ ಸರ್ಕಾರಗಳು ಶೇ.25ರಷ್ಟು ಹಣವನ್ನು ಈ ಯೋಜನೆಗೆ ಭರಿಸುತ್ತವೆ. ರಾಜ್ಯ ಸರ್ಕಾರ ನೇರವಾಗಿಯಲ್ಲದಿದ್ದರೂ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಈ ಯೋಜನೆಗೆ ಹಣ ಬಳಸುತ್ತವೆ. ಕೇಂದ್ರ ಸರ್ಕಾರ ಶೇ 75ರಷ್ಟು ಹಣವನ್ನು ಬಿಡುಗಡೆ ಮಾಡುತ್ತದೆ. ಈ ಹಣವನ್ನು ಬಳಸಿಕೊಂಡು ರಾಜ್ಯ ಸರ್ಕಾರ ಜನರಿಗೆ ಕುಡಿಯುವ ನೀರು ಮತ್ತು ಬಳಸುವ ನೀರು ಪೂರೈಕೆ ಮಾಡುತ್ತದೆ.

ಜಲ ಜೀವನ್ ಮಿಷನ್ ಯೋಜನೆಗೆ ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ. ಕಾವೇರಿ ಮತ್ತು ಹೇಮಾವತಿ ನದಿ ನೀರು ಪೂರೈಕೆಯಾಗುವ ಈ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಐದು ಜಿಲ್ಲೆಗಳ ಮನೆಮನೆಗೂ ನಲ್ಲಿ ಸಂಪರ್ಕಗಳನ್ನು ಕಲ್ಪಿಸಿ ನೀರು ಪೂರೈಕೆ ಮಾಡುವ ಬಗ್ಗೆ ಪ್ಲಾನ್ ಸಿದ್ದ ಮಾಡಿಟ್ಟುಕೊಳ್ಳಲಾಗಿದೆ.

ಮನೆಮನೆಗೂ ನೀರು ಪೂರೈಸುವ ಜೊತೆಗೆ ಒಂದು ಮನೆಗೆ ತಿಂಗಳಿಗೆ 30 ರಿಂದ 50 ರೂಪಾಯಿ ನೀರಿನ ಶುಲ್ಕ ನಿಗದಿ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಮನೆಮನೆಗೂ ಗಂಗೆ ಹರಿದರೆ ಹಾಗೆಯೇ ಸರ್ಕಾರಕ್ಕೂ ಹಣದ ಹರಿವೂ ಹೆಚ್ಚಾಗಲಿದೆ. ಜನರು ಕೊರೊನ ಸಂದರ್ಭದಲ್ಲಿ ದುಡಿಮೆಯಿಲ್ಲದೆ, ಹಣವಿಲ್ಲದೆ ತತ್ತರಿಸಿಹೋಗಿರುವ ವೇಳೆಯಲ್ಲಿ ಪ್ರತಿಮನೆಗೂ ಪ್ರತಿ ತಿಂಗಳಿಗೆ 50 ರೂಪಾಯಿ ನೀರಿನ ಕರ ವಸೂಲಿಗೆ ಸರ್ಕಾರ ರಹಸ್ಯವಾಗಿ ತೀರ್ಮಾನ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ನಲ್ಲಿಗಳಿಗೆ ಮೀಟರ್ ಅಳವಡಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ತುಮಕೂರು ನಗರದಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸಿ ನೀರು ಲೀಕೇಜ್ ಆಗುವುದನ್ನು ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರಗಳಲ್ಲಿ ಮುಂದಿನ ದಿನಗಳಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಹಳ್ಳಿಯ ಜನರು ಕುಡಿಯುವ ನೀರಿಗೆ ಶುಲ್ಕ ತೆರಬೇಕಾಗುತ್ತದೆ. ಪ್ರತಿ ಮನೆಯವರೂ 30 ರೂಪಾಯಿಯಿಂದ 50 ರೂಪಾಯಿ ಕಟ್ಟಬೇಕಾಗಿ ಬರಬಹುದು.

ತುಮಕೂರು ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಜಿಲ್ಲೆಗೆ ಬರಬೇಕಾದ 24 ಟಿಎಂಸಿ ನೀರು ಪೂರ ಬರುತ್ತಿಲ್ಲ. ತುಮಕೂರಿಗೆ ತನ್ನ ಪಾಲಿನ ಕುಡಿಯುವ ನೀರು ಹರಿಸಲು ಹಲವು ರೀತಿಯ ಅಡ್ಡಿಗಳಿವೆ. ತುಮಕೂರು ನಗರಕ್ಕೆ ಕುಡಿಯುವ ನೀರು ಸಾಲುತ್ತಿಲ್ಲ. ಹೇಮಾವತಿ ನದಿ ನೀರು ತಮಿಳುನಾಡಿಗೆ ಹರಿಸಿದರೆ  ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತದೆ. ಹಾಗಾಗಿಯೇ ನಗರಕ್ಕೆ ಮೈದಾಳ ಕೆರೆಯಿಂದಲೂ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ.

ತುಮಕೂರು ಜಿಲ್ಲೆಯ ಪರಿಸ್ಥಿತಿಯೇ ಹೀಗಾದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ರಾಜ್ಯ ಸರ್ಕಾರ ಕುಡಿಯು ನೀರು ಒದಗಿಸುವ ನೆಪದಲ್ಲಿ ಬಡವರು, ಕೂಲಿಕಾರರಿಂದ ಹಣ ವಸೂಲಿ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಹಾಗೆಂದು ಹಣ ವಸೂಲಿಗಾಗಿ ಯೋಜನೆ ರೂಪಿಸಿದರೆ ಅದು ಜನ ವಿರೋಧಿಯಾಗಲಿದೆ.

  • ಕೆ.ಈ ಸಿದ್ದಯ್ಯ, ತುಮಕೂರು.

ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಮುಟ್ಟದಿರಿ ಜೋಕೆ – ವೀರಶೈವ ಸ್ವಾಮೀಜಿಗಳ ಎಚ್ಚರಿಕೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...