ನಾನುಗೌರಿ.ಕಾಂಗೆ ಸಿಕ್ಕಿರುವ ಶೃಂಗೇರಿ ಘಟನೆಯ ಎಕ್ಸ್‌ಕ್ಲೂಸಿವ್ ಸಿಸಿಟಿವಿ ವಿಡಿಯೋಗಳು ಹೇಳುವ ಕಥೆ ಆತಂಕಕಾರಿಯಾಗಿದೆ. ಕೇವಲ ಎರಡು ದಿನದಲ್ಲಿ ಸದರಿ ಘಟನೆಯ ಇಡೀ ಚಿತ್ರಣವೇ ಬದಲಾಗಿದ್ದು, ಈ ಸಿಸಿಟಿವಿ ಫೂಟೇಜ್ ಚಿಕ್ಕಮಗಳೂರು ಪೊಲೀಸರ ಕೈಗೆ ಸಿಕ್ಕಿದ್ದರಿಂದ. ಖುದ್ದು ಚಿಕ್ಕಮಗಳೂರು ಎಸ್‌ಪಿ ಉಸ್ತುವಾರಿಯಲ್ಲಿ ಘಟನೆಯನ್ನು ಬೇಧಿಸಿರುವ ಪೊಲೀಸರು, ಅದುವರೆಗೆ ನಡೆದಿದ್ದ ಘಟನಾವಳಿಗಳು ತಿರುವು ಮುರುವಾಗುವಂತೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಯ ಮೇಲೆ ʼಮುಸ್ಲಿಂ ಸಂಘಟನೆʼಯ ಬಾವುಟ ಬಿದ್ದಿದೆಯೆಂದು ಆರೋಪ ಬಂದು ಉದ್ವಿಗ್ನ ಪರಿಸ್ಥತಿ ಉಂಟಾಗಿತ್ತು. ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಮಾಜಿ ಸಚಿವ ಜೀವರಾಜ್‌ರ ನೇತೃತ್ವದಲ್ಲಿ ಪ್ರತಿಭಟಿಸಿದ್ದವು. ಸದರಿ ಬಾವುಟವು ಎಸ್‌ಡಿಪಿಐ ಸಂಘಟನೆಗೆ ಸೇರಿದ್ದೆಂದೂ, ಈ ಘಟನೆಯನ್ನು ಅವರೇ ಮಾಡಿದ್ದಾರೆಂದೂ ಅವರು ಆರೋಪಿಸಿದ್ದರು. ಎಸ್‌ಡಿಪಿಐ ಪಕ್ಷವನ್ನು ಬ್ಯಾನ್ ಮಾಡಬೇಕೆಂದೂ ಅವರುಗಳು ಒತ್ತಾಯಿಸಿದ್ದರು.
ಇದನ್ನೂ ಓದಿ: ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್ ಡಿಲಿಟ್ ಮಾಡಿದ ವಿಎಚ್‌ಪಿ ಮುಖಂಡ; ಇಲ್ಲಿದೆ ನೋಡಿ ವಿಡಿಯೋ
ಆದರೆ ಇದೀಗ ಘಟನೆಯನ್ನು ಪೊಲೀಸರು ಸಿಸಿಟಿವಿ ವಿಡಿಯೋ ವೀಕ್ಷಿಸುವುದರ ಮೂಲಕ ಭೇದಿಸಿದ್ದು ಮಿಲಿಂದ್ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಹೇಳುವಂತೆ ʼಆತ ಕುಡಿದ ಮತ್ತಿನಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಮಸೀದಿಗೆ ನುಗ್ಗಿ ಬಾವುಟವನ್ನು ಕದ್ದುಕೊ೦ಡು ಹೋಗಿದ್ದಾನೆʼ.
ಆದರೆ ಇದೇ ಮಿಲಿಂದ್ ಕಳ್ಳತನದ ಕೇಸಿನಲ್ಲಿ ಆರೋಪಿಯಾಗಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಆಗ ಆತನನ್ನು ಬಿಡಿಸಿಕೊಂಡು ಹೋಗಲು ಬಂದವರು ಕೆಲವರು ಸಂಘಟನೆಯವರಾಗಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಅದೇ ಸಂಘಟನೆಯವರೇ ಪ್ರತಿಭಟನೆಯಲ್ಲೂ ಪಾಲ್ಗೊಂಡು, ಇನ್ನಾರದೋ ತಲೆಗೆ ಸದರಿ ದುಷ್ಕೃತ್ಯವನ್ನು ಕಟ್ಟಲು ನೋಡಿದ್ದರೇ ಎಂಬುದೂ ಪತ್ತೆಯಾಗಬೇಕಿದೆ.
ಘಟನೆಯ ಸಿಸಿಟಿವಿ ವಿಡಿಯೊಗಳು ಹೊರಬಿದ್ದಿದೆ. ಅವುಗಳನ್ನು ಕೆಳಗೆ ನೋಡಬಹುದಾಗಿದೆ.
ಶೃಂಗೇರಿಯಲ್ಲಿ ಮಸೀದಿಯಿಂದ ಬಾವುಟ ಕದ್ದುಕೊಂಡು ಹೋಗುವ #ಎಕ್ಸ್‌ಕ್ಲೂಸಿವ್_ವೀಡಿಯೋಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಘಟನೆಗೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದ್ದವು….
Posted by Naanu Gauri on Friday, August 14, 2020
ಓದಿ: ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?


