ಸುಪ್ರೀಂ ಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಗುರಿಯಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸಿ ನ್ಯಾಯಾಧೀಶರು ಹಾಗೂ ವಕೀಲರು ಸೇರಿದಂತೆ 3000 ಕ್ಕೂ ಹೆಚ್ಚು ಜನರು ಸಹಿ ಅಭಿಯಾನ ಪ್ರಾರಂಭಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ನಂತರ ಪ್ರಾರಂಭವಾಗುವ ನ್ಯಾಯಾಲಯದ ದೊಡ್ಡ ಪೀಠವು ಪ್ರಕರಣವನ್ನು ಪರಿಶೀಲಿಸದ ಹೊರತು ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಬಾರದು ಎಂದು ಸಹಿ ಅಭಿಯಾನ ನಡೆಸುವವರು ತಮ್ಮ ಸಲಹೆಯಲ್ಲಿ ಹೇಳಿದ್ದಾರೆ.
ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸುವ ವಕೀಲರಲ್ಲಿ ಜನಕ್ ದ್ವಾರಕಾದಿಶ್, ನವ್ರೋಜ್ ಹೆಚ್ ಸಿರಾವೈ, ಡೈರಾಸ್ ಜೆ ಖಂಬಾತಾ, ಜಯಂತ್ ಭೂಷಣ್, ಅರವಿಂದ ದಾತಾರ್, ಹಫೆಜಾ ಅಹ್ಮದಿ, ಸಿಯು ಸಿಂಗ್, ಶ್ಯಾಮ್ ದಿವಾನ್, ಸಂಜಯ್ ಹೆಗ್ಡೆ, ಮಿಹಿರ್ ದೇಸಾಯಿ ಮತ್ತು ಮೇನಕಾ ಗುರುಸ್ವಾಮಿ ಹೆಸರುಗಳು ಸೇರಿದೆ.
ಇದನ್ನೂ ಓದಿ: ನಮ್ಮ ದೇಶದ ಶೇ.1 ರಷ್ಟು ಜನರಿಗೂ ನ್ಯಾಯ ಸಿಗುತ್ತಿಲ್ಲ : ಪ್ರಶಾಂತ್ ಭೂಷಣ್
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ 13 ನ್ಯಾಯಾಧೀಶರು ಸೇರಿದಂತೆ 3000 ಕ್ಕೂ ಹೆಚ್ಚು ವಕೀಲರು ಅರ್ಜಿಗಳಿಗೆ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಪಿಟಿಐ ಈ ಸಂಖ್ಯೆಗಳು ಕೇವಲ 41 ಎಂದಿದೆ.
ಪ್ರಶಾಂತ್ ಭೂಷಣ್ ಬೆಂಬಲಿಸುವ ವಕೀಲರು ಮತ್ತು ನ್ಯಾಯಾಧೀಶರು ತಮ್ಮ ಸಲಹೆಯಲ್ಲಿ, “ಕಳೆದ 72 ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ಧ್ವನಿಗಳನ್ನು ಕೇಳಿದೆ ಎಂದು ನಾವು ಭಾವಿಸುತ್ತೇವೆ. ನ್ಯಾಯದ ಕಗ್ಗೋಲೆಯನ್ನು ತಡೆಯಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಹಂತಕ್ಕೆ ಹೋಗಲಾಗುವುದು. ಇದರಿಂದ ಸಾರ್ವಜನಿಕರಿಗೆ ಮತ್ತೆ ನ್ಯಾಯಾಲಯದ ಬಗ್ಗೆ ಗೌರವ ಮತ್ತು ನಂಬಿಕೆ ಬರುತ್ತದೆ.” ಎಂದು ಹೇಳಿದ್ದಾರೆ.
ಪ್ರಶಾಂತ್ ಭೂಷಣ್ ಅವರ ಶಿಕ್ಷೆಯನ್ನು ಆಗಸ್ಟ್ 20 ರಂದು ಸುಪ್ರೀಂ ಕೋರ್ಟ್ ಘೋಷಿಸಲಿದೆ. ಇದರಲ್ಲಿ ಪ್ರಶಾಂತ್ ಭೂಷಣ್ 6 ತಿಂಗಳವರೆಗೆ ಶಿಕ್ಷೆ ಅಥವಾ 2,000 ರೂ ದಂಡ ವಿಧಿಸಬಹುದು ಎನ್ನಲಾಗಿದೆ.
ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ಹೇಳಿದೆ.
ಓದಿ: ವಾಕ್ ಸ್ವಾತಂತ್ರ್ಯದ ಉಲ್ಲಂಘನೆ: ನ್ಯಾಯಾಂಗ ನಿಂದನೆ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ


