Homeಅಂಕಣಗಳುಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

ಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

- Advertisement -
- Advertisement -

ಮೂಲ: ರಾಘವ್ ಬೆಹ್ಲ್, ಕ್ವಿಂಟ್
ಅನುವಾದ: ರಾಜಶೇಖರ್ ಅಕ್ಕಿ |

2019 ಹತ್ತಿರಕ್ಕೆ ಬರುತ್ತಿದ್ದಂತೆ, ಪ್ರಧಾನಿ ಮೋದಿಯವರು ತಮ್ಮ ಸೋಲುಗಳ ಲೆಕ್ಕ ಹಾಕುತ್ತಿರಬಹುದು. ಕಳೆದ 18 ವರ್ಷಗಳಲ್ಲಿ ಒಂದೂ ಸಲ ಕಾಂಗ್ರೆಸ್ ಪಕ್ಷಕ್ಕೆ ಸೋಲದ ಮೋದಿ ಈಗ ಮೂರು ರಾಜ್ಯಗಳಲ್ಲಿ ಸೋಲ ನುಭವಿಸಿದ್ದಾರೆ. ನನಗೆ ವರ್ಷ 2000 ನೆನಪಾಗುತ್ತಿದೆ, ಆಗ ಮೋದಿಯ ರಾಜಕೀಯ ಗುರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಹಾಗೂ ಅವರೂ ಕೂಡ ತಮ್ಮ ಅಧಿಕಾರದ ಅತ್ಯಂತ ಕೆಟ್ಟದಿನಗಳನ್ನೇ ಅನುಭವಿಸುತ್ತಿದ್ದರು; ಲೋಕಸಭೆ ಕೋಲಾಹಲದಲ್ಲಿತ್ತು, ಕಾಶ್ಮೀರ ನಿಯಂತ್ರಣದಲ್ಲಿರಲಿಲ್ಲ, ಪಾಕಿಸ್ತಾನ ತನ್ನ ಕರಾಳ ಅಶಿಸ್ತನ್ನು ಪ್ರದರ್ಶಿಸುತ್ತಿತ್ತು ಹಾಗೂ ರಾಮ ಮಂದಿರವನ್ನು ಬಲವಂತವಾಗಿ ನಿರ್ಮಿಸಲು ಗಟ್ಟಿಯಾದ ಕೂಗುಗಳು ಕೇಳಿಬರುತ್ತಿದ್ದವು. ನಿಜ, ನಮ್ಮ ಈ ಸಮಯಾತೀತ ದೇಶದಲ್ಲಿ ಸಮಯ, ಸಂಗತಿಗಳು ಬದಲಾಗುವುದಕ್ಕಿಂತ, ಬದಲಾಗದೇ ಉಳಿಯುವವೇ ಹಚ್ಚು.
ಈ ಎಲ್ಲವುಗಳಿಗೆ ಪ್ರತಿಕ್ರಿಯೆಯಾಗಿ ವಾಜಪೇಯಿ ಕೇರಳದ ಕುಮಾರಕೋಂ ರೆಸಾರ್ಟಿನಲ್ಲಿ ಠಿಕಾಣಿ ಹೂಡಿ ತಮ್ಮ ರಾಜಕೀಯ ‘ಆಲೋಚನೆ’ಗಳನ್ನು ಕಾವ್ಯದ ರೂಪದಲ್ಲಿ ಬರೆದರು. ಪ್ರಧಾನಿ ಮೋದಿಗೂ ಇಂತಹ ‘ಆಲೋಚನೆ’ಗಳನ್ನು ಕಾವ್ಯವಾಗಿಸುವ ಸಮಯ ಬಂದಿದೆ ಎಂದೆನಿಸುತ್ತಿದೆ.
ಮಹಾಭಾರತ ಯುದ್ಧದ ಸಮಯದಲ್ಲಿ ಭಗವಾನ್ ಕೃಷ್ಣ ಅರ್ಜುನನಿಗೆ ಉಪದೇಶ ನೀಡಿದ ಸ್ಥಳವಾದ ಕುರುಕ್ಷೇತ್ರದಲ್ಲಿಯೇ ಮೋದಿ ತನ್ನ ಟೆಂಟನ್ನು 31 ಡಿಸೆಂಬರ್‍ನ ಮಧ್ಯರಾತ್ರಿ ಹೂಡಬೇಕು. ಯಾರಿಗ್ಗೊತ್ತು, ಮೋದಿ ಕೂಡ ಅರ್ಜುನನಷ್ಟೇ ಅದೃಷ್ಟಶಾಲಿಯಾಗಿರಬಹುದು. ಭಗವಾನ್ ಕೃಷ್ಣ 2019ರ ಹೊಸ ಭಗವದ್ಗೀತೆಯ ಭಾಗವಾಗಿ, ಕೆಳಗೆ ಬರೆದಿರುವ ಹತ್ತು ಬೋಧೆಗಳನ್ನು ನೀಡಬಹುದು.

ಮೊದಲನೇ ಬೋಧನೆ: ನೀನು ಅತಿರೇಕವಿಲ್ಲದ, ನಡುಪಂಥೀಯ ರಾಜಕೀಯಕ್ಕೆ ಮುಖಮಾಡಬೇಕು.
ವಾಜಪೇಯಿ ಆಗ ಬರೆದಿದ್ದು, “ಕಲಹಕ್ಕೆ ಬದಲಾಗಿ ಸಂಧಾನ, ವಿರೋಧದ ಬದಲಿಗೆ ಮೈತ್ರಿ ಹಾಗೂ ತಿಕ್ಕಾಟದ ಬದಲಿಗೆ ಒಮ್ಮತ ಮತ್ತು ಸಹಕಾರದ ಕ್ರಮಗಳಲ್ಲಿ ಭಾರತದ ಸಾಮಥ್ರ್ಯ ಅಡಗಿದೆ ಹಾಗೂ (ನಮ್ಮ ಸರ್ಕಾರವು) ಇದನ್ನೇ ಬಯಸುತ್ತದೆ”
ದುರದೃಷ್ಟವಶಾತ್, ಮೋದಿಯ ಬಿಜೆಪಿಯು ನಡುಪಂಥೀಯ ಒಮ್ಮತವನ್ನು ಮುರಿದು ಹಾಕಿದೆ. ಇದರ ಮೂಲಸ್ವಭಾವ ಹಿಂದೂ-ಬಹುಪಕ್ಷೀಯತೆಯೆಡೆಗೇ ಇದೆ. ಇದು ಅತ್ಯಂತ ಸೂಕ್ಷ್ಮ ವಿಷಯಗಳಾದ ಮಿಲಿಟರಿ ಸಾಹಸಗಳನ್ನು, ಜಮ್ಮು ಕಾಶ್ಮೀರದ ಕ್ಷೋಭೆಯನ್ನು ಅತ್ಯಂತ ಸಂಕುಚಿತವಾದ ರಾಷ್ಟ್ರೀಯತೆಯ ವಿಷಯಗಳನ್ನಾಗಿ ಬದಲಿಸುತ್ತಿದೆ.
ಆದರೆ 2019ರಲ್ಲಿ ಇದು ವಾಜಪೇಯಿಯವರ ಸಂಧಾನ, ಮೈತ್ರಿ, ಒಮ್ಮತ ಮತ್ತು ಸಹಕಾರದೆಡೆಗೆ ಮರಳಬೇಕು.

ಎರಡನೇ ಬೋಧನೆ: ಪಂಡಿತ್ ನೆಹರು ಮತ್ತು ಇಂದಿರಾ ಗಾಂಧಿ ಇಂದು ಕಣದಲ್ಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು.
ಮೋದಿ ಸೈನ್ಯದ ಕಾಲಾಳುಗಳು ತಮ್ಮ ಶಕ್ತಿಯನ್ನೆಲ್ಲ ಬಳಸಿ ಭಾರತದ ಎಲ್ಲಾ ವೈಫಲ್ಯಗಳಿಗೆ ನಾಲ್ಕು ದಶಕಗಳವರೆಗೆ ಆಳಿದ ‘ಕುಟುಂಬದ ಆಳ್ವಿಕೆ’ಯೇ ಕಾರಣವೆಂದು ಸಾಬೀತುಪಡಿಸಲು ಹೊಸ ಹೊಸ ಸುಳ್ಳುಗಳ ಅವಿಷ್ಕಾರದಲ್ಲಿ ತೊಡಗಿರುತ್ತಾರೆ.
ಆದರೆ ಮೋದಿ ಭಾರತದ ಶ್ರೇಷ್ಠತೆಯ ಬಗ್ಗೆ ಮಾತನಾಡಿದಾಗ – ಅದು ನ್ಯೂಕ್ಲಿಯರ್ ವಿಜ್ಞಾನದ ಬಗ್ಗೆಯಿರಲಿ, ಅಂತರಿಕ್ಷದ ಬಗ್ಗೆ ಇರಲಿ, ಕೈಗಾರಿಕೆಯಾಗಿರಲಿ ಅಥವಾ ಕೃಷಿಯಾಗಿರಲಿ – ಇವರ ಈ ಎದೆತಟ್ಟುವಿಕೆಯಲ್ಲಿ ಆ ‘ಕುಟುಂಬದ ಆಳ್ವಿಕೆ’ಯ ಕಾಲದಲ್ಲಿ ಆದ ಸಾಧನೆಗಳನ್ನೇ ಸಂಭ್ರಮಿಸುತ್ತಾರೆ.
ಅದೇನೇ ಇರಲಿ, ಪಂಡಿತ್ ನೆಹರು ಅವರು 1964ರಲ್ಲಿ ಹಾಗೂ ಇಂದಿರಾ ಗಾಂಧಿ 1984ರಲ್ಲಿ ತೀರಿಕೊಂಡರು ಎಂದು ನಮ್ಮ ಪ್ರಧಾನಮಂತ್ರಿಗೆ ಯಾರಾದರೂ ಹೇಳಬೇಕಿದೆ.

ಮೂರನೇ ಬೋಧನೆ: ರಾಮಮಂದಿರದ ಬಗ್ಗೆ ನಿಮ್ಮ ಮೌನವನ್ನು ಮುರಿಯುವಿರಿ
ಆಗ ವಾಜಪೇಯಿ ತನ್ನ ಸರಕಾರಕ್ಕೆ ಹೇಳಿದ್ದೇನೆಂದರೆ, “ನ್ಯಾಯಾಂಗದ ತೀರ್ಪು, ಅದೇನೇ ಆಗಿರಲಿ, ಅದನ್ನು ಅನುಷ್ಠಾನಗೊಳಿಸಲು ಸಂವಿಧಾನಾತ್ಮಕವಾಗಿ ಬದ್ಧರಾಗಿದ್ದೇವೆ ಹಾಗು ಒಪ್ಪಿಕೊಳ್ಳುತ್ತೇವೆ”
ಆದರೆ ಮೋದಿ ಅಡಿಯಲ್ಲಿ, ನ್ಯಾಯಾಂಗದ ತೀರ್ಪನ್ನು ರದ್ದು ಮಾಡಲು ಸುಗ್ರೀವಾಜ್ಞೆಯೊಂದನ್ನು ತರುವ ಭೀತಿ ಸೃಷ್ಟಿಯಾಗುತ್ತಿದೆ. ಮೋದಿ ಇಂತಹ ಯಾವುದೇ ರಾಜಕೀಯ-ಕಾನೂನಾತ್ಮಕ ದುಸ್ಸಾಹಸವನ್ನು ಮಾಡುವ ವಿಚಾರವನ್ನು ಕೈಬಿಡಬೇಕು.

ನಾಲ್ಕನೇ ಬೋಧನೆ: ನಿಮ್ಮ ಹಿಂಬಾಲಕರ ಹಿಂಸೆಯ ಬಗ್ಗೆ ತಾಳಿರುವ ಮೌನವನ್ನು ಮುರಿಯಬೇಕು.
ದೇಶದಲ್ಲಿ ಆಗುತ್ತಿರುವ ಗುಂಪು ಹತ್ಯೆ-ಮಾಬ್ ಲಿಂಚಿಂಗ್ ಬಗ್ಗೆ ಒಂದು ವಿಶೇಷ ತನಿಖಾ ದಳವನ್ನು ರಚಿಸಿ (ಎಸ್.ಐ.ಟಿ) ಇಂತಹ ಕೃತ್ಯಗಳನ್ನು ಮಾಡುವವರನ್ನು ಎಲ್ಲರಿಗೂ ಗೋಚರವಾಗುವಂತೆ ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಿಸಬೇಕು. ಹಾಗೂ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುತ್ತಿರುವ ವ್ಯಕ್ತಿಗಳನ್ನು  ಸ್ವತಃ ತಾನೇ ಹಿಂಬಾಲಿಸುವುದನ್ನು ಕೂಡಲೇ ಬಿಡಬೇಕು.

ಐದನೇ ಬೋಧನೆ: ಈ ಗಣರಾಜ್ಯ (ರಿಪಬ್ಲಿಕ್)ದಲ್ಲಿ ನ್ಯಾಯಯುತವಾದ ಸಂವಾದಕ್ಕೆ ಅನುವು ಮಾಡಿಕೊಡಬೇಕು.
ತಮ್ಮ ಸಹಭಾಗಿ ಟಿವಿ ವಾಹಿನಿಗಳಲ್ಲಿ ಪ್ರತಿ ಸಂಜೆ ನಂಬಲಸಾಧ್ಯವಾದ ರೀತಿಯಲ್ಲಿ ಇವರ ವಕ್ತಾರರ ಮುಖಾಂತರ ನಡೆಯುತ್ತಿರುವ ಪ್ರಾಕ್ಸಿ ರಾಜಕೀಯ ಪ್ರಚಾರವನ್ನು ಈ ಕೂಡಲೇ ನಿಲ್ಲಿಸಬೇಕು.

ಆರನೇ ಬೋಧನೆ: ಸುಳ್ಳುಗಳನ್ನು ತುಂಬಿಸಿ ಇತಿಹಾಸವನ್ನು ತಿದ್ದುವುದನ್ನು, ಪುನರ್‍ರಚಿಸುವುದನ್ನು ನಿಲ್ಲಿಸಿ.
ಮೋದಿಯ ‘ಬುದ್ಧಿಜೀವಿ’ಗಳು ಇತಿಹಾಸವನ್ನು ತಿದ್ದುವುದನ್ನು ನಿಲ್ಲಿಸಬೇಕು; 16ನೇ ಶತಮಾನದಲ್ಲಿ ಆದ ಯುದ್ಧದಲ್ಲಿ ಅಕ್ಬರ್‍ನನ್ನು ಮಹಾರಾಣಾ ಪ್ರತಾಪ್ ಸೋಲಿಸಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಸ್ವಾಮಿ ವಿವೇಕಾನಂದ ಅವರು ಎಂದೂ ಹಿಂದುತ್ವದ ಐಕಾನ್ ಆಗಿರಲಿಲ್ಲ; ಹಾಗೂ ಸರದಾರ್ ಪಟೇಲ್ ಅವರು ಎಂದೂ ಆರ್.ಎಸ್.ಎಸ್. ಕಾರ್ಯಕರ್ತರಾಗಿರಲಿಲ್ಲ ಎಂಬುದೇ ವಾಸ್ತವ. ಇದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.

ಏಳನೇ ಬೋಧನೆ: ವೂಡೂ ಆರ್ಥಿಕತೆಯ ಪ್ರಯೋಗವನ್ನು ಬಿಟ್ಟುಬಿಡಿ.
ಈಗ ಮಾಡುತ್ತಿರುವ ಫ್ಯಾಂಟಮ್ ಹೂಡಿಕೆಯನ್ನು (ಒಂದು ಸರಕಾರೀ ಸಂಸ್ಥೆ ಇನ್ನೊಂದು ಸರಕಾರೀ ಸಂಸ್ಥೆಯನ್ನು ಖರೀದಿಸಿ ತುಂಬಾ ವ್ಯವಹಾರ ನಡೆಯುತ್ತಿದೆ ಎಂಬ ಭ್ರಾಂತಿಯನ್ನು ಸೃಷ್ಟಿಸುವುದು) ಕೈಬಿಡಿ.
ನಿರುದ್ಯೋಗದ ಬಿಕ್ಕಟ್ಟಿನ ಪ್ರಶ್ನೆಗೆ ‘ಪಕೋಡಾ ಉದ್ಯೋಗ’ದ ಸಂಖ್ಯೆಗಳನ್ನು ಕಂಡುಹಿಡಿದು, ಅಥವಾ ಅದಕ್ಕೆ ಸಂಬಂಧಪಡದ ಮುದ್ರಾ ಮತ್ತು ಇ.ಪಿ.ಎಫ್. ಸಂಖ್ಯೆಗಳನ್ನು ಬಳಸಿ ಮೂಲಪ್ರಶ್ನೆಯಿಂದ ನುಣುಚಿಕೊಳ್ಳುವುದನ್ನು ನಿಲ್ಲಿಸಬೇಕು.
2014/15 ರಲ್ಲಿ ಮೋದಿ ತನ್ನ ರಾಜಕೀಯ ಅಧಿಕಾರದ ಉತ್ತುಂಗದಲ್ಲಿದ್ದಾಗ ಸಾರ್ವಜನಿಕ ಬ್ಯಾಂಕ್ ವಲಯವನ್ನು ಸರಿಪಡಿಸದೇ ಇರುವುದನ್ನು ಒಪ್ಪಿಕೊಳ್ಳಬೇಕು.

ಎಂಟನೇ ಬೋಧನೆ: ಬಿಕ್ಕಟ್ಟಿನಲ್ಲಿರುವ ರೈತರಿಗೆ ದುಪ್ಪಟ್ಟು ಆದಾಯ ಮತ್ತು ಹೆಚ್ಚಿನ ಎಮ್.ಎಸ್.ಪಿ(ಕನಿಷ್ಠ ಬೆಂಬಲ ಬೆಲೆ)ಗಳ ಲಾಲಿಪಾಪ್‍ಗಳಿಂದ ದಾರಿತಪ್ಪಿಸುವುದನ್ನು ಕೈಬಿಡಬೇಕು.
ಅದರ ಬದಲಿಗೆ, “ಒಂದು ಬಾರಿಯ ಸಾಲ ಪರಿಹಾರ”ದ ದಿಟ್ಟ ನೀತಿಯನ್ನು ರಚಿಸಿ, ಅದರೊಂದಿಗೆ ಆದಾಯ ವರ್ಗಾವಣೆ, ಗ್ರಾಮೀಣ ಸಂಪನ್ಮೂಲಗಳನ್ನು ಹೆಚ್ಚಿಸುವುದಕ್ಕೆ ಹೂಡಿಕೆ, ಗುತ್ತಿಗೆ ಕೃಷಿ, ಜಿ.ಎಮ್. ಬೆಳೆಗಳು ಹಾಗೂ ಆಹಾರ ಉದ್ಯಮಗಳೊಂದಿಗೆ ನೇರ ಸಂಯೋಜನೆ, ಇವೆಲ್ಲವುಗಳನ್ನೂ ಒಳಗೊಂಡ ನಿಜವಾದ ಕೃಷಿ ಸುಧಾರಣೆಗಳನ್ನು ತರಬೇಕು,
ಮಧ್ಯವರ್ತಿಗಳಿಗೇ ದೊಡ್ಡ ಆದಾಯವನ್ನು ಸೃಷ್ಟಿಸುವ, ಈಗ ಏಕಸ್ವಾಮ್ಯತೆಯನ್ನು ಹೊಂದಿರುವ ಮಾರುಕಟ್ಟೆ/ಮಂಡಿಗಳನ್ನು ನಾಶಮಾಡಬೇಕು.

ಒಂಬತ್ತನೇ ಬೋಧನೆ: ಮುಕ್ತ ಮಾರುಕಟ್ಟೆಗಳಲ್ಲಿ ನಿಜವಾದ ಶ್ರದ್ಧೆಯನ್ನು ತೋರಿಸಿ.
2019 ರಲ್ಲಿ ಮೋದಿಯು ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಬೇಕು. ತೆರಿಗೆದಾರರಿಗೆ ಮತ್ತು ಏಂಜೆಲ್ ಹೂಡಿಕೆದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಅಂತರರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸಬೇಕು. ವಿದೇಶೀ ಹೂಡಿಕೆದಾರರ ಹಕ್ಕುಗಳನ್ನು ಗೌರವಿಸಬೇಕು, ಐ.ಎ.ಎಸ್ ಅಲ್ಲದ ನಿಯಂತ್ರಕರನ್ನು ನೇಮಕಾತಿ ಮಾಡಬೇಕು ಹಾಗೂ ನೋಟುರದ್ದತಿ ಮತ್ತು ಜಿ.ಎಸ್.ಟಿಯ ಡಬಲ್ ಹೊಡೆತದಿಂದ ಬಳಲುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನೋವಿಗೆ ಸ್ಪಂದಿಸಬೇಕು.

ಹತ್ತನೇ ಬೋಧನೆ: ನಿಮ್ಮ ಪರಿವಾರದ ಸಂವಿಧಾನೇತರ ‘ಏಜೆನ್ಸಿಗಳು….’ ಮಾಡುತ್ತಿರುವ ಕತ್ತರಿಸುವ ಕೆಲಸಗಳನ್ನು ನಿಲ್ಲಿಸಿ
ಕೊನೆಯದಾಗಿ ಭಗವಾನ್ ಕೃಷ್ಣ ತನ್ನ ಆದೇಶವನ್ನು ಹೀಗೆ ಮುಕ್ತಾಯಗೊಳಿಸುತ್ತಾನೆ: ಎಲೈ ಬಿಜೆಪಿ ಆಡಳಿತಗಾರರಾ, ಹೋಗ್ರೋ, ಒಂಚೂರು ಹಾಸ್ಯಪ್ರಜ್ಞೆಯನ್ನು ಎಲ್ಲಿಂದಾದರೂ ತೊಗೊಂಬನ್ನಿ. ನಿಮ್ಮ ಒಂದು ಮುಗುಳ್ನಗೆ ರಾಜಕೀಯ ಎದುರಾಳಿಗಳನ್ನು ನಿಶ್ಯಸ್ತ್ರಗೊಳಿಸುವುದಕ್ಕೆ ದೊಡ್ಡ ಅಸ್ತ್ರವಾಗುತ್ತೆ. ಒಳ್ಳೇದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...