ಪ್ರಸಿದ್ದ ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ಮಲಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿ ಹಾರೈಸಿದ್ದಾರೆ. ಆಗಸ್ಟ್ 5 ರಂದು ಕೊರೊನ ಸೋಂಕಿನ ಹಿನ್ನಲೆಯಲ್ಲಿ ಬಾಲಸುಬ್ರಹ್ಮಣ್ಯಂ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು.
Wishing & praying for SPBalasubramaniam sirs speedy recovery. I’ve had the good fortune of lip syncing his glorious voice in two evergreen films, #SwathiKiranam and #Azhagan ! May the almighty bring him back to fine form and strength to give us many more timeless songs and shows
— Mammootty (@mammukka) August 24, 2020
ನಿನ್ನೆ ಅವರ ಕೊರೊನಾ ಪರೀಕ್ಷೆಯು ನೆಗೆಟಿವ್ ಆಗಿದೆಯೆಂದು ದೇಶದ ಪ್ರಮುಖ ಮಾಧ್ಯಮಗಳು ವರದಿ ಮಾಡಿರುವುದರಿಂದ, ನಮಗೆ ಸಿಕ್ಕ ಮಾಹಿತಿ ಆಧಾರದಲ್ಲಿ ಅದನ್ನು ಅನುಸರಿಸಿ ನಾನುಗೌರಿ.ಕಾಮ್ ಕೂಡಾ ಅದನ್ನು ವರದಿ ಮಾಡಿತ್ತು. ಆದರೆ ನಂತರ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗೆ ಸ್ಫಷ್ಟೀಕರಣ ನೀಡಿದ ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್.ಪಿ. ಚರಣ್ “ತಂದೆ ಇನ್ನೂ ಐಸಿಯುವಿನಲ್ಲಿ ವೆಂಟಿಲೇಟರ್‌ನಲ್ಲೆ ಇದ್ದಾರೆ. ಅವರ ಸ್ಥಿತಿ ಸ್ಥಿರವಾಗಿ ಇನ್ನೂ ಹಾಗೆಯೆ ಇದೆ. ದಯವಿಟ್ಟು ವದಂತಿಗಳಿಂದ ದೂರವಿರಿ” ಎಂದು ಸ್ಪಷ್ಟೀಕರಣ ನೀಡಿದ್ದರು.
24/8/20 #SPB health update
Posted by Charan Sripathi Panditharadhyula on Sunday, August 23, 2020
ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ಮಾಧ್ಯಮಗಳಲ್ಲಿ ಬಂದ ಪ್ರಮುಖ ಸುದ್ದಿಯನ್ನು ನಮ್ಮ ಓದುಗರಿಗೂ ತಲುಪಿಸಬೇಕು ಎನ್ನುವ ಆಶಯದಲ್ಲಿ ನಾನುಗೌರಿ.ಕಾಮ್ ಅದನ್ನು ಸುದ್ದಿ ಮಾಡಿತ್ತು. ಆದರೆ ಅದು ಸುಳ್ಳು ಸುದ್ದಿ ಎಂದು ತಿಳಿದೊಡನೆ ಆ ಸುದ್ದಿಯನ್ನು ತಡೆಹಿಡಿದಿದೆ. ಆದ್ದರಿಂದ ಆಗಿರುವ ಪ್ರಮಾದಕ್ಕೆ ಈ ಮೂಲಕ ನಾನುಗೌರಿ.ಕಾಮ್ ವಿಷಾದಿಸುತ್ತದೆ. ಮುಂದೆ ಅಂತಹ ತಪ್ಪುಗಳು ಆಗದಂತೆ ಜಾಗರೂಕವಾಗಿರುತ್ತದೆ.
ಇದನ್ನೂ ಓದಿ: 120 ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ!
ವಿಡಿಯೋ ನೋಡಿ;


