Homeಮುಖಪುಟಸತತ 10ನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ

ಸತತ 10ನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ

- Advertisement -
- Advertisement -

ಕಳೆದ ಹತ್ತು ದಿನಗಳಿಂದ ಪೆಟ್ರೋಲ್ ಬೆಲೆಯು ಒಂಭತ್ತು ಬಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಟ್ವಿಟ್ಟರ್‌ನಲ್ಲಿ #petrolprice  ಟ್ರೆಂಡಿಂಗ್ ಆಗುತ್ತಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಲೀಟರಿಗೆ Rs 84.39 ರೂಗೆ ತಲುಪಿದೆ.

“ಯಾರಾದರೂ ಪೆಟ್ರೋಲ್ ಬೆಲೆ ಏರಿಕೆಯ ಕುರಿತು ಏನನ್ನಾದರೂ ಹೇಳುವುದು ಇದೆಯೇ? ಅಥವಾ ಅವರ ಮೇಲಿನ ಭಕ್ತಿಯಿಂದ ನಿಮ್ಮ ವಾಹನಗಳನ್ನು ಓಡಿಸುವುದನ್ನು ನಿಲ್ಲಿಸುತ್ತೀರೋ?” ಎಂದು ಗ್ರೀಷ್ಮಾ ಶುಕ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯನ್ನು ಖಂಡಿಸಿ ಬೀದಿಗಿಳಿದು ತೀವ್ರ ಪ್ರತಿಭಟನೆ ಮಾಡಿದ್ದ ಬಿಜೆಪಿಗರು ಇಂದು ಸಮ್ಮುನಿರುವುದೇಕೆ ಎಂದು ಹಲವರು ಸಾಮಾಜಿಕ ಮಾದ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆಸ್ ಬುಕ್ ನಲ್ಲಿ Gladson Almeida ಎನ್ನುವವರು ಪೆಟ್ರೋಲ್ ಬೆಲೆ ಏರಿಕೆಯ ಕುರಿತು ತಮ್ಮ ಬರಹವೊಂದನ್ನು ಹಂಚಿಕೊಂಡಿದ್ದರು. ಅದು ವೈರಲ್‌ ಆಗಿದ್ದು, ಹಲವರು ಅದನ್ನು ಹಂಚಿಕೊಂಡಿದ್ದಾರೆ.

“ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲಿಗೆ ಇವತ್ತು 45 ಡಾಲರ್. ಅಂದರೆ ಭಾರತಕ್ಕೆ ಪ್ರತೀ ಲೀಟರ್ ಪೆಟ್ರೋಲ್ Rs 21 ಕ್ಕೆ ಸಿಗುತ್ತೆ. ಅದಕ್ಕೆ ಸಂಸ್ಕರಣಾ ಹಾಗೂ ವಿತರಣಾ ವೆಚ್ಚ ಸೇರಿ ಪ್ರತೀ ಲೀಟರ್ ಪೆಟ್ರೋಲ್ ಗೆ Rs 29-30 ಆಗಬಹುದು. ಮಿಕ್ಕ ಐವತ್ತು ರೂಪಾಯಿಗಿಂತ ಹೆಚ್ಚಿನದ್ದು ತೆರಿಗೆ. ಈ ಐವತ್ತೊಂದು ರೂಪಾಯಿ ತೆರಿಗೆಯಲ್ಲಿ ಕೇಂದ್ರ ಸರಕಾರದ ಅಬಕಾರಿ ತೆರಿಗೆ ಪ್ರತೀ ಲೀಟರ್ ಪೆಟ್ರೋಲ್ ಮೇಲೆ Rs 32.98.” ಎಂದು ಫೇಸ್ ಬುಕ್ ಬರಹದಲ್ಲಿ ಹೇಳಿದ್ದಾರೆ.

‘ಯುಪಿಎ ಸರಕಾರದ ಆಡಳಿತವಿದ್ದ ಹತ್ತು ವರುಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಚಾ ತೈಲದ ಬೆಲೆ ಸರಾಸರಿಯಾಗಿ 80-90 ಡಾಲರ್ ಇತ್ತು. ಅಂದರೆ ಈಗಿನ ಬೆಲೆಯ ದುಪ್ಪಟ್ಟು. ಕೆಲವೊಮ್ಮೆ ಪ್ರತೀ ಬ್ಯಾರೆಲಿಗೆ 120 ಡಾಲರ್ ತನಕ ಹೋಗಿತ್ತು. ಆದರೆ ಈ ಇಡೀ ಅವಧಿಯಲ್ಲಿ ಕೇಂದ್ರ ಸರಕಾರ ವಿಧಿಸಿದ ಅತೀ ಹೆಚ್ಚಿನ ಅಬಕಾರಿ ಸುಂಕ Rs 9.50. ಮಾತ್ರ’ ಎಂದು ಹೇಳಿದ್ದಾರೆ.

“ಅದಾಗ್ಯೂ ಅಬ್ಬಾ ಏನ್ ಪ್ರತಿಭಟನೆ, ಎಂಥಾ ಉಗ್ರ ಗಲಾಟೆ. ಸ್ಮ್ರತಿ ಇರಾನಿ, ಮಾಳವಿಕಾ ಅವಿನಾಶ್, ಶೃತಿ, ತಾರಾ, ಕೆನಡಾದ ವಲಸೆ ಕಾರ್ಮಿಕ ಅಕ್ಷಯ್ ಕುಮಾರು, ಅನುಪಮ್ ಖೇರ್, ಜೂಹಿ ಚಾವ್ಲಾ, ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಎಂಥಾ ವೈವಿಧ್ಯಮಯ ಪ್ರತಿಭಟನೆ, ಭಾರತ್ ಬಂದ್, ರಾಸ್ತಾ ರೋಕೋಗಳು!”

‘ಆದರೆ ಈ ಸರಕಾರ ಅಬಕಾರಿ ಸುಂಕವನ್ನು ಮುನ್ನೂರೈವತ್ತು ಪಟ್ಟು ಹೆಚ್ಚಿಸಿದರೂ ಒಬ್ಬನೇ ಒಬ್ಬ ಕಮಕ್-ಕಿಮಕ್ ಅನ್ನಲ್ಲ. ಬೇರೇ ದಿನಗಳಲ್ಲಿ ಹತ್ತು ರುಪಾಯಿ ಸುಂಕ ಕೊಡುತ್ತಿದ್ದವರು ಇವತ್ತು ಅಚ್ಚೆ ದಿನ್‍ ಕಾಲದಲ್ಲಿ ಮೂವತ್ತೆರಡು ರೂಪಾಯಿ ಸುಂಕ ಕೊಟ್ಟೂ ನವರಂಧ್ರಗಳಲ್ಲಿ ಬೆಣೆ ಹಾಕಿ ಕುಳಿತುಕೊಂಡಿದ್ದಾರೆ. ನಮ್ಮಾಚೆ ಶೋಭಾ ಕರಂದ್ಲಾಜೆ ಪರ ಪ್ರಚಾರ ಮಾಡುತ್ತಿದ್ದ ಕೆಲವರು ಮೋದಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಹದಿನೈದು ರೂಪಾಯಿ ಪ್ರತೀ ಲೀಟರ್ ನಂತೆ ಸಿಗುತ್ತೆ ಎಂದವರು ಇವತ್ತು ತಮ್ಮ ಬೈಕು, ರಿಕ್ಷಾ ಮಾರಿ ಜೈ ಮೋದಿ, ಜೈ ಮೋದಿ ಎಂದು ಎರಡು ರೂಪಾಯಿಗಾಗಿ ಹತ್ತಾರು ವಾಲ್‍ಗಳಲ್ಲಿ ಕಕ್ಕ ಮಾಡಿ ಬಂದ ದುಡ್ಡಲ್ಲಿ ಸಂಜೆಯಾದೊಡನೆ ಪಿಂಟ್ ಹಾಗೂ ಬೀಫ್/ಪೋರ್ಕ್ ಚಿಲ್ಲಿ ಮೆಲ್ಲುತ್ತಿದ್ದಾರೆ” ಎಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇನ್ನು ಟ್ವಿಟರ್ ನಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, #petrolprice ಎಂದು ಟ್ರೆಂಡಿಂಗ್ ಆಗುತ್ತಿದೆ. ನೂರಾರು ಟ್ವಿಟರ್ ಬಳಕೆದಾರರು ಈ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಾಗ ಬಿಜೆಪಿಗರು ಪ್ರತಿಭಟನೆ ಮಾಡಿದ್ದ ಫೋಟೋಗಳನ್ನು ತೆಗೆದುಕೊಂಡು, ಈಗಿನ ಸಂದರ್ಭದಲ್ಲಿ ಸುಮ್ಮನಿರುವಂತೆ ಎಡಿಟ್ ಮಾಡಿ ಹಲವರು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಸತತ 15 ನೇ ದಿನವೂ ಏರಿಕೆ, 2 ವರ್ಷಗಳಲ್ಲೇ ಪೆಟ್ರೋಲ್ ಬೆಲೆ ಅಧಿಕ: ಬೆಂಗಳೂರಿನಲ್ಲಿ 81.44 ರೂ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...