Homeಮುಖಪುಟದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ಯತ್ನ: ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಶಾಸಕರ ಸಭೆ

ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ಯತ್ನ: ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಶಾಸಕರ ಸಭೆ

- Advertisement -
- Advertisement -

ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿಯಿಂದ ರಾಜ್ಯದ ಎಎಪಿ ಶಾಸಕರನ್ನು ಬೇಟೆಯಾಡುವ ಪ್ರಯತ್ನಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಎಲ್ಲಾ ಶಾಸಕರನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಸಭೆಗೆ ಕರೆದಿದ್ದಾರೆ.

ದೆಹಲಿಯ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ದಾಳಿಗೊಳಗಾದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಬಿಜೆಪಿಯು ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿದ ಕೆಲವೇ ಗಂಟೆಗಳ ಕೇಜ್ರಿವಾಲ್ ಅವರು ಈ ಸಭೆಯನ್ನು ಕರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಎಎಪಿ ಶಾಸಕರಿಗೆ ಪಕ್ಷವನ್ನು ತೊರೆಯಲು ಬಿಜೆಪಿ 20 ಕೋಟಿ ರೂ.ಗಳನ್ನು ಆಫರ್ ಮಾಡಿದೆ ಮತ್ತು ಅವರ ವಿರುದ್ಧ ಪಿತೂರಿ ಮಾಡಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಅನ್ನು ಬಳಸುತ್ತಿದೆ” ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಸೋಡಿಯಾ ಮೇಲೆ ಸಿಬಿಐ ರೈಡ್‌| 12 ಐಎಎಸ್‌ ಅಧಿಕಾರಿಗಳ ವರ್ಗಾವಣೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆದೇಶ

ಎಎಪಿ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ‘ರಾಜಕೀಯ ವ್ಯವಹಾರಗಳ ಸಮಿತಿ’(PAC)ಯು ರಾಜ್ಯದ ಎಎಪಿ ಶಾಸಕರನ್ನು ಬೇಟೆಯಾಡುವ ಪ್ರಯತ್ನಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.

“ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪಿಎಸಿ ಸಭೆ ನಡೆದಿದ್ದು, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದೆಹಲಿಯಲ್ಲಿ ಸರ್ಕಾರವನ್ನು ಬೀಳಿಸುವ ಪ್ರಯತ್ನದ ಕುರಿತು PAC ನಿರ್ಣಯವನ್ನು ಅಂಗೀಕರಿಸಿದೆ. ಸೋಡಿಯಾ ಅವರ ನಿವಾಸದಿಂದ ಯಾವುದೇ ದಾಖಲೆಗಳು, ಲೆಕ್ಕಕ್ಕೆ ಸಿಗದ ಹಣ, ಆಭರಣಗಳು ಪತ್ತೆಯಾಗಿಲ್ಲ” ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

“ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಅಸಂವಿಧಾನಿಕ ವಿಧಾನಗಳನ್ನು ಬಳಸುತ್ತಿದೆ. ಒಬ್ಬ ಎಎಪಿ ಶಾಸಕರೂ ಪಕ್ಷವನ್ನು ಬಿಡುವುದಿಲ್ಲ ಎಂದು ನಾವು ದೆಹಲಿಯ ಜನರಿಗೆ ಭರವಸೆ ನೀಡುತ್ತೇವೆ. ವಿರೋಧ ಪಕ್ಷದ ರಾಜ್ಯ ಸರ್ಕಾರಗಳನ್ನು ಉರುಳಿಸಲು ಮತ್ತು ಕೇಂದ್ರ ಏಜೆನ್ಸಿಗಳಿಗೆ ಬೆದರಿಕೆ ಹಾಕಲು ತಮ್ಮ ಸಮಯವನ್ನು ಬಳಸುವ ಬದಲು ಭಾರತದ ಜನರಿಗಾಗಿ ಕೆಲಸ ಮಾಡಲು ತಮ್ಮ ಶಕ್ತಿಯನ್ನು ಬಳಸಬೇಕೆಂದು ನಾವು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇವೆ” ಎಂದು ಸಂಜಯ್ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: ಎಎಪಿ ತೊರೆದರೆ ಸಿಬಿಐ ತನಿಖೆ ನಿಲ್ಲಿಸುತ್ತೇವೆ: ಸಿಸೋಡಿಯಾಗೆ ಬಿಜೆಪಿ ಆಮಿಷ?

ನಾಲ್ವರು ಎಎಪಿ ಶಾಸಕರಿಗೆ ಪಕ್ಷಕ್ಕೆ ಸೇರಲು ತಲಾ 20 ಕೋಟಿ ಆಫರ್ ನೀಡಲಾಗಿದೆ ಎಂದು ಪಕ್ಷದ ಸಂಸದ ಸಂಜಯ್ ಸಿಂಗ್ ಹೇಳಿದ ನಂತರ ಮನೀಶ್ ಸಿಸೋಡಿಯಾಸ್ ಅವರು ಬಿಜೆಪಿ ಕುದುರೆ ವ್ಯಾಪಾರ ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

“ಬಿಜೆಪಿಯ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣ ಸಚಿವರ ವಿರುದ್ಧ ನಕಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಎಎಪಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...