Homeಅಂತರಾಷ್ಟ್ರೀಯಎಲಾನ್ ಮಸ್ಕ್ ವಿರುದ್ಧ ವರದಿ ಪ್ರಕಟ: ಪತ್ರಕರ್ತರ ಟ್ವಿಟರ್ ಖಾತೆ ಅಮಾನತು

ಎಲಾನ್ ಮಸ್ಕ್ ವಿರುದ್ಧ ವರದಿ ಪ್ರಕಟ: ಪತ್ರಕರ್ತರ ಟ್ವಿಟರ್ ಖಾತೆ ಅಮಾನತು

- Advertisement -
- Advertisement -

ಟ್ವಿಟರ್‌ನ ನೂತನ ಮಾಲೀಕ ಎಲಾನ್ ಮಸ್ಕ್ ವಿರುದ್ಧ ವರದಿ ಪ್ರಕಟ ಮಾಡಿದ್ದಕ್ಕಾಗಿ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯ ಪತ್ರಕರ್ತರು ಸೇರಿದಂತೆ ಹಲವರ ಖಾತೆಗಳನ್ನು ಟ್ವಿಟರ್ ಅಮಾನತು ಮಾಡಿರುವುದು ಬೆಳಕಿಗೆ ಬಂದಿದೆ.

ಆ ಖಾತೆಗಳನ್ನು ಏಕೆ ಅಮಾನತುಗೊಳಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಎಲ್ಲಾ ಅಮಾನತುಗೊಂಡ ವರದಿಗಾರರು ಇತ್ತೀಚಿನ ತಿಂಗಳುಗಳಲ್ಲಿ ಟ್ವಿಟರ್‌ನ ಮಾಲೀಕ ಎಲಾನ್ ಮಸ್ಕ್ ಮತ್ತು ಟ್ವಿಟರ್‌ನ ಇತ್ತೀಚಿನ ಕಾರ್ಯನಿರ್ವಹಣೆಯ ಬಗ್ಗೆ ಬರೆದಿದ್ದರು ಎಂಬುದು ಖಚಿತವಾಗಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಗಾರ ರಯಾನ್ ಮ್ಯಾಕ್, ವಾಷಿಂಗ್ಟನ್ ಪೋಸ್ಟ್ ವರದಿಗಾರ ಡ್ರೂ ಹಾರ್ವೆಲ್, ಸಿಎನ್‌ಎನ್ ವರದಿಗಾರ ಡೋನಿ ಒ’ಸುಲ್ಲಿವಾನ್ (@ಡೋನಿ), ಮತ್ತು ಮಾಶಬಲ್ ವರದಿಗಾರ ಮ್ಯಾಟ್ ಬೈಂಡರ್ ಅವರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಸ್ವತಂತ್ರ ಪತ್ರಕರ್ತ ಆರನ್ ರೂಪರ್ ರವರ ಖಾತೆಯನ್ನು ಸಹ ಅಮಾನತುಗೊಳಿಸಲಾಗಿದೆ.

“ದಿ ನ್ಯೂಯಾರ್ಕ್ ಟೈಮ್ಸ್‌ನ ರಿಯಾನ್ ಮ್ಯಾಕ್ ಸೇರಿದಂತೆ ಹಲವಾರು ಪ್ರಮುಖ ಪತ್ರಕರ್ತರ ಟ್ವಿಟರ್ ಖಾತೆಗಳನ್ನು ಇಂದು ರಾತ್ರಿ ಅಮಾನತುಗೊಳಿಸಿರುವುದು ಪ್ರಶ್ನಾರ್ಹ ಮತ್ತು ದುರದೃಷ್ಟಕರವಾಗಿದೆ. ಏಕೆ ಹೀಗೆ ಮಾಡಲಾಗಿದೆ ಎಂಬುದನ್ನು ಟ್ವಿಟರ್ ನಮಗೆ ತಿಳಿಸಿಲ್ಲ. ಟ್ವಿಟರ್ ಈ ಕೂಡಲೇ ಎಲ್ಲಾ ಪತ್ರಕರ್ತರ ಖಾತೆಗಳನ್ನು ಮರುಸ್ಥಾಪಿಸಿ ಏಕೆ ಹೀಗೆ ಮಾಡಲಾಗಿತ್ತು ಎಂಬುದಕ್ಕೆ ಸೂಕ್ತ ವಿವರಣೆ ನೀಡುತ್ತದೆ ನಾವು ಭಾವಿಸುತ್ತೇವೆ” ಎದು ನ್ಯೂಯಾರ್ಕ್ ಟೈಮ್ಸ್ ವಕ್ತಾರರು ತಿಳಿಸಿದ್ದಾರೆ.

ಟ್ವಿಟರ್ ಅನ್ನು ಮಸ್ಕ್ ಕೊಂಡ ನಂತರ ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಮಾಸ್ಟೋಡಾನ್ ಎಂಬ ಸಾಮಾಜಿಕ ಜಾಲತಾಣದ ಖಾತೆಯನ್ನು ಸಹ ಟ್ವಿಟರ್ ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, “ವೈಯಕ್ತಿಕ ಮಾಹಿತಿಯನ್ನು ಹಂಚುವುದನ್ನು ನಿಬಂಧಿಸುವ ಡಾಕ್ಸಿಂಗ್‌ ನಿಯಮಗಳು ಪತ್ರಕರ್ತರಿಗೂ ಸಹ ಅನ್ವಯಿಸುತ್ತವೆ. ದಿನವೀಡಿ ನನ್ನ ವಿರುದ್ಧ ಬರೆದರೆ ತೊಂದರೆಯಿಲ್ಲ, ಆದರೆ ನಾನಿರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಮತ್ತು ನನ್ನ ಕುಟುಂಬವನ್ನು ಅಪಾಯಕ್ಕಿ ಸಿಲುಕಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ’ಟ್ವಿಟರ್ ಬ್ರಾಂಡ್ ಖರೀದಿಸಿದ ಮಸ್ಕ್’ ವಿದ್ಯಮಾನ ಮತ್ತು ಆತಂಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...