Homeಮುಖಪುಟಎಎಪಿ ತೊರೆದರೆ ಸಿಬಿಐ ತನಿಖೆ ನಿಲ್ಲಿಸುತ್ತೇವೆ: ಸಿಸೋಡಿಯಾಗೆ ಬಿಜೆಪಿ ಆಮಿಷ?

ಎಎಪಿ ತೊರೆದರೆ ಸಿಬಿಐ ತನಿಖೆ ನಿಲ್ಲಿಸುತ್ತೇವೆ: ಸಿಸೋಡಿಯಾಗೆ ಬಿಜೆಪಿ ಆಮಿಷ?

ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಮಾಡಿರುವ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ತಮ್ಮ ಬಳಿ ಆಡಿಯೊ ಇರುವುದಾಗಿ ಎಎಪಿ ತಿರುಗೇಟು ನೀಡಿದೆ.

- Advertisement -
- Advertisement -

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷ (ಎಎಪಿ) ತೊರೆದು, ಪಕ್ಷವನ್ನು  ಉರುಳಿಸಲು ಸಹಾಯ ಮಾಡಿದರೆ ಅವರ ವಿರುದ್ಧದ ಸಿಬಿಐ ಪ್ರಕರಣವನ್ನು ಕೈಬಿಡುವ ಪ್ರಸ್ತಾಪದೊಂದಿಗೆ ಬಿಜೆಪಿ ನಾಯಕರೊಬ್ಬರು ಸಿಸೋಡಿಯಾ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. “ಆ ಆಡಿಯೊ ರೆಕಾರ್ಡ್ ಸಿಸೋಡಿಯಾ ಅವರ ಬಳಿ ಇದೆ” ಎಂದು ಎಎಪಿ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

“ಈ ಹಂತದಲ್ಲಿ ನಾವು ಸಂಭಾಷಣೆಯನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ. ಆದರೆ ಸಮಯ ಬಂದಾಗ, ಎಎಪಿ ಫೋನ್ ಸಂಭಾಷಣೆಯನ್ನು ಬಿಡುಗಡೆ ಮಾಡುತ್ತದೆ” ಎಂದು ಎಎಪಿ ನಾಯಕರೊಬ್ಬರು ತಿಳಿಸಿದ್ದಾರೆ.

“ಈಗ ರದ್ದು ಮಾಡಲಾಗಿರುವ ಮದ್ಯದ ನೀತಿಗೆ ಸಂಬಂಧಿಸಿದ ಆರೋಪಗಳ ಮೇಲೆ ಸಿಬಿಐನಿಂದ ಆರೋಪ ಎದುರಿಸುತ್ತಿರುವ ನೀವು ಎಎಪಿ ತೊರೆದರೆ, ಬಿಜೆಪಿಯು ನಿಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕಲು ಮುಂದಾಗಿದೆ ಎಂಬ ಆಮಿಷ ನೀಡಲಾಗಿದೆ” ಎಂದು ಸಿಸೋಡಿಯಾ ಅವರೂ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನನಗೆ ಬಿಜೆಪಿಯಿಂದ ಸಂದೇಶ ಬಂದಿದೆ – ಆಪ್ ಒಡೆದುಹಾಕಿ ಬಿಜೆಪಿಗೆ ಸೇರಿಕೊಳ್ಳಿ. ನಿಮ್ಮ ವಿರುದ್ಧದ ಸಿಬಿಐ ಮತ್ತು ಇ.ಡಿ.ಯ ಎಲ್ಲಾ ಪ್ರಕರಣಗಳನ್ನು ತೆರವು ಮಾಡಲಾಗುವುದು ಎಂದು ಸೂಚಿಸಲಾಗಿದೆ” ಎಂದು ಸಿಬಿಐ ದಾಳಿ ನಡೆಸಿದ ಎರಡು ದಿನಗಳ ನಂತರ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಈ ಹೇಳಿಕೆಯನ್ನು ಬಿಜೆಪಿ ಬಲವಾಗಿ ತಳ್ಳಿಹಾಕಿದೆ. “ಇದು ಎಎಪಿಯ ತಂತ್ರಗಾರಿಕೆಯ ಒಂದು ಭಾಗವಾಗಿದೆಯಷ್ಟೇ. ಅವರ ಬಳಿ ಪುರಾವೆ ಇದ್ದರೆ ಬಿಡುಗಡೆ ಮಾಡಬೇಕು” ಎಂದು ಬಿಜೆಪಿ ನಾಯಕ ಪ್ರಮೋದ್ ಸ್ವಾಮಿ ಒತ್ತಾಯಿಸಿದ್ದಾರೆ.

ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಒತ್ತಿ ಹೇಳಿರುವ ಮನೀಶ್ ಸಿಸೋಡಿಯಾ, “ನೀವು ಏನು ಬೇಕಾದರೂ ಮಾಡಿ, ಹೆದರಲ್ಲ” ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

“ಬಿಜೆಪಿಗೆ ನನ್ನ ಪ್ರತ್ಯುತ್ತರವಿದು- ನಾನು ಮಹಾರಾಣಾ ಪ್ರತಾಪ್ ಮತ್ತು ರಜಪೂತರ ವಂಶಸ್ಥ. ನಾನು ಶಿರಚ್ಛೇದನಕ್ಕೂ ಸಿದ್ಧನಿದ್ದೇನೆ. ಆದರೆ ಪಿತೂರಿಗಾರರು ಮತ್ತು ಭ್ರಷ್ಟರ ಮುಂದೆ ಎಂದಿಗೂ ತಲೆಬಾಗುವುದಿಲ್ಲ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು. ನೀವು ಏನು ಬೇಕಾದರೂ ಮಾಡಿ” ಎಂದಿದ್ದಾರೆ.

ಸಿಸೋಡಿಯಾ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಮನೋಜ್ ತಿವಾರಿ, “ತಮ್ಮನ್ನು ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದಾರೆ.

“ತನ್ನನ್ನು ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಹಾರಾಣಾ ಪ್ರತಾಪ್ ಅವರು ಜನರಿಗೆ ಮದ್ಯಪಾನ ಮಾಡಿಸಿದ್ದರೆ? ನೀವು ಮೂಲೆ ಮೂಲೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದೀರಿ, ನೀವು ದೆಹಲಿಯ ಮಹಿಳೆಯರ ಕೂಗನ್ನು ನಿರ್ಲಕ್ಷಿಸುತ್ತಿದ್ದೀರಿ. ಮಹಾರಾಣಾ ಪ್ರತಾಪ್ ಒಂದು ಕಾಲದಲ್ಲಿ ಮಹಿಳೆಯರಿಗಾಗಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದರು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಸಕಲೇಶಪುರ: ದಲಿತರ ಮೇಲೂ ಪ್ರಕರಣ ದಾಖಲು; ಬಜರಂಗದಳ ವಿರುದ್ಧ ಬೀದಿಗಿಳಿದ ಭೀಮ ಪುತ್ರರು

ಮಹಾರಾಣಾ ಪ್ರತಾಪ್ ಅವರನ್ನು ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಯೊಂದಿಗೆ ಹೋಲಿಸಬಹುದೇ? ಅಂತಹ ಭ್ರಷ್ಟರಿಗೆ ಆಪ್‌ನಲ್ಲಿ ಮಾತ್ರ ಸ್ಥಾನ ಸಿಗುತ್ತದೆ. ಮಾಡಿರುವ ತಪ್ಪಿಗೆ ಶಿಕ್ಷೆಯಾಗುತ್ತದೆ. ಮನೀಶ್ ಸಿಸೋಡಿಯಾ ಅವರಂತಹ ತಪ್ಪಿತಸ್ಥರನ್ನು ಶಿಕ್ಷಿಸಲು ಬಿಜೆಪಿ ಕೆಲಸ ಮಾಡುತ್ತದೆ. ಬಿಜೆಪಿಯಲ್ಲಿ ಭ್ರಷ್ಟರಿಗೆ ಸ್ಥಾನವಿಲ್ಲ” ಎಂದು ತಿಳಿಸಿದ್ದಾರೆ.

ಎಎಪಿ ನಾಯಕ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿ, “ಬಿಜೆಪಿಯು ಪ್ರತಿಪಕ್ಷಗಳ ನಾಯಕರ ಮೇಲೆ ತನಿಖೆಯ ಮೂಲಕ ಒತ್ತಡ ಹೇರಿದ ಮೂರು ಡಜನ್ ಉದಾಹರಣೆಗಳಿವೆ. ಒತ್ತಡ ಎದುರಿಸಿದ ರಾಜಕಾರಣಿಗಳು ಬಿಜೆಪಿಯ ಮಾತು ಕೇಳಿದ ಬಳಿಕವಷ್ಟೇ ಪ್ರಕರಣಗಳನ್ನು ಕೈಬಿಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರನ್ನು ತಮ್ಮ ರಾಜಕೀಯ ಗುರು ಎಂದಿರುವ ಸಿಸೋಡಿಯಾ, “ನಾನು ಎಂದಿಗೂ ಅವರಿಗೆ ಮೋಸ ಮಾಡುವುದಿಲ್ಲ. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಪ್ರಸ್ತಾಪವಿಟ್ಟು ಕರೆದಿರುವ ಬಿಜೆಪಿಗೆ ನನ್ನ ಸಂದೇಶವಿದು. ಅರವಿಂದ್ ಕೇಜ್ರಿವಾಲ್ ನನ್ನ ರಾಜಕೀಯ ಗುರು, ನಾನು ಅವರಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ನಾನು ಸಿಎಂ ಆಗಲು ಇಲ್ಲಿಗೆ ಬಂದಿಲ್ಲ. ದೇಶದ ಪ್ರತಿ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕು, ಆಗ ಮಾತ್ರ ಭಾರತವು ನಂಬರ್ 1 ದೇಶವಾಗುತ್ತದೆ ಎಂಬುದು ನನ್ನ ಕನಸಾಗಿದೆ. ಕೇಜ್ರಿವಾಲ್ ಅವರು ಮಾತ್ರ ಇಡೀ ದೇಶದಲ್ಲಿ ಈ ಕೆಲಸವನ್ನು ಮಾಡಲು ಸಾಧ್ಯ” ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...