ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರವನ್ನು ಯೂಟ್ಯೂಬ್‌ನಲ್ಲಿ ಅತಿಹೆಚ್ಚು ಸಂಖ್ಯೆಯ ಜನರು ಡಿಸ್ ಲೈಕ್ ಮಾಡಿರುವ ಬೆನ್ನಲ್ಲೇ ಟ್ವಿಟರ್ ನಲ್ಲಿ #StudentsDislikePMModi ಹ್ಯಾಸ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.
ನಿನ್ನೆ ಮನ್ ಕಿ ಬಾತ್ ಪ್ರಸಾರವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹೊತ್ತಲ್ಲಿ, ಲಕ್ಷಾಂತರ ವಿದ್ಯಾರ್ಥಿಗಳ, ಹಲವು ರಾಜ್ಯಗಳ ವಿರೋಧದ ನಡುವೆಯೂ NEET ಮತ್ತು JEE ಪರೀಕ್ಷೆಗಳನ್ನು ನಡೆಸಲು ಕೇಂದ್ರ ತಯಾರಿ ನಡೆಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
#StudentsDislikePMModi ಎಂದು ಟ್ವಿಟರ್ ನಲ್ಲಿ ಆರಂಭವಾಗಿರುವ ಅಭಿಯಾನ ಟ್ರೆಂಡಿಂಗ್ ನಲ್ಲಿ 3ನೇ ಸ್ಥಾನದಲ್ಲಿದೆ. ಸುಮಾರು 6,60,000 ಟ್ವಿಟರ್ ಬಳಕೆದಾರರು ಈ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಜೆ ಎನ್ ಯು ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷರಾದ ಸುಚೇತ ಡಿ, “ಹಲವು ವಿದ್ಯಾರ್ಥಿಗಳು ಪ್ರವೇಶಾತಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರ ಅರ್ಥ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇಕು ಎಂಬುದಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈಗ ಲಕ್ಷಾಂತರ ವಿದ್ಯಾರ್ಥಿಗಳು #StudentsDislikePMModi ಎಂದು ಹೇಳುತ್ತಿದ್ದಾರೆ. ಇದರ ಅರ್ಥ ಮೋದಿಯವರು ರಾಜಿನಾಮೆ ಕೊಡಬೇಕು ಎಂಬುದಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
They said many students have downloaded admit card for NEET-JEE. It means students want to give exam in Pandemic. Now millions are saying #StudentsDislikePMModi. It should mean that the PM should resign now.
— sucheta de (@sucheta_ml) August 31, 2020
ಇದನ್ನೂ ಓದಿ: ಜೆಇಇ-ನೀಟ್ ಪರೀಕ್ಷೆ ಮುಂದೂಡಿ: ಗ್ರೇಟಾ ಥನ್‌ಬರ್ಗ್ ಸೇರಿ ಹಲವರ ಒತ್ತಾಯ
ಮೊನಿಸ್ ಖಾನ್ ಎನ್ನುವವರು “ಇದು ಯುವಪಡೆಯ ಶಕ್ತಿ. ಯುವಜನರು ನಿಮ್ಮಂಥವರನ್ನು ಎಂದಿಗೂ ಇಷ್ಟಪಡುವುದಿಲ್ಲ” ಎಂದು ಬರೆದು, ಜಗತ್ತಿನ ಅತಿ ಹೆಚ್ಚು ಡಿಸ್ ಲೈಕ್ ಪಡೆದ ಪ್ರಧಾನಿ ವೀಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
This is the power of youth and youth doesn’t like you anymore
#StudentsDislikePMModi pic.twitter.com/0MhhbmPQW5— Monis khan ⚪️ (@kha_nMonis) August 31, 2020
ಮನ್ ಕಿ ಬಾತ್ ಕಾರ್ಯಕ್ರಮವನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಅಲ್ಲೆ ಅತ್ಯಧಿಕ ಜನ ಡಿಸ್‌ಲೈಕ್ ಮಾಡುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದಾರೆ. ಈ ವರದಿ ಬರೆಯುವ ವೇಳೆಗೆ ಆ ವಿಡಿಯೋಗೆ 71,000 ಜನರು ಲೈಕ್ ಒತ್ತಿದರೆ, 4,85,000 ಜನರು ಡಿಸ್‌ಲೈಕ್ ಒತ್ತುವ ಮೂಲಕ ಮೋದಿಯವರನ್ನು ಮುಜುಗರಕ್ಕೀಡುಮಾಡಿದ್ದಾರೆ.
ಇನ್ನು ಪ್ರಧಾನಿ ಕಛೇರಿಯ ಅಧಿಕೃತ ಯೂಟ್ಯೂಬ್‌ನಲ್ಲಿ 37,000 ಜನ ಇಷ್ಟಪಟ್ಟರೆ 70,000 ಜನ ತಿರಸ್ಕರಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ವೇದಿಕೆಗಳಲ್ಲಿಯೂ ಮೋದಿಯವರ ಮನ್‌ಕಿ ಬಾತ್‌ಗೆ ಲೈಕ್‌ಗಳಿಗಿಂತ ಡಿಸ್‌ಲೈಕ್‌ಗಳೇ ಅಧಿಕವಾಗಿವೆ.

ಡಿಸ್ಲೈಕ್ ನೊಂದಿಗೆ, “ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದ್ದು, ಮನ್ ಕಿ ಬಾತ್ ಬಿಟ್ಟು, ಕಾಮ್ ಕಿ ಬಾತ್ ಹೇಳಿ ಎಂಬ ಕಾಮೆಂಟ್‌ಗಳು ಬಂದಿವೆ. ಗೊಂಬೆಗಳ ಬದಲು ಸಮಸ್ಯೆಗಳ ಬಗ್ಗೆ ಮಾತನಾಡಿ, ಪರಿಹಾರ ನೀಡಿ” ಎಂಬಂತ ಕಾಮೆಂಟ್‌ಗಳು ಬರತೊಡಗಿದವು.
ಯೂಟ್ಯೂಬ್‌ನಲ್ಲಿ ಕಾಮೆಂಟ್‌ಗಳಲ್ಲಿ ಪ್ರಶ್ನೆಗಳು ಹೆಚ್ಚಾಗತೊಡಗಿದಂತೆ ಬಿಜೆಪಿಯು ತಕ್ಷಣ ಕಾಮೆಂಟ್‌ಗಳನ್ನು ಸಾರ್ವಜನಿಕರಿಗೆ ಕಾಣಿಸದಂತೆ ಮರೆಮಾಚಿದೆ. ಜನ ಅದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮಾತ್ರ ಪರೀಕ್ಷೆ ವಿರೋಧಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ನಿನ್ನೆಯಿಂದ ನಡೆಯುತ್ತಿರುವ ಈ ಡಿಸ್‌ಲೈಕ್ ಪ್ರಕ್ರಿಯೇ ಇಡೀ ದೇಶದ ಜನರು ಕೂಡ ಪರೀಕ್ಷೆ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಗೆ ಭಾರೀ ವಿರೋಧ ಇದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ನಾಳೆಯಿಂದ ಜೆಇಇ ಪರೀಕ್ಷೆ ಆರಂಭವಾಗಲಿದೆ.
ಇದನ್ನೂ ಓದಿ: ಜೆಇಇ-ನೀಟ್: ಪರೀಕ್ಷೆ ಮುಂದೂಡುವಂತೆ 6 ರಾಜ್ಯಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ


