Homeಮುಖಪುಟಜೆಇಇ-ನೀಟ್ ಪರೀಕ್ಷೆ ಮುಂದೂಡಿ: ಗ್ರೇಟಾ ಥನ್‌ಬರ್ಗ್ ಸೇರಿ ಹಲವರ ಒತ್ತಾಯ

ಜೆಇಇ-ನೀಟ್ ಪರೀಕ್ಷೆ ಮುಂದೂಡಿ: ಗ್ರೇಟಾ ಥನ್‌ಬರ್ಗ್ ಸೇರಿ ಹಲವರ ಒತ್ತಾಯ

'ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಮಾಡುತ್ತಿರುವುದು ಸರಿಯಲ್ಲ. ಅದರಲ್ಲೂ ಕೊರೊನಾ ಮತ್ತು ಪ್ರವಾಹದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ನಿರ್ಧಾರ ತಪ್ಪು. ಹಾಗಾಗಿ ಈ ವಿದ್ಯಾರ್ಥಿಗಳ ಪರ ನಾನೂ ದನಿಯೆತ್ತುತ್ತೇನೆ' ಎಂದು ಗ್ರೇಟಾ ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಪರಿಸರ ಕಾರ್ಯಕರ್ತೆ ಮತ್ತು ಜಾಗತಿಕ ಐಕಾನ್ ಗ್ರೆಟಾ ಥನ್‌ಬರ್ಗ್, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಜೆಇಇ-ನೀಟ್ ಪರೀಕ್ಷೆ ಮುಂದೂಡಿ #PostponeJEE_NEETinCOVID ಆಂದೋಲನಕ್ಕೆ ಬೆಂಬಲ ಸೂಚಿಸಿ ದನಿ ಎತ್ತಿದ್ದಾರೆ.

“ನಾನು #PostponeJEE_NEETinCOVID ಗೆ ಬೆಂಬಲ ನೀಡುತ್ತೇನೆ” ಎಂದು ಟ್ವಿಟರ್‌ನಲ್ಲಿ 4.1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಗ್ರೇಟಾ ಥನ್‌ಬರ್ಗ್ ಬರೆದುಕೊಂಡಿದ್ದಾರೆ.

ಅಲ್ಲದೆ ಈಗಾಗಲೇ #MODIJI_POSTPONEJEENEET ಹ್ಯಾಶ್‌ಟ್ಯಾಗ್ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ 4 ನೇ ಸ್ಥಾನದಲ್ಲಿದೆ.

‘ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಮಾಡುತ್ತಿರುವುದು ಸರಿಯಲ್ಲ. ಅದರಲ್ಲೂ ಕೊರೊನಾ ಮತ್ತು ಪ್ರವಾಹದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ನಿರ್ಧಾರ ತಪ್ಪು. ಹಾಗಾಗಿ ಈ ವಿದ್ಯಾರ್ಥಿಗಳ ಪರ ನಾನೂ ದನಿಯೆತ್ತುತ್ತೇನೆ’ ಎಂದು ಗ್ರೇಟಾ ಟ್ವೀಟ್ ಮಾಡಿದ್ದಾರೆ.

ಇವರ ಟ್ವೀಟ್ ಅನ್ನು 50 ಸಾವಿರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದು, ಸುಮಾರು 37 ಸಾವಿರ ರೀಟ್ವೀಟ್ ಗಳು ದಾಖಲಾಗಿವೆ.

ಈ ಆಂಧೋಲನಕ್ಕೆ ಪಕ್ಷಾತೀತವಾಗಿ ಹಲವಾರು ಬೆಂಬಲ ನಿಡಿದ್ದಾರೆ. ದೇಶದಾದ್ಯಂತ ಕೊರೊನಾ ಮತ್ತು ಪ್ರವಾಹದ ತೀವ್ರ ಒತ್ತಡವಿರುವುದರಿಮದ ಪೋಷಕರು ಮತ್ತು ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕುರಿತು ಪ್ರಧಾನಮಂತ್ರಿಗೆ ಪತ್ರವೊಂದನ್ನು ಬರೆದು ಈ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.

“ವಿದ್ಯಾರ್ಥಿಗಳು ಮತ್ತು ಪೋಷಕರು ಅಪಾರ ಮಾನಸಿಕ ಒತ್ತಡದಲ್ಲಿದ್ದಾರೆ. ಸಾರ್ವಜನಿಕ ಸಾರಿಗೆಯ ಮೇಲಿನ ಪ್ರಸ್ತುತ ನಿರ್ಬಂಧಗಳನ್ನು ಪರಿಗಣಿಸಿ, ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ಎಲ್ಲಾ ಆಕಾಂಕ್ಷಿಗಳೂ ಪ್ರವೇಶಿಸಲಾಗುವುದಿಲ್ಲ” ಎಂದು ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಾಜಿ ಕೇಂದ್ರ ಶಿಕ್ಷಣ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ದನಿಯೆತ್ತಿದ್ದಾರೆ.

ಆದರೆ ಶಿಕ್ಷಣ ಸಚಿವಾಲಯವು ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಹೇಳಿದೆ. ಇವೆರಡೂ ಸೆಪ್ಟೆಂಬರ್ ಮೊದಲಾರ್ಧದಲ್ಲಿ ನಡೆಯಲಿವೆ. ಈ ವಿಷಯದ ಕುರಿತಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, “ಜೀವನವನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದೆ.

ಜೆಇಇ, ನೀಟ್ ಪರೀಕ್ಷೆಗಳನ್ನು ಮೇ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದಾಗ ರದ್ದುಪಡಿಸಲಾಯಿತು. ಆದರೆ ಆಗ ಒಟ್ಟು ಕೊರೊನಾ ವೈರಸ್ ಪ್ರಕರಣಗಳು ಕಡಿಮೆ ಇದ್ದವು. ಆಗಸ್ಟ್ 8 ರಿಂದ ಭಾರತವು ಕೊರೊನಾ ವೈರಸ್ ಅಂಕಿಅಂಶಗಳಲ್ಲಿ ವಿಶ್ವದ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ದಾಖಲಿಸುತ್ತಿದೆ. ಈಗಾಗಲೇ 31 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಸಾವಿನ ಸಂಖ್ಯೆ 58,390 ಕ್ಕೆ ಏರಿದೆ. ಈಗ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಸರ್ಕಾರ ನಿರ್ಧರಿಸಿದೆ.


ಇದನ್ನೂ ಓದಿ: ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆ ಮುಂದೂಡುವ ಮನವಿ ತಿರಸ್ಕರಿಸಿದ ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...