ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಅಡುಗೆ ಅನಿಲ ಖರೀದಿಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಿರುವುದಾಗಿ ಸರ್ಕಾರ ಹೇಳಿದೆ.
ಅಷ್ಟೇ ಅಲ್ಲದೆ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್‌ಗೆ 100 ರೂಪಾಯಿ ಹೆಚ್ಚಿಸಲಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 2019 ರ ಜುಲೈನಲ್ಲಿ ಸುಮಾರು 494.35 ರೂಪಾಯಿ ಇದ್ದದ್ದು ಈ ವರ್ಷದ ಜುಲೈನಲ್ಲಿ 594 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಜಿಎಸ್‌ಟಿ ಪರಿಹಾರ: ಸಾಲ ಪಡೆಯುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಸಲಹೆ
ಇನ್ನು ಆರ್ಥಿಕ ಕುಸಿತದಲ್ಲಿರುವ ಕೇಂದ್ರ ಸರ್ಕಾರ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮತ್ತು ಸಬ್ಸಿಡಿ ಸ್ಥಗಿತದಿಂದಾಗಿ ಸರ್ಕಾರಕ್ಕೆ 18,000 ಕೋಟಿ ರೂಪಾಯಿಯಿಂದ 22,000 ಕೋಟಿ ರೂಪಾಯಿ ಉಳಿತಾಯವಾಗುತ್ತದೆ ಎಂದಿದೆ.
ಆದರೆ ಸರ್ಕಾರವು ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆಯ ಸುಮಾರು 8 ಕೋಟಿ ಗ್ರಾಹಕರಿಗೆ ಉಚಿತ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತ್ತು. ಹಾಗಾಗಿ ಅಂತಹ ಕುಟುಂಬಗಳಿಗೆ ಖರೀದಿಸಿದ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡುವುದಾಗಿ ಹೇಳಿದೆ. ಆದರೆ, ಯಾವ ರೀತಿಯ ಮಾನದಂಡದ ಮೇಲೆ ಹಣ ವಾಪಸ್ ನೀಡುತ್ತದೆ ಎಂಬುದೇ ಗೊಂದಲವಾಗಿದೆ.
ಸಬ್ಸಿಡಿ ನಿಲ್ಲಿಸುವುದಾಗಿ ಈಗ ತಿಳಿಸಿದ್ದರೂ ಸಹ ಕಳೆದ ನಾಲ್ಕು ತಿಂಗಳಿಂದ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಗ್ರಾಹಕರಿಗೆ ಯಾವುದೇ ಸಬ್ಸಿಡಿ ನೀಡಿಲ್ಲ. ಹೀಗಾಗಿ ಖಾತೆಗಳಿಗೆ ನಗದು ವರ್ಗಾವಣೆ ಮಾಡದಿರುವ ಬಗ್ಗೆ ಗ್ರಾಹಕರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಭಾರತದಲ್ಲಿ ಸುಮಾರು 27.76 ಕೋಟಿ ಎಲ್‌ಪಿಜಿ ಗ್ರಾಹಕರು ಇದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧದ ಗಂಭೀರ ಪ್ರಕರಣಗಳನ್ನು ಹಿಂಪಡೆದ ಸರ್ಕಾರ: ಹಲವರಿಂದ ಖಂಡನೆ


