Homeಮುಖಪುಟತೆಲಂಗಾಣದ ಬಿಜೆಪಿ ಶಾಸಕನನ್ನು ನಿಷೇಧಿಸಿದ ಫೇಸ್‌ಬುಕ್

ತೆಲಂಗಾಣದ ಬಿಜೆಪಿ ಶಾಸಕನನ್ನು ನಿಷೇಧಿಸಿದ ಫೇಸ್‌ಬುಕ್

ಶಾಸಕ ಟಿ. ರಾಜಾ ಸಿಂಗ್, ಮುಸ್ಲಿಮರನ್ನು ದೇಶದ್ರೋಹಿಗಳು ಹಾಗೂ ಭಾರತದ ರೋಹಿಂಗ್ಯಾ ನಿರಾಶ್ರಿತರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಫೇಸ್‌‌ಬುಕ್‌ನಲ್ಲಿ ಬರೆದಿದ್ದರು.

- Advertisement -
- Advertisement -

ಫೇಸ್‌ಬುಕ್ ರಾಜಕೀಯ ವಿಷಯದಲ್ಲಿ ಬಿಜೆಪಿ ಪರವಾಗಿದೆ ಎಂಬ ಬಗ್ಗೆ ಭಾರತದಲ್ಲಿ ಹೆಚ್ಚುತ್ತಿರುವ ವಿವಾದದ ಮಧ್ಯೆ ತನ್ನ ದ್ವೇಷ ಭಾಷಣ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಫೇಸ್‌‌ಬುಕ್‌ ಇಂಡಿಯಾ ನಿಷೇಧಿಸಿದೆ.

ಮುಸ್ಲಿಮರನ್ನು ದೇಶದ್ರೋಹಿಗಳೆಂದು ಕರೆದಿದ್ದ ಮತ್ತು ಭಾರತದ ರೋಹಿಂಗ್ಯಾ ನಿರಾಶ್ರಿತರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬರೆದಿದ್ದ ರಾಜಾಸಿಂಗ್ ಪೋಸ್ಟ್‌‌ಗಳನ್ನು ತೆಗೆದುಹಾಕುವ ವಿಚಾರವನ್ನು ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥೆ ಅಂಖಿ ದಾಸ್ ವಿರೋಧಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಆಗಸ್ಟ್ 14 ರಂದು ವರದಿ ಮಾಡಿದ ನಂತರ ಇದು ಪ್ರಾರಂಭವಾಯಿತು.

ಇದನ್ನೂ ಓದಿ: ’ಪ್ರಧಾನಿಯನ್ನು ಫೇಸ್‌‌ಬುಕ್ ನಿಂದಿಸುತ್ತಿದೆ’ ಎಂದು ಜುಕರ್‌‌ಬರ್ಗ್‌ಗೆ ಪತ್ರ ಬರೆದ ಕೇಂದ್ರ ಸರ್ಕಾರ

ತನ್ನ ಲೇಖನಕ್ಕೆ ಪ್ರತಿಕ್ರಿಯೆಗಾಗಿ ಪತ್ರಿಕೆ ಫೇಸ್‌ಬುಕ್ ‌ಅನ್ನು ಸಂಪರ್ಕಿಸಿದ ನಂತರ ಬಿಜೆಪಿ ನಾಯಕರ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಿಂದ ಅಳಿಸಲಾಗಿದೆ ಎಂದು ವಾಲ್‌ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

“ನಮ್ಮ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ರಾಜಾ ಸಿಂಗ್ ಅವರನ್ನು ಫೇಸ್‌ಬುಕ್‌ನಿಂದ ನಿಷೇಧಿಸಿದ್ದೇವೆ” ಎಂದು ಫೇಸ್‌ಬುಕ್‌ ವಕ್ತಾರರು ದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ತಿಳಿಸಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಜ ಸಿಂಗ್ ಅವರ ಕನಿಷ್ಠ ಐದು ಪ್ರೋಫೈಲ್‌ಗಳು “ಇದು ಈಗ ಲಭ್ಯವಿಲ್ಲ” ಎಂಬ ಸಂದೇಶವನ್ನು ತೋರಿಸುತ್ತಿದೆ.

ಇದನ್ನೂ ಓದಿ: ಫೇಸ್‌ಬುಕ್‌ ಇಂಡಿಯಾ ಸಿಇಓ ಅಂಖಿ ದಾಸ್ ವಿರುದ್ದ ಸಿಡಿದೆದ್ದ ಸಹೋದ್ಯೋಗಿಗಳು!

ಕಳೆದ ತಿಂಗಳು, ರಾಜ ಸಿಂಗ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯನ್ನು 2018 ರಲ್ಲಿ ಹ್ಯಾಕ್ ಮಾಡಿ ನಿರ್ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತ ತಮ್ಮ ಬಳಿ ಅಧಿಕೃತ ಯೂಟ್ಯೂಬ್ ಮತ್ತು ಟ್ವಿಟರ್ ಖಾತೆ ಮಾತ್ರ ಇದೆ ಎಂದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಖಾತೆಗಳ ಮೂಲಕ ತಾವು ಎಂದಿಗೂ ಯಾವುದೇ ಧ್ವೇಷವನ್ನುಂಟು ಮಾಡುವ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಬುಧವಾರ ಫೇಸ್‌ಬುಕ್‌ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರನ್ನು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಶ್ನಿಸಿದೆ.

“ಫೇಸ್ಬುಕ್ ಮುಕ್ತ ಮತ್ತು ಪಾರದರ್ಶಕ ವೇದಿಕೆಯಾಗಲು ಬದ್ಧವಾಗಿದೆ” ಎಂದು ವಕ್ತಾರರು ಸಭೆಯ ನಂತರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಓದಿ: ಯುಪಿಯ ಅರ್ಚಕನನ್ನು ಮುಸ್ಲಿಮರು ಕೊಂದಿದ್ದಾರೆ ಎಂಬುವುದು ಸುಳ್ಳು ಸುದ್ದಿ; ಫ್ಯಾಕ್ಟ್‌‌ಚೆಕ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...