ಜನಪ್ರಿಯ ಮೊಬೈಲ್ ಗೇಮ್ PUBG ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿದ ಎರಡು ದಿನಗಳ ನಂತರ, ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್ ಶೀಘ್ರದಲ್ಲೇ ‘ಫಿಯರ್‌ಲೆಸ್ ಮತ್ತು ಯುನೈಟೆಡ್: ಗಾರ್ಡ್ಸ್ (FAU-G)’ ಎಂಬ ಹೊಸ ಮಲ್ಟಿಪ್ಲೇಯರ್ ಮಿಡ್-ಕೋರ್ ಗೇಮಿಂಗ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಕೇವಲ ಆಪ್‌ಗಳನ್ನು ನಿಷೇಧಿಸಿದರೆ ಸಾಲದು; ಚೀನಾಕ್ಕೆ ತಕ್ಕ ಉತ್ತರ ನೀಡಬೇಕು: ಮಮತಾ ಬ್ಯಾನರ್ಜಿ
ಎನ್‌ಕೋರ್ ಪ್ರಕಾರ, ಈ ಗೇಮ್ ಭಾರತೀಯ ಭದ್ರತಾ ಪಡೆ ಎದುರಿಸುತ್ತಿರುವ ದೇಶೀಯ ಮತ್ತು ವಿದೇಶಿ ಬೆದರಿಕೆಗಳ ನೈಜ ಸನ್ನಿವೇಶಗಳನ್ನು ಆಧರಿಸಿದೆ. ಐದು ಜನ ತಂಡವಾಗಿ ಇದನ್ನು ಆಡಬಹುದಾಗಿದೆ.
ಪ್ರಸ್ತುತ FAU:G ಅಕ್ಟೋಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದ್ದು, ಗೇಮ್‌ನ ಮೊದಲ ಲೆವೆಲ್ ಗಾಲ್ವಾನ್ ಕಣಿವೆಯ ಹಿನ್ನಲೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಗೇಮ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೇಮ್ ಪ್ರಾರಂಭದ ಬಗ್ಗೆ ಟ್ವೀಟ್ ಮಾಡಿದ್ದು, ಆಟದಿಂದ ಬರುವ ನಿವ್ವಳ ಆದಾಯದ 20% ವನ್ನು ’ಭಾರತ್ ಕೆ ವೀರ್ ಪ್ರತಿಷ್ಠಾನ’ಕ್ಕೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: PUBG ಸೇರಿದಂತೆ 118 ಜನಪ್ರಿಯ ಚೀನಿ ಅಪ್ಲಿಕೇಷನ್ ನಿಷೇಧಿಸಿದ ಭಾರತ
ಪ್ರಧಾನಿ ನರೇಂದ್ರ ಆತ್ಮನಿರ್ಭರ್ ಆಂದೋಲನವನ್ನು ಬೆಂಬಲಿಸಿ, FAU-G ಆಕ್ಷನ್ ಗೇಮ್‌ಅನ್ನು ಪ್ರಸ್ತುತಪಡಿಸಲು ಹೆಮ್ಮೆಯೆನಿಸುತ್ತದೆ. ಮನರಂಜನೆಯ ಜೊತೆಗೆ, ಆಟಗಾರರು ನಮ್ಮ ಸೈನಿಕರ ತ್ಯಾಗದ ಬಗ್ಗೆಯೂ ಕಲಿಯುತ್ತಾರೆ. ಗಳಿಸಿದ ನಿವ್ವಳ ಆದಾಯದ 20% ಅನ್ನು “ಭಾರತ್‌ಕೀವೀರ್ ಟ್ರಸ್ಟ್‌ಗೆ” ನೀಡಲಾಗುವುದು ಎಂದು ನಟ ಟ್ವೀಟ್ ಮಾಡಿದ್ದಾರೆ.
Supporting PM @narendramodi’s AtmaNirbhar movement, proud to present an action game,Fearless And United-Guards FAU-G. Besides entertainment, players will also learn about the sacrifices of our soldiers. 20% of the net revenue generated will be donated to @BharatKeVeer Trust #FAUG pic.twitter.com/Q1HLFB5hPt
— Akshay Kumar (@akshaykumar) September 4, 2020
ಎನ್ಕೋರ್ ಪ್ರಕಾರ, “ಭಾರತ್ ಕೆ ವೀರ್ ಟ್ರಸ್ಟ್ ಅನ್ನು ಅಕ್ಷಯ್ ಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿದ್ದಾಗಿದ್ದು, ಭಾರತದ ಸಶಸ್ತ್ರ ಪಡೆಗಳ ಹುತಾತ್ಮರ ಕುಟುಂಬಗಳನ್ನು ಬೆಂಬಲಿಸಲು ಗೃಹ ಸಚಿವಾಲಯವು ಇದನ್ನು ಜಾರಿಗೆ ತಂದಿದೆ” ಎಂದು ಹೇಳಿದೆ.
2018 ರಲ್ಲಿ ದಯಾನಿಧಿ ಎಂಜಿ ಮತ್ತು ವಿಶಾಲ್ ಗೊಂಡಾಲ್ ಸ್ಥಾಪಿಸಿದ ಎನ್‌ಕೋರ್ ಬೆಂಗಳೂರು ಮೂಲದ ಮೊಬೈಲ್ ಗೇಮಿಂಗ್ ಸ್ಟಾರ್ಟ್ಅಪ್ ಕಂಪೆನಿಯಾಗಿದೆ.
ಇದನ್ನೂ ಓದಿ: ತೆಲಂಗಾಣದ ಬಿಜೆಪಿ ಶಾಸಕನನ್ನು ನಿಷೇಧಿಸಿದ ಫೇಸ್‌ಬುಕ್


