2018 ಜನವರಿ 1ರಂದು ಪುಣೆಯ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರೆಂಬ ಆರೋಪದ ಮೇಲೆ ಕೊಲ್ಕೊತ್ತಾದ IISERನ ಪ್ರೊ.ಪಾರ್ಥೋಸಾರಥಿ ರಾಯ್ ಅವರಿಗೆ ಸೆಪ್ಟೆಂಬರ್ 10ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ನೋಟೀಸ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾರ್ಥೋಸಾರಥಿ ರಾಯ್, “ಆ ಘಟನೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ತನಿಖಾ ಸಂಸ್ಥೆ ಇತರ ಪ್ರಗತಿಪರರ ಜೊತೆಗೆ ನನಗೂ ಹಿಂಸೆ ನೀಡಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ನಾನು ಪುಣೆಯ ಭೀಮಾಕೋರೆಗಾಂವ್ ಸಂಸ್ಮರಣಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಆದರೂ ನನಗೆ ನೊಟೀಸ್ ಜಾರಿ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
ಅಪರಾಧ ಪ್ರಕ್ರಿಯಾ ಸಂಹಿತೆ(CrPC) ಸೆಕ್ಷನ್ 160ರ ಅಡಿಯಲ್ಲಿ ಪ್ರಕಣದ ಸಾಕ್ಷಿ ಎಂದು ನನಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಮನ್ಸ್ ನೀಡಿದೆ. ನನಗೆ ಈ ಪ್ರಕರಣದ ಜೊತೆ ಸಂಪರ್ಕ ಇಲ್ಲ ಎಂದು ಹೇಳಿದ್ದಾರೆ.
ಪತ್ರಿಕೆಗಳಲ್ಲಿ ಸುದ್ದಿ ಓದುವುದಕ್ಕೂ ಮೊದಲು ಭೀಮಾ ಕೋರೆಗಾಂವ್ ಎಲ್ಲಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಕಿರುಕುಳದ ಖೈದಿಗಳ ಐಕ್ಯ ಸಮಿತಿಯ ಪಶ್ಚಿಮಬಂಗಾಳ ಘಟಕದ ಸಂಚಾಲಕನೆಂಬ ಕಾರಣಕ್ಕೆ ಪುಣೆಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ


